ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ತೀರ್ಪು ಕಾಯ್ದಿರಿಸಿದ ರೋಸ್ ಅವೆನ್ಯೂ ಕೋರ್ಟ್

ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ತೀರ್ಪು ಕಾಯ್ದಿರಿಸಿದ ರೋಸ್ ಅವೆನ್ಯೂ ಕೋರ್ಟ್

ನವದೆಹಲಿ : 2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಾಮಾನ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ರೊಸ್ ಅವೆನ್ಯೂ ಕೋರ್ಟ್ ಗುರುವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ. ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶರಾದ ನಿಯಯ್ ಬಿಂದು ಎರಡು ದಿನಗಳ ಕಾಲ ಈ ಪ್ರಕರಣದ ಸುಧೀರ್ಘ ವಿಚಾರಣೆ ಆಲಿಸಿ ಇಂದು ಈ ಪ್ರಕರಣದ ಆದೇಶಗಳನ್ನು ಕಾಯ್ದಿರಿಸಿದರು.

ವಿಚಾರಣೆ ವೇಳ ವಾದ ಮಂಡಿಸಿದ ಇಡಿ ಪರ ವಕೀಲ ಎಎಸ್‌ಜಿ ಎಸ್‌ವಿ ರಾಜು, 2021-22ರ ದೆಹಲಿ ಮದ್ಯ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಲೋಪದೋಷಗಳನ್ನು ಮಾಡಲು ಕಿಕ್‌ಬ್ಯಾಕ್‌ ಪಡೆಯಲಾಗಿದೆ. ಈ ಹಣವನ್ನು ಗೋವಾ ಚುನಾವಣೆಗೆ ಬಳಸಿದೆ. ಇದಕ್ಕೆ ಪೂಕರವಾದ ಎಲ್ಲ ಸಾಕ್ಷಿಗಳು ಇಡಿ ಬಳಿ ಇದೆ. ಗೋವಾದಲ್ಲಿ ಅರವಿಂದ್ ಕೇಜ್ರಿವಾಲ್ ತಂಗಿದ್ದ ಹೋಟೇಲ್ ಬಾಡಿಗೆ ಒಂದು ಲಕ್ಷ ರೂಪಾಯಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬರು ಪಾವತಿಸಿದ್ದಾರೆ. ಅವರು ಕಿಕ್ ಬ್ಯಾಕ್ ರೂಪದಲ್ಲಿ ಬಂದ ಸುಮಾರು 40 ಕೋಟಿಯನ್ನು ಪಡೆದುಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಇನ್ನಷ್ಟು ಸಾಕ್ಷಿಗಳಿದೆ.

ಇಡಿ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ, ತಮ್ಮ ತನಿಖೆಯಲ್ಲಿ ಅಮರ್ಪಕ ದಾಖಲೆಗಳನ್ನು ಇಟ್ಟುಕೊಂಡಿದೆ. ಕಿಕ್ ಬ್ಯಾಕ್ ರೂಪದಲ್ಲಿ ಪಡೆದ ಹಣ ಪೊಟೊಗಳು ಲಭ್ಯವಿದೆ. ಇದೇ ಹಣವನ್ನು ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿದೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೂಬೈಲ್ ಪಾಸ್‌ವರ್ಡ್ ನೀಡಲು ನಿರಾಕರಿಸಿತ್ತಿದ್ದಾರೆ. ಹೀಗಾಗೀ ಪ್ರತಿಕೂಲವಾದ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಅವರು ತಮ್ಮ ಫೋನ್ ಪಾಸ್‌ವರ್ಡ್ ಹೇಳಿದರೆ ಇನ್ನಷ್ಟು ಮಾಹಿತಿ ಸಿಗಲಿದೆ.

ಕೇಜ್ರಿವಾಲ್ ಅವರು ವೈಯಕ್ತಿಕವಾಗಿ ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೂ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಬಹುದು. ಅವರು ನೇರವಾಗಿ ಅಪರಾಧ ಮಾಡದೇ ಇರಬಹುದು ಆದರೆ ಎಎಪಿ ಪಕ್ಷದ ವ್ಯವಹಾರಗಳಿಗೆ ಜವಾಬ್ದಾರರಾಗಿರುತ್ತಾರೆ ಒಂದು ವೇಳೆ ಎಎಪಿ ಅಪರಾಧದಲ್ಲಿ ತಪ್ಪಿತಸ್ಥರಾಗಿದ್ದರೆ ಸೆಕ್ಷನ್ 70 ಪಿಎಂಎಲ್‌ಎ ಪ್ರಕಾರ ಅವರು ತಪ್ಪಿತಸ್ಥರಾಗುತ್ತಾರೆ ಎಂದು ಎಸ್‌ವಿ ರಾಜು ವಾದಿಸಿದರು.

ಇಡಿ ಆರೋಪಕ್ಕೆ ಅರವಿಂದ್ ಕೇಜ್ರಿವಾಲ್ ಪರ ವಕೀಲ ವಿಕ್ರಮ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿದರು. ED ಒಂದು ಸ್ವತಂತ್ರ ಸಂಸ್ಥೆಯೇ ಅಥವಾ ಕೆಲವು ರಾಜಕೀಯ ಯಜಮಾನರ ಕೈಯಲ್ಲಿ ಆಟವಾಡುತ್ತಿದೆಯೇ? ED ಊಹೆಯ ಆಧಾರದ ಮೇಲೆ ತನ್ನ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಅವರು ಇನ್ನೂ ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ ಅದು ಅಂತ್ಯವಿಲ್ಲದ ತನಿಖೆಯಾಗುತ್ತದೆ.

ಅವರು ಹೇಳುತ್ತಾರೆ ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ಅದಕ್ಕಾಗಿಯೇ ಪಕ್ಷವು ಮಾಡಿದ ಪ್ರತಿಯೊಂದಕ್ಕೂ ಜವಾಬ್ದಾರಾಗುತ್ತಾರೆ ಎಂದು. ಇದು ಊಹಾಪೋಹಗಳು, ಪೂರ್ವಾಗ್ರಹ. ಸಾಕ್ಷಿ ಇಲ್ಲದೇ ₹ 100 ಕೋಟಿ ಲಂಚ ಸ್ವೀಕರಿಸಲಾಗಿದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ ಎಂದು ಚೌಧರಿ ವಾದಿಸಿದರು. ಕೇಜ್ರಿವಾಲ್ ಅವರನ್ನು ವಿಶೇಷ ವ್ಯಕ್ತಿ ಎಂದು ಪರಿಗಣಿಸಬೇಡಿ. ಅವರು ವಿಶೇಷ ವ್ಯಕ್ತಿ ಎಂದು ಪರಿಗಣಿಸಲು ಬಯಸುವುದಿಲ್ಲ ಆದರೆ ದಯವಿಟ್ಟು ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಿ ಎಂದು ಮನವಿ ಮಾಡಿದರು.

Previous Post
NEET ವಿವಾದ: ಸಮಿತಿ ರಚನೆ
Next Post
3,133 ಮೆಟ್ರಿಕ್ ಟನ್ ಕುಸುಬೆ ಬೆಳೆ ಬೆಂಬಲ ಬೆಲೆಗೆ ಖರೀದಿಸಲು ಕೇಂದ್ರ ಒಪ್ಪಿಗೆ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ

Recent News