ತಮಿಳುನಾಡಿಗೆ ನಿತ್ಯ 1 ಟಿಎಂಸಿ ಹರಿಸಲು CWRC ಶಿಫಾರಸ್ಸು

ತಮಿಳುನಾಡಿಗೆ ನಿತ್ಯ 1 ಟಿಎಂಸಿ ಹರಿಸಲು CWRC ಶಿಫಾರಸ್ಸು

ನವದೆಹಲಿ : ಜುಲೈ 12 ರಿಂದ 31ರ ವರೆಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸು ಮಾಡಿದೆ. ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕರ್ನಾಟಕ ತಮಿಳುನಾಡು ವಾದ ಆಲಿಸಿದ ಬಳಿಕ ಈ ಶಿಫಾರಸ್ಸು ಮಾಡಿದೆ.

ಕಾವೇರಿ ಜಲಾನಯನ ಜಲಾಶಯಗಳಲ್ಲಿ ಒಳಹರಿವು 41 ಟಿಎಂಸಿ ಇದೆ, ಜೂನ್ 1ರಿಂದ ಇಲ್ಲಿಯವರಗೆ 41 ಟಿಎಂಸಿ ನೀರು ಸೇರಿದೆ ಶೇಖರಣೆಯಾಗಿದೆ. ಆದರೆ ರಾಜ್ಯದಲ್ಲಿ ಈ ಮಾನ್ಸೂನ್ ಸಾಮಾನ್ಯವಾಗಿಲ್ಲ, 28% ಮಳೆ ಕೊರತೆಯಾಗಿದೆ. ಮಳೆಯ ಬಳಿಕ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಒಟ್ಟು 58 ಟಿಎಂಸಿ ನೀರಿದೆ

ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಸಂಗ್ರಹವಿದೆ, ಸಧ್ಯಕ್ಕೆ ನೀರು ಬಿಡುವ ಬಗ್ಗೆ ಯಾವುದೆ ಶಿಫಾರಸು ಮಾಡಬೇಡಿ ಜುಲೈ‌25ರ ವರೆಗೆ ಮಳೆಯ ಪ್ರಮಾಣ ನೋಡಿಕೊಂಡು ಶಿಫಾರಸು ಮಾಡಿ ಈಗಲೇ ನೀರು ಬಿಡುವಂತೆ ಶಿಫಾರಸ್ಸು ಮಾಡಬೇಡಿ ಎಂದು ಕರ್ನಾಟಕದ ಅಧಿಕಾರಿಗಳು ಮನವಿ ಮಾಡಿದರು.

CWRC ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳ ಪ್ರತಿವಾದಿಸಿ ಕಳೆದ ಜಲ ವರ್ಷದಲ್ಲಿ ಕರ್ನಾಟಕ ನೀರು ಸರಿಯಾಗಿ ಹರಿಸಿಲ್ಲ ಪ್ರಸಕ್ತ ಜಲವರ್ಷದಲ್ಲಿ ಮನ್ಸೂನ್ ಸಾಮಾನ್ಯವಾಗಿದೆ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ ನೀರು ಬಿಡುವಂತೆ ಶಿಫಾರಸು ಮಾಡುವಂತೆ ಮನವಿ ಮಾಡಿದರು.

ಎರಡು ರಾಜ್ಯಗಳ ವಾದ ಆಲಿಸಿದ CWRC ಪ್ರತಿನಿತ್ಯ 1 ಟಿಎಂಸಿ ನೀರು ಬಿಳಿಗುಂಡ್ಳುವಿನಲ್ಲಿ ದಾಖಲಿಸುವಂತೆ ಶಿಫಾರಸ್ಸು ಮಾಡಿದೆ‌. ಈ ಶಿಫಾರಸ್ಸು ಅನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡಬಹುದಾಗಿದ್ದು ಪ್ರಾಧಿಕಾರವೂ ಆದೇಶ ನೀಡಿದ್ದಲ್ಲಿ ನೀರು ಹರಿಸಬೇಕಾಗಲಿದೆ.

Previous Post
‘ರಾಮನಗರ ಜಿಲ್ಲೆ’ಯನ್ನು ‘ಬೆಂಗಳೂರು ದಕ್ಷಿಣ’ವೆಂದು ಮರುನಾಮಕರಣಕ್ಕೆ ಸಿಎಂಗೆ ಪ್ರಸ್ತಾವನೆ ಸಲ್ಲಿಕೆ
Next Post
ವಾಲ್ಮೀಕಿ ನಿಗಮದಲ್ಲಿ ಅಕ್ರಮ ಸಿಬಿಐನಿಂದ ತನಿಖೆ ತೀವ್ರಗೊಳಿಸಿ – ಅಮಿತ್ ಶಾ ಶೋಭಾ ಕರಂದ್ಲಾಜೆ ಪತ್ರ

Recent News