ಆರೋಗ್ಯ ಹದಗೆಟ್ಟರು ಉಪವಾಸ ಸತ್ಯಾಗ್ರಹ ಬಿಡುವುದಿಲ್ಲ – ಸಚಿವೆ ಅತಿಶಿ

ಆರೋಗ್ಯ ಹದಗೆಟ್ಟರು ಉಪವಾಸ ಸತ್ಯಾಗ್ರಹ ಬಿಡುವುದಿಲ್ಲ – ಸಚಿವೆ ಅತಿಶಿ

ನವದೆಹಲಿ : ಸಮರ್ಪಕ ನೀರಿನ ಪೂರೈಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಸಚಿವೆ ಅತಿಶಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಲೋಕನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ‌. ಅವರನ್ನು ಪರೀಕ್ಷಿಸಿದ್ದು, ಅನಿರ್ದಿಷ್ಟ ಉಪವಾಸ ಸತ್ಯಾಗ್ರಹದಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದ್ದು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದದ್ದಾರೆ‌.

ವೈದ್ಯರ ಸಲಹೆ ತಿರಸ್ಕರಿಸಿರುವ ಸಚಿವೆ ಅತಿಶಿ ಆರೋಗ್ಯ ಹದಗೆಟ್ಟಿದ್ದರೂ, ಹರಿಯಾಣವು ದೆಹಲಿಯ ನ್ಯಾಯಯುತವಾದ ನೀರನ್ನು ಬಿಡುಗಡೆ ಮಾಡುವವರೆಗೆ ಅನಿರ್ದಿಷ್ಟ ಉಪವಾಸವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ನನ್ನ ರಕ್ತದೊತ್ತಡ ಮತ್ತು ಸಕ್ಕರೆಯ ಮಟ್ಟವು ಕುಸಿಯುತ್ತಿದೆ ಮತ್ತು ನನ್ನ ತೂಕವು ಕಡಿಮೆಯಾಗಿದೆ. ಇದು ದೀರ್ಘಾವಧಿಯಲ್ಲಿ ನನ್ನ ದೇಹದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಈ ಎಚ್ಚರಿಕೆಗಳ ಹೊರತಾಗಿಯೂ ನಾನು ಆಸ್ಪತ್ರೆಗೆ ದಾಖಲಾಗುವುದಿಲ್ಲ ಎಂದರು‌. ನನ್ನ ದೇಹವು ಎಷ್ಟೇ ನರಳಿದರೂ ಹರಿಯಾಣ ನೀರು ಬಿಡುವವರೆಗೆ ನಾನು ಉಪವಾಸವನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈ ನಡುವೆ ದೆಹಲಿ ಕ್ಯಾಬಿನೆಟ್ ಮಂತ್ರಿಗಳು ಜಂಗ್ಪುರದ ಉಪವಾಸ ಸತ್ಯಾಗ್ರಹ ಸ್ಥಳದಲ್ಲಿ ಸಭೆ ನಡೆಸಿದರು ಮತ್ತು ಪರಿಹಾರವನ್ನು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿದರು. ಎಎಪಿ ಅತಿಶಿ ಅವರ ಉಪವಾಸವನ್ನು ಬೆಂಬಲಿಸಿ ಕ್ಯಾಂಡಲ್‌ಲೈಟ್ ಮೆರವಣಿಗೆಯನ್ನು ಮಾಡಲು ಘೋಷಿಸಲಾಯಿತು.

ನಾವು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಎಲ್ಲಾ ಅಧಿಕಾರಿಗಳನ್ನು ವಜೀರಾಬಾದ್, ಬವಾನಾಕ್ಕೆ ಫ್ಲೋ ಮೀಟರ್‌ಗಳ ರೀಡಿಂಗ್‌ಗಳನ್ನು ನೋಡಲು ಮತ್ತು ಅಲ್ಲಿ ನದಿಯ ನೀರಿನ ಮಟ್ಟವನ್ನು ನೋಡಲು ಆಹ್ವಾನಿಸುತ್ತೇವೆ. ಹರಿಯಾಣ ಬಿಡುಗಡೆ ಮಾಡಿದ ನೀರಿಗೆ ಡೇಟಾ ಲಭ್ಯವಿದೆ ನೀರಿನ ಲಭ್ಯತೆ ಹೇಗೆ ಕಡಿಮೆಯಾಗಿದೆ ಎಂದು ನೋಡಬಹುದು ಪರಿಸರ ಸಚಿವ ಗೋಪಾಲ್ ರೈ ಹೇಳಿದರು.

Previous Post
ಲೋಕಸಭೆ ಅಧಿವೇಶನದ ಮೊದಲ ದಿನವೇ ಪ್ರತಿಭಟನೆ ಮೊದಲ 15 ದಿನಗಳಲ್ಲಿ 10 ವೈಫಲ್ಯತೆ ಕಂಡ ಸರ್ಕಾರ – ರಾಗಾ
Next Post
ಪ್ರಧಾನಿ ಮೋದಿ ಸೇರಿ ರಾಜ್ಯದ 28 ಸಂಸದರಿಂದ ಪ್ರಮಾಣವಚನ ಸ್ವೀಕಾರ

Recent News