ಅನಾರೋಗ್ಯದ ಬಳಿಕ ಉಪವಾಸ ಸತ್ಯಾಗ್ರಹ ಕೈಬಿಟ್ಟ ಸಚಿವೆ ಅತಿಶಿ

ಅನಾರೋಗ್ಯದ ಬಳಿಕ ಉಪವಾಸ ಸತ್ಯಾಗ್ರಹ ಕೈಬಿಟ್ಟ ಸಚಿವೆ ಅತಿಶಿ

ನವದೆಹಲಿ : ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟು ಆಸ್ಪತ್ರೆ ದಾಖಲಾದ ಬಳಿಕ ಸಚಿವೆ ಅತಿಶಿ ಕಳೆದ ಐದು ದಿನಗಳ ಹಿಂದೆ ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರವನ್ನು ಅಂತ್ಯಗೊಳಿಸಿದ್ದಾರೆ ಎಂದು ಆಪ್ ಪಕ್ಷದ ಮೂಲಗಳು ಹೇಳಿವೆ. ಕಳೆದ ರಾತ್ರಿ ಆರೋಗ್ಯದ ಹದಗೆಟ್ಟ ಹಿನ್ನಲೆ ಅವರನ್ನು ಎನ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿಶಿಯವರ ರಕ್ತದಲ್ಲಿನ ಸಕ್ಕರೆ ಮಟ್ಟವು ಮಧ್ಯರಾತ್ರಿ 43 ಕ್ಕೆ ಕುಸಿದಿದೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಸಲಹೆ ಮೇರೆಗೆ ಅವರು ಉಪವಾಸ ಅಂತ್ಯಗೊಳಿಸಿದ್ದಾರೆ. ಈ ನಡುವೆ ಎಎಪಿ ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ ಮತ್ತು ದೆಹಲಿಯ ನೀರಿನ ಬಿಕ್ಕಟ್ಟಿನ ವಿಷಯವನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳೊಂದಿಗೆ ಪ್ರಸ್ತಾಪಿಸುತ್ತೇವೆ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು ಸೃಷ್ಟಿಸುವ ಮೂಲಕ ದಿನಕ್ಕೆ 100 ಮಿಲಿಯನ್ ಗ್ಯಾಲನ್ (ಎಂಜಿಡಿ) ನೀರು ಬಿಡುಗಡೆ ಮಾಡದ ಹರಿಯಾಣ ಸರ್ಕಾರದ ವಿರುದ್ಧ ಅತಿಶಿ ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಹರಿಯಾಣ ದೆಹಲಿಯ ನ್ಯಾಯಯುತ ಪಾಲನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ

Previous Post
ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟಿಸುತ್ತಿರುವುದು ವಿಪರ್ಯಾಸ: ಬಸವರಾಜ ಬೊಮ್ಮಾಯಿ
Next Post
ಇಂದು ಸ್ಪೀಕರ್ ಸ್ಥಾನಕ್ಕೆ ಚುನಾವಣೆ ಓಂಬಿರ್ಲಾ, ಕೋಡಿಕುನ್ನಿಲ್ ಸುರೇಶ್ ಕಣದಲ್ಲಿ

Recent News