ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಬಿಗ್ ರಿಲೀಫ್ ಅಬಕಾರಿ ಪ್ರಕರಣದಲ್ಲಿ ಜಾಮೀನು ಮಂಜೂರು ಇಂದು ತಿಹಾರ್ ಜೈಲಿನಿಂದ ಬಿಡುಗಡೆ ಸಾಧ್ಯತೆ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಬಿಗ್ ರಿಲೀಫ್ ಅಬಕಾರಿ ಪ್ರಕರಣದಲ್ಲಿ ಜಾಮೀನು ಮಂಜೂರು ಇಂದು ತಿಹಾರ್ ಜೈಲಿನಿಂದ ಬಿಡುಗಡೆ ಸಾಧ್ಯತೆ

ನವದೆಹಲಿ : 2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ದೆಹಲಿಯ ರೊಸ್ ಅವೆನ್ಯೂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ. ಎರಡು ದಿನಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿದ ಬಳಿಕ ನ್ಯಾ. ನಿಯಾಯ್ ಬಿಂದು ಜಾಮೀನು ನೀಡಿದರು.

ಆದೇಶ ಪ್ರಕಟಿಸಿದ ಬಳಿಕ ಜಾಮೀನು ಬಾಂಡ್‌ಗೆ ಸಹಿ ಮಾಡುವುದನ್ನು 48 ಗಂಟೆಗಳ ಕಾಲ ಮುಂದೂಡಬಹುದೇ ಎಂದು ಇಡಿ ಮನವಿ ಮಾಡಿತು ಆದ್ದರಿಂದ ಆದೇಶವನ್ನು ಮೇಲ್ಮನವಿ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಕೇಳಿತು. ಆದರೆ ನ್ಯಾಯಾಧೀಶರು ಆದೇಶಕ್ಕೆ ತಡೆ ನೀಡಲು ನಿರಾಕರಿಸಿದರು. ಒಂದು ಲಕ್ಷ ರೂಪಾಯಿ ಮೌಲ್ಯದ ಜಾಮೀನು ಬಾಂಡ್ ಅನ್ನು ನಾಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಎಂದು ಕೇಜ್ರಿವಾಲ್ ಪರ ವಕೀಲರಿಗೆ ಸೂಚಿಸಿದರು.

ಕೆಲವು ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ 2021-22ರ ದೆಹಲಿ ಅಬಕಾರಿ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಲೋಪದೋಷಗಳನ್ನು ಬಿಡಲಾಗಿತ್ತು ಎನ್ನುವ ಆರೋಪದ ಮೇಲೆ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ವಿಚಾರಣೆ ಬಳಿಕ ಅವರನ್ನು ನ್ಯಾಯಂಗ ಬಂಧನಕ್ಕೆ ನೀಡಲಾಗಿತ್ತು.

ಜಾಮೀನು ನೀಡುವ ಮುನ್ನ ನಡೆದ ವಿಚಾರಣೆಯಲ್ಲಿ ವಾದ ಮಂಡಿಸಿದ ಇಡಿ ಪರ ವಕೀಲ ಎಎಸ್‌ಜಿ ಎಸ್‌ವಿ ರಾಜು, 2021-22ರ ದೆಹಲಿ ಮದ್ಯ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಲೋಪದೋಷಗಳನ್ನು ಮಾಡಲು ಕಿಕ್‌ಬ್ಯಾಕ್‌ ಪಡೆಯಲಾಗಿದೆ. ಈ ಹಣವನ್ನು ಗೋವಾ ಚುನಾವಣೆಗೆ ಬಳಸಿದೆ. ಇದಕ್ಕೆ ಪೂಕರವಾದ ಎಲ್ಲ ಸಾಕ್ಷಿಗಳು ಇಡಿ ಬಳಿ ಇದೆ. ಗೋವಾದಲ್ಲಿ ಅರವಿಂದ್ ಕೇಜ್ರಿವಾಲ್ ತಂಗಿದ್ದ ಹೋಟೇಲ್ ಬಾಡಿಗೆ ಒಂದು ಲಕ್ಷ ರೂಪಾಯಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬರು ಪಾವತಿಸಿದ್ದಾರೆ. ಅವರು ಕಿಕ್ ಬ್ಯಾಕ್ ರೂಪದಲ್ಲಿ ಬಂದ ಸುಮಾರು 40 ಕೋಟಿಯನ್ನು ಪಡೆದುಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಇನ್ನಷ್ಟು ಸಾಕ್ಷಿಗಳಿದೆ.

