ಪ್ರಜಾಪ್ರಭುತ್ವದ ತಾಯಿಯಾಗಿರಲು ನಾವು ಹೆಮ್ಮೆಪಡಬೇಕು ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ಪ್ರಜಾಪ್ರಭುತ್ವದ ತಾಯಿಯಾಗಿರಲು ನಾವು ಹೆಮ್ಮೆಪಡಬೇಕು ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ನವದೆಹಲಿ: 18ನೇ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸಂಸತ್ತಿನಲ್ಲಿ ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊದಲ ಬಾರಿಗೆ ಮಾತನಾಡಿದರು. ಭಾಷಣದಲ್ಲಿ ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಎರಡನೇ ಅವಧಿ ಸ್ಪೀಕರ್ ಆದ ಓಂ ಬಿರ್ಲಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಳಿಕ ಓಂ ಬಿರ್ಲಾ ಅವರು ಅತ್ಯುತ್ತಮವಾಗಿ ಕೆಲಸ ಮಾಡಲಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಚುನಾವಣಾ ಆಯೋಗಕ್ಕೂ ಅಭಿನಂದನೆಗಳನ್ನು ಸಲ್ಲಿಸಿದ ಅವರು, ವಿಶ್ವದ ಅತಿದೊಡ್ಡ ಚುನಾವಣೆ, ಜನರು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ದಾಖಲೆಯ ಮತದಾನವಾಗಿದೆ. ಕಾಶ್ಮೀರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿತ್ತು. ಆದರೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗಿದೆ ಎಂದು ಹೇಳಿದರು.

ನನ್ನ ಸರ್ಕಾರ ಶೀಘ್ರದಲ್ಲಿ ಈ ಅವಧಿಯ ಮೊದಲ ಬಜೆಟ್ ಮಂಡಿಸಲಿದೆ. ದೊಡ್ಡ ಆರ್ಥಿಕ, ಸಾಮಾಜಿಕ ಬದಲಾವಣೆಯತ್ತ ಹೆಜ್ಜೆ ಇಡುವ ಬಜೆಟ್ ಇದಾಗಲಿದೆ. ರಾಜ್ಯದ ವಿಕಾಸವೇ ದೇಶದ ವಿಕಾಸ್ ಎನ್ನುವ ಭಾವನೆಯಿಂದ ನಮ್ಮ ಸರ್ಕಾರ ಮುಂದುವರಿಯಲಿದೆ. 12 ರಿಂದ 5 ನೇ ಬಲಿಷ್ಠ ಆರ್ಥಿಕತೆಯಾಗಿ ದೇಶ ಬದಲಾಗಿದೆ. ಕೊರೊನಾ ಮತ್ತು ಯುದ್ಧದ ಪರಿಸ್ಥಿತಿಯಲ್ಲೂ ಭಾರತ ಅಭಿವೃದ್ಧಿ ಸಾಧಿಸಿದೆ. ಸರ್ವಿಸ್ ಸೆಕ್ಟರ್ ಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ನಮ್ಮ ಸರ್ಕಾರ ಮೂರನೇ ಬಲಿಷ್ಠ ಆರ್ಥಿಕತೆಯಾಗಲು ಹೊರಟಿದೆ. ಪ್ರತಿ ಕ್ಷೇತ್ರದಲ್ಲಿ ಭಾರತ ಲೀಡರ್ ಆಗುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿವೆ. ಕೃಷಿ ಆಧಾರಿತ ಉದ್ಯಮ ವಿಸ್ತರಣೆ ಮಾಡಲಾಗುತ್ತಿದೆ. ರೈತರಿಗಾಗಿ ಸರ್ಕಾರಿ ಸಂಸ್ಥೆಗಳ ನೆಟ್ವರ್ಕ್ ಮಾಡುತ್ತಿದೆ. ಸಹಕಾರಿ ವಲಯದಲ್ಲಿ ದೊಡ್ಡ ಬದಲಾವಣೆ ಮಾಡುತ್ತಿದೆ. ಸಣ್ಣ ಖರ್ಚು ನಿಭಾಯಿಸಲು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತಿದೆ. ಎಂಎಸ್‍ಪಿಯಲ್ಲಿ ದಾಖಲೆಯ ಸಾಧನೆ ಮಾಡಿದೆ. ವರ್ತಮಾನ ಅಗತ್ಯ ಆಧರಿಸಿ ಕೃಷಿ ವಲಯದಲ್ಲಿ ಬದಲಾವಣೆ ಮಾಡುತ್ತಿದೆ ಎಂದು ತಿಳಿಸಿದರು.

