ಪ್ರಧಾನಿ ಮೋದಿ ಸೇರಿ ರಾಜ್ಯದ 28 ಸಂಸದರಿಂದ ಪ್ರಮಾಣವಚನ ಸ್ವೀಕಾರ

ಪ್ರಧಾನಿ ಮೋದಿ ಸೇರಿ ರಾಜ್ಯದ 28 ಸಂಸದರಿಂದ ಪ್ರಮಾಣವಚನ ಸ್ವೀಕಾರ

ನವದೆಹಲಿ : ನೂತನವಾಗಿ ಸಂಸದರಾಗಿ ಆಯ್ಕೆಯಾಗಿದ್ದ ಸದಸ್ಯರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ 28 ಮಂದಿ ಸೇರಿ 280 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಬಾಕಿ ಉಳಿದ 264 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಧಾನಿ ನರೇಂದ್ರ ಮೋದಿ ಬಳಿಕ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಖಟ್ಟರ್, ಮನೋಹರ್ ಲಾಲ್ ಖಟ್ಟರ್, ಪಿಯೋಷ್ ಗೊಯೇಲ್, ಧರ್ಮೇಂದ್ರ ಪ್ರಧಾನ್ ಸೇರಿ ಎಲ್ಲ ಕೇಂದ್ರ ಸಚಿವ ಸಂಪುಟದ ಎಲ್ಲ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಸಚಿವ ಸಂಪುಟದ ಬಳಿಕ ರಾಜ್ಯವಾರು ಸಂಸದರಿಗೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಪ್ರಮಾಣ ವಚನವನ್ನು ಬೊಧಿಸಿದರು.

ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಮೊದಲು ದೇವರ ಹೆಸರಿನಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಕರ್ನಾಟಕದ ಸರದಿಯಲ್ಲಿ ಎಲ್ಲ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೋಳಿ ಸಂವಿಧಾನದ ಮೇಲೆ ಪ್ರಮಾಣ ಸ್ವೀಕರಿಸಿದರೆ, ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗೆಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಸಂಸದರ ತೇಜಸ್ವಿ ಸೂರ್ಯ ರೇಶ್ಮೆ ಪಂಚೆ ಶರ್ಟು ತೊಟ್ಟು ಸಾಂಪ್ರದಾಯಿಕ. ಉಡುಗೆಯಲ್ಲಿ ಬಂದು ಪ್ರಮಾಣ ವಚನ ಸ್ವೀಕರಿಸಿದರು. ದಕ್ಷಿಣ ಕನ್ನಡ ಸ್ವೀಕರ್ ಕ್ಯಾ.ಬ್ರಿಜೇಶ್ ಚೌಟಾ ತುಳು ನಾಡಿನ ದೇವ ದೇವರುಗಳ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಡಾ. ಮಂಜುನಾಥ್ ಮತ್ತು ಬಿ.ವೈ ರಾಘವೇಂದ್ರ ಮತದಾರರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಾಕಿ ಉಳಿದ ಎಲ್ಲ ಸಂಸದರು ಕನ್ನಡದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

Previous Post
ಆರೋಗ್ಯ ಹದಗೆಟ್ಟರು ಉಪವಾಸ ಸತ್ಯಾಗ್ರಹ ಬಿಡುವುದಿಲ್ಲ – ಸಚಿವೆ ಅತಿಶಿ
Next Post
ಸಂಸತ್ತಿನಲ್ಲಿ ಸಂವಿಧಾನ ಪ್ರತಿ ಹಿಡಿದು ಇಂಡಿಯಾ ಬ್ಲಾಕ್ ನಾಯಕರ ಪ್ರತಿಭಟನೆ

Recent News