ಇಡಿ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ, ತಮ್ಮ ತನಿಖೆಯಲ್ಲಿ ಅಮರ್ಪಕ ದಾಖಲೆಗಳನ್ನು ಇಟ್ಟುಕೊಂಡಿದೆ. ಕಿಕ್ ಬ್ಯಾಕ್ ರೂಪದಲ್ಲಿ ಪಡೆದ ಹಣ ಪೊಟೊಗಳು ಲಭ್ಯವಿದೆ. ಇದೇ ಹಣವನ್ನು ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿದೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೂಬೈಲ್ ಪಾಸ್‌ವರ್ಡ್ ನೀಡಲು ನಿರಾಕರಿಸಿತ್ತಿದ್ದಾರೆ. ಹೀಗಾಗೀ ಪ್ರತಿಕೂಲವಾದ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಅವರು ತಮ್ಮ ಫೋನ್ ಪಾಸ್‌ವರ್ಡ್ ಹೇಳಿದರೆ ಇನ್ನಷ್ಟು ಮಾಹಿತಿ ಸಿಗಲಿದೆ.

ಕೇಜ್ರಿವಾಲ್ ಅವರು ವೈಯಕ್ತಿಕವಾಗಿ ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೂ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಬಹುದು. ಅವರು ನೇರವಾಗಿ ಅಪರಾಧ ಮಾಡದೇ ಇರಬಹುದು ಆದರೆ ಎಎಪಿ ಪಕ್ಷದ ವ್ಯವಹಾರಗಳಿಗೆ ಜವಾಬ್ದಾರರಾಗಿರುತ್ತಾರೆ ಒಂದು ವೇಳೆ ಎಎಪಿ ಅಪರಾಧದಲ್ಲಿ ತಪ್ಪಿತಸ್ಥರಾಗಿದ್ದರೆ ಸೆಕ್ಷನ್ 70 ಪಿಎಂಎಲ್‌ಎ ಪ್ರಕಾರ ಅವರು ತಪ್ಪಿತಸ್ಥರಾಗುತ್ತಾರೆ ಎಂದು ಎಸ್‌ವಿ ರಾಜು ವಾದಿಸಿದರು.

ಇಡಿ ಆರೋಪಕ್ಕೆ ಅರವಿಂದ್ ಕೇಜ್ರಿವಾಲ್ ಪರ ವಕೀಲ ವಿಕ್ರಮ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿದರು. ED ಒಂದು ಸ್ವತಂತ್ರ ಸಂಸ್ಥೆಯೇ ಅಥವಾ ಕೆಲವು ರಾಜಕೀಯ ಯಜಮಾನರ ಕೈಯಲ್ಲಿ ಆಟವಾಡುತ್ತಿದೆಯೇ? ED ಊಹೆಯ ಆಧಾರದ ಮೇಲೆ ತನ್ನ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಅವರು ಇನ್ನೂ ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ ಅದು ಅಂತ್ಯವಿಲ್ಲದ ತನಿಖೆಯಾಗುತ್ತದೆ.

ಅವರು ಹೇಳುತ್ತಾರೆ ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ಅದಕ್ಕಾಗಿಯೇ ಪಕ್ಷವು ಮಾಡಿದ ಪ್ರತಿಯೊಂದಕ್ಕೂ ಜವಾಬ್ದಾರಾಗುತ್ತಾರೆ ಎಂದು. ಇದು ಊಹಾಪೋಹಗಳು, ಪೂರ್ವಾಗ್ರಹ. ಸಾಕ್ಷಿ ಇಲ್ಲದೇ ₹ 100 ಕೋಟಿ ಲಂಚ ಸ್ವೀಕರಿಸಲಾಗಿದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ ಎಂದು ಚೌಧರಿ ವಾದಿಸಿದರು. ಕೇಜ್ರಿವಾಲ್ ಅವರನ್ನು ವಿಶೇಷ ವ್ಯಕ್ತಿ ಎಂದು ಪರಿಗಣಿಸಬೇಡಿ. ಅವರು ವಿಶೇಷ ವ್ಯಕ್ತಿ ಎಂದು ಪರಿಗಣಿಸಲು ಬಯಸುವುದಿಲ್ಲ ಆದರೆ ದಯವಿಟ್ಟು ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಿ ಎಂದು ಮನವಿ ಮಾಡಿದ್ದರುಮ ವಾದ ಪ್ರತಿ ವಾದ ಆಲಿಸಿದ ಬಳಿಕ ಕೋರ್ಟ್ ಜಾಮೀನು ನೀಡಿದ್ದು ಇಡಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿದೆ.

Previous Post
ನೀಟ್‌ ಪರೀಕ್ಷೆ ಹಿಂದಿನ ದಿನ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದೆ ಬಂಧಿತ ವಿದ್ಯಾರ್ಥಿಯಿಂದ ಪೊಲೀಸರ ಮುಂದೆ ತಪ್ಪೊಪ್ಪಿಗೆ
Next Post
ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News