ವಿಶ್ವದ ಹಲವು ದೇಶಗಳನ್ನು ಭಾರತ ಪ್ರೇರೆಪಿಸುತ್ತಿದೆ. ಭಾರತಕ್ಕೆ ಬೆಂಬಲ ನೀಡುತ್ತಿವೆ. ಗ್ರೀನ್ ಎನರ್ಜಿಗೆ ಭವಿಷ್ಯವಿದೆ. ಈ ಹಿನ್ನೆಲೆ ನಮ್ಮ ಸರ್ಕಾರ ಇದಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮಹಿಳೆಯರ ಆರ್ಥಿಕ ಸ್ಥಿತಿ ಹೆಚ್ಚಿಸಿದೆ. ಪಿಎಂ ಆವಾಸ್ ಯೋಜನೆಯಡಿ ಮಹಿಳೆಯರಿಗೆ ಹೆಚ್ಚು ಮನೆ ನೀಡಿದೆ. ಮುಂದಿನ ಅವಧಿಯಲ್ಲಿ ಮೂರು ಕೋಟಿ ಮನೆ ನಿರ್ಮಿಸಿ ಹೆಚ್ಚು ಮಹಿಳೆಯರಿಗೆ ನೀಡಲಾಗುವುದು. ಸ್ವಂಸಹಾಯ ಗುಂಪುಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಮೋ ಡ್ರೋನ್ ಮೂಲಕ, ಲಕ್ ಪತಿ ದೀದಿ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಮಾಡಲಾಗುತ್ತಿದೆ ಎಂದರು.

ಎರಡು, ಮೂರನೇ ಹಂತದ ನಗರಗಳಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದೆ. ಮಹಾನಗರಗಳಲ್ಲಿ ಮೆಟ್ರೋ ವಿಸ್ತರಣೆಯಾಗುತ್ತಿದೆ. ವಂದೇ ಭಾರತ್ ರೈಲು ಯೋಜನೆ ಆರಂಭವಾಗಲಿದೆ. ನಗರಗಳ ಮೂಲ ಸೌಕರ್ಯ ಹೆಚ್ಚಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಎರಡು ಪಟ್ಟು ಹೆಚ್ಚಿಸಿದೆ. ಹೈಸ್ಪೀಡ್ ರೈಲ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಬಾಕಿ ಕಡೆ ಬುಲೆಟ್ ಟ್ರೈನ್ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಅಸ್ಸಾಂನಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆ ಮಾಡಲಾಗುವುದು. ಹತ್ತು ವರ್ಷಗಳಲ್ಲಿ ಅನೇಕ ಸಮಸ್ಯೆ ಬಗೆಹರಿಸಿದೆ. ದೇಶದ ಹಲವು ಕ್ಷೇತ್ರಗಳು ಅಭಿವೃದ್ಧಿ ಕಂಡಿದೆ. ಈಶಾನ್ಯ ರಾಜ್ಯಗಳ ವಿಷಯ ಬರುತ್ತಿದ್ದಂತೆಯೇ ಮಣಿಪುರ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.

ಭಾಷಣ ಮುಂವದುರಿಸಿದ ಮುರ್ಮು, ನನ್ನ ಸರ್ಕಾರ ಸೈನಿಕರ ಹಿತ ಕಾಯುತ್ತಿದೆ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ಜಾರಿ ಮಾಡಿದೆ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಿದೆ. ಕೇಂದ್ರ ಸರ್ಕಾರದ ಗ್ರೂಪ್ ಸಿ ಡಿ ಯಲ್ಲಿ ಸಂದರ್ಶನ ರದ್ದು ಮಾಡಿದೆ ಯುವಕರಿಗೆ ಹೆಚ್ಚು ಉದ್ಯೋಗ ನೀಡಲಾಗುತ್ತಿದೆ, ಹೊಸ ಶಿಕ್ಷಣ ನೀತಿ ಜಾರಿ ಮಾಡಿದೆ ಭಾರತೀಯ ಭಾಷೆಯಲ್ಲಿ ಇಂಜಿನಿಯರಿಂಗ್ ಮಾಡಬಹುದಾಗಿದೆ. 7 IIT, 16IIIT, 6 IIM, 315 ಮೆಡಿಕಲ್ ಕಾಲೇಜು, 390 ವಿವಿ ನಿರ್ಮಾಣ ಮಾಡಲಿದೆ. ಪೇಪರ್ ಲೀಕ್ ತಡೆಯಲು ಕಾನೂನು ಕ್ರಮ ತೆಗೆದುಕೊಳ್ಳಲು ನನ್ನ ಸರ್ಕಾರ ಬದ್ಧವಾಗಿದೆ ಅಕ್ರಮ ತಡೆಯಲು ಕಾನೂನು ಜಾರಿ ಮಾಡಿದೆ ಪರೀಕ್ಷಾ ಸುಧಾರಣೆಗೆ ಕೆಲಸ ಮಾಡುತ್ತಿದೆ ನಳಂದಾ ಕ್ಯಾಂಪಸ್ ಅಭಿವೃದ್ಧಿಪಡಿಸಿದೆ ಎಂದರು‌.

ಚಂದ್ರಯಾನ ಯಶಸ್ವಿಗೆ, ಮೂರನೇ ಬಲಿಷ್ಠ ಆರ್ಥಿಕತೆಯಾಗುತ್ತಿರುವುದಕ್ಕೆ, ನಮ್ಮ ಅತ್ಯುತ್ತಮ ಚುನಾವಣಾ ವ್ಯವಸ್ಥೆಗೆ, ಪ್ರಜಾಪ್ರಭುತ್ವದ ತಾಯಿಯಾಗಿರಲು ನಾವು ಗರ್ವ ಪಡಬೇಕು. ನೆರೆ ದೇಶಗಳ ಜೊತೆಗೆ ಭಾರತ ತನ್ನ ಸಂಬಂಧ ಬಲಿಷ್ಠವಾಗಿಸಿದೆ, ಇಂಡೋ ಫೆಸಿಫಿಕ್ ದೇಶಗಳ ಜೊತೆಗೆ ಸಂಬಂಧ ಹೆಚ್ಚಿಸಿದೆ, ಇಂಡೋ ಯುರೋಪ್ ಕಾರಿಡಾರ್ ಗೆ ಚಿಂತಿಸಿದೆ ಇದು ಗೇಮ್ ಚೇಂಜರ್ ಯೋಜನೆಯಾಗಲಿದೆ. ಜಿ 20 ಯಲ್ಲಿ ದಕ್ಷಿಣ ಆಫ್ರಿಕಾ ಸೇರಿಸಲಾಯಿತು, G7 ಸಭೆಯಲ್ಲಿ ಭಾರತದ ತನ್ನದೇ ಪಾತ್ರ ನಿಭಾಯಿಸಿದೆ. ಸಂವಿಧಾನದ ಮೇಲೆ ದಾಳಿ ಮಾಡುವ ಪ್ರಯತ್ನ ಈ ಹಿಂದೆ ನಡೆದಿದೆ ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನೇರ ದಾಳಿ ಮಾಡಲಾಯಿತು ನಮ್ಮ ಸರ್ಕಾರ ಸಂವಿಧಾನ ರಕ್ಷಿಸುವ ಕಾರ್ಯ ಮಾಡುತ್ತಿದೆ ಅದಕ್ಕಾಗಿ ಸಂವಿಧಾನ ದಿವಸ್ ಆರಂಭಿಸಿದೆ ಜಮ್ಮು ಕಾಶ್ಮೀರದಲ್ಲಿ ಸಂವಿಧಾನ ಪೂರ್ಣಪ್ರಮಾಣದಲ್ಲಿ ಅನ್ವಯವಾಗಿದೆ ಎಂದರು.

Previous Post
ಕರ್ನಾಟಕಕ್ಕೆ ಬರುವ ಹೂಡಿಕೆಯನ್ನು ಗುಜರಾತ್ ಗೆ ವರ್ಗ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿ‌.ಟಿ ರವಿ ಆಕ್ರೋಶ
Next Post
ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ; ಓರ್ವ ಸಾವು

Recent News