ಅನ್ಯರಾಜ್ಯಗಳ ವಿದ್ಯಾರ್ಥಿಗಳಿಗೆ ಗುಜುರಾತಿಯಲ್ಲಿ ನೀಟ್ ಬರೆಯಲು ಸೂಚನೆ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಿಬಿಐ ಮಹತ್ವದ ಮಾಹಿತಿ

ಅನ್ಯರಾಜ್ಯಗಳ ವಿದ್ಯಾರ್ಥಿಗಳಿಗೆ ಗುಜುರಾತಿಯಲ್ಲಿ ನೀಟ್ ಬರೆಯಲು ಸೂಚನೆ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಿಬಿಐ ಮಹತ್ವದ ಮಾಹಿತಿ

ನವದೆಹಲಿ : ಒಡಿಶಾ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ ಹಲವಾರು NEET-UG ಅಭ್ಯರ್ಥಿಗಳು ಗುಜರಾತ್‌ನ ಗೋಧ್ರಾದಲ್ಲಿರುವ ಕೇಂದ್ರದಲ್ಲಿ ತಮ್ಮ ಪರೀಕ್ಷೆಯನ್ನು ಬರೆದಿದ್ದು, ಗುಜುರಾತಿಯನ್ನು ಪರೀಕ್ಷಾ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.

ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದ್ದ ಇಬ್ಬರು ಗುಜರಾತಿ ವ್ಯಕ್ತಿಗಳು ಕಸ್ಟಡಿಗೆ ಕೋರುವಾಗ ಗುಜರಾತ್ ನ್ಯಾಯಾಲಯದಲ್ಲಿ ಸಿಬಿಐ ಈ ಅಂಶವನ್ನು ಹೇಳಿದೆ. ಈ ಇಬ್ಬರು ಆರೋಪಿಗಳು ಇತರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಶಾಶ್ವತ ವಿಳಾಸವನ್ನು ಪಂಚಮಹಲ್ ಅಥವಾ ವಡೋದರಾ ಎಂದು ತೋರಿಸಲು ಸೂಚಿದ್ದರು. ಈ ಎರಡು ಕೇಂದ್ರಗಳಲ್ಲಿ ಅಕ್ರಮ ನಡೆಸಲಾಗಿದೆ ಎಂದು ಸಿಬಿಐ ಹೇಳಿದೆ.

ಎರಡೂ ಪರೀಕ್ಷಾ ಕೇಂದ್ರಗಳ ನಿಯಂತ್ರಣ ಒಂದೇ ನಿರ್ವಾಹಕರದ್ದಾಗಿದ್ದು, ವಿವಿಧ ರಾಜ್ಯಗಳ ಈ ಎಲ್ಲ ಅಭ್ಯರ್ಥಿಗಳನ್ನು ಆರೋಪಿಗಳು ವಿವಿಧ ಲಿಂಕ್‌ಗಳ ಮೂಲಕ ಸಂಪರ್ಕಿಸಿದ್ದಾರೆ. ಮೇ 5 ರಂದು ನಡೆದ NEET-UG ಪರೀಕ್ಷೆಗೆ ಗೊತ್