ರಾಮನಗರದ ಕ್ರೇಡಿಟ್ ಕಿತ್ತುಕೊಳ್ಳಲು ಪ್ರಯತ್ನ ಹೆಸರು ಬದಲಾವಣೆ ಪ್ರಸ್ತಾವಣೆಗೆ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ಷೇಪ

ರಾಮನಗರದ ಕ್ರೇಡಿಟ್ ಕಿತ್ತುಕೊಳ್ಳಲು ಪ್ರಯತ್ನ ಹೆಸರು ಬದಲಾವಣೆ ಪ್ರಸ್ತಾವಣೆಗೆ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ಷೇಪ

ನವದೆಹಲಿ : ಹೊಸ ಸರ್ಕಾರ ರಚನೆ ಮಾಡಿದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ, ಇದನ್ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ವಂಶಸ್ಥರು ನಾವು, ಅಲ್ಲಿಗೆ ಸೇರಬೇಕು, ಬೆಂಗಳೂರಿಗೆ ಸೇರ್ಪಡೆಯಾದರೆ ಮೂಟೆಗಟ್ಟಲೇ ತುಂಬಬಹುದು, ನಾನು ಬೆಂಗಳೂರಿಗೆ ನಾಲ್ಕು ತಾಲೂಕುಗಳನ್ನು ಸೇರಿಸುತ್ತೇನೆ ಭೂಮಿ ಮಾರಾಟ ಮಾಡಬೇಡಿ ಎಂದು ಹೇಳಿದ್ದರು.

ರಾಮನಗರ ಮಾಡಿದ್ದ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ ರಾಮನ ಹೆಸರು ಇರುವುದು ಒಂದು ಒಂದು ಭಾಗ, ರಾಮನಗರಕ್ಕೆ ಅದರದೇ ಆದ ಒಂದು ಇತಿಹಾಸ ಇದೆ. ಅಲ್ಲಿ ಯಾವ್ಯಾವ ಬೆಲೆ ಏರಿಕೆ ಮಾಡಿದ್ದಾರೆ ನೋಡಿದ್ದೇವೆ, ಭೂಮಿ ಲಪಾಟಿಸಿ ಯಾವುದರ ಬೆಲೆ ಏರಿಕೆ ಮಾಡಿದ್ದಾರೆ ಗೊತ್ತಿದೆ. ಇದೇಲ್ಲ ಬಿಟ್ಟು ಅಭಿವೃದ್ಧಿ ಮಾಡುವುದು ಕಲಿಯಲಿ.

ರಾಮನಗರ ನಾವು ಮಾಡಿದ್ದು ಎನ್ನುವುದು ತೆಗೆಯಬೇಕು ಎನ್ನುವುದು ಅವರ ಉದ್ದೇಶ, ದೇವೇಗೌಡರು, ನಾನು ಏನು ಅಭಿವೃದ್ಧಿ ಮಾಡಿದ್ದೇವೆ ಜನರಿಗೆ ಗೊತ್ತಿದೆ ಅದಕ್ಕೆ ಇವರ ಸರ್ಟಿಫಿಕೇಟ್ ಬೇಕಿಲ್ಲ, ಯಾವುದರ ಬೆಲೆ ಏರಿಕೆಯಾಗಿದೆ ಗೊತ್ತಿದೆ. ಹಿಂದೆ ಕನಕಪುರ ಸಾತನೂರು ಹೇಗಿತ್ತು, ಆಗ ಇವರು ಯಾರದೋ ಸೇವೆ ಮಾಡಿಕೊಂಡಿದ್ದರು. ಈಗ ರಾಮನಗರ ಹೆಸರು ಬದಲಾಯಿಸಿದರೂ ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರ್ತಿನಿ ಆ ವಿಶ್ವಾಸ ಇದ್ದೆ ಇದೆ ಆಗ ಬದಲಿಸುತ್ತೇನೆ.

ನಾಲ್ಕು ತಾಲೂಕು ಸೇರಿ ಬೆಂಗಳೂರು ದಕ್ಷಿಣ ಮಾಡಲು ಹೊರಟಿದ್ದಾರೆ, ಈಗಾಗಲೇ ಬೆಂಗಳೂರು ದಕ್ಷಿಣ ಕ್ಷೇತ್ರ ಅಂತಾ ಇದೆಯಲ್ಲ ಬೇರೆ ಹೆಸರು ಇಟ್ಟಿದ್ದರೆ ಆಗಿರೋದು ಆದರೆ ಅದು ಮಾಡ್ತಿಲ್ಲ, ಅವರು ಮಾತ್ರ ಬೆಂಗಳೂರಿನವರು ಅವರ ಸಾಧನೆ ಚಿರಾಯುವಾಗಿ ಉಳಿಯಬೇಕು ನಾವೇನು ಸಾಧನೆ ಮಾಡಿದ್ದೇವೆ, ಹೆಸರು ಬದಲಾವಣೆ ಮಾಡಿದರೆ ಏನು ಸಿಗುತ್ತೆ ಅವರು ಹೇಳಬೇಕು. ಹೆಸರು ಬದಲಾವಣೆ ಮಾಡಿದರೆ ಎಲ್ಲ ಸರ್ಕಾರಿ ದಾಖಲೆಗಳಿಗೆ ತೊಂದರಯಾಗಲಿದೆ ಹೊಸ ಪ್ರಕ್ರಿಯೆ ಶುರುವಾಗಲಿದೆ

ರಾಮನಗರ ಚನ್ನಪಟ್ಟಣ ಅವಳಿ ನಗರ ಮಾಡಿದ್ದರೆ ಒಂದು ಹೆಸರು ಬಂದಿರೋದು, ನಾನು ಮೂರು ಅಥಾವ ಐದು ಅಧಿಕಾರದಲ್ಲಿದ್ದರೆ ಅವಳಿ ನಗರ ಮಾಡಿ ಮಹಾನಗರ ಪಾಲಿಕೆ ಮಾಡುತ್ತಿದ್ದೆ, ಆ ಬಗ್ಗೆ ನಾನು ಚಿಂತನೆ ಮಾಡಿದ್ದೆ ಎಂದರು. ಚನ್ನಪಟ್ಟಣ ಚುನಾವಣೆ ಬಗ್ಗೆ ಸಭೆ ಮಾಡಿದೆ, ಹೈಕಮಾಂಡ್ ಅಥಾವ ರಾಜ್ಯ ಬಿಜೆಪಿ ನಾಯಕರ ಜೊತೆಗೆ ಸಭೆ ಮಾಡಿಲ್ಲ ಎಂದರು. ಮೆಡಿಕಲ್ ಕಾಲೇಜು ಬಗ್ಗೆ ಮಾತನಾಡಿ ಬಿಲ್ಡಿಂಗ್ ಆಗದೇ ಕಾಲೇಜು ಹೇಗೆ ಆಗುತ್ತೆ ಅದರ ಬಗ್ಗೆ ತಕರಾರು ಇಲ್ಲ, ನೋಡೊಣ ಮುಂದೇನಾಗುತ್ತೆ ಎಂದರು‌.

Previous Post
ಹೇಮಂತ್ ಸೊರೇನ್ ಜಾಮೀನು ಪ್ರಶ್ನಿಸಿ ಸುಪ್ರೀಂ ಮೊರೆ
Next Post
ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಸಚಿವ ಹೆಚ್.ಡಿ.ಕುಮಾರಸ್ವಾಮಿ

Recent News