ಪ್ಯಾರಿಸ್ ಒಲಂಪಿಕ್ ಶೂಟಿಂಗ್ ಸ್ಪರ್ಧೆಗೆ ಬಿಜೆಪಿ ಶಾಸಕಿ ಆಯ್ಕೆ
ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಷ್ಯಾಡ್ನಲ್ಲಿ ಪದಕ ಜಯಿಸಿರುವ ಶೂಟರ್ ಶ್ರೇಯಸಿ ಸಿಂಗ್ ಜುಲೈ 26 ರಿಂದ ಪ್ಯಾರಿಸ್ನಲ್ಲಿ ಶುರುವಾಗಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ
ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ ಶ್ರೇಯಸಿ ಸಿಂಗ್ ಅವರು ಈ ಹಿಂದೆ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್ ಶೂಟಿಂಗ್ನಲ್ಲಿ ಪದಕ ಗೆದ್ದಿದ್ದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ
ಈ ಹಿಂದೆ ಒಲಿಂಪಿಕ್ಸ್ಗೆ ಆಯ್ಕೆಯ ಮೊದಲ ಪಟ್ಟಿಯಲ್ಲಿ ಶ್ರೇಯಸಿ ಹೆಸರಿರಲಿಲ್ಲ. ಆದರೆ ಟೋಕಿಯೊ ಒಲಿಂಪಿಯನ್ ಮನು ಭಾಕರ್ ಮಹಿಳೆಯರ 10 ಮೀ. ಪಿಸ್ತೂಲ್ ಮತ್ತು 25 ಮೀ. ಪಿಸ್ತೂಲ್ ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು.
ಹೀಗಾಗಿ ಒಂದು ಕೋಟಾವನ್ನು ಮರುಹಂಚಿಕೆ ಮಾಡಬಹುದಾಗಿತ್ತು. ಇದನ್ನು ಟ್ರ್ಯಾಪ್ ಶೂಟರ್ಗಾಗಿ ಬದಲಾಯಿಸಲಾಗಿದ್ದು, ಈ ಕೋಟಾದಲ್ಲಿ ಶ್ರೇಯಸಿ ಅವರನ್ನು ಆಯ್ಕೆ ಮಾಡಲಾಯಿತು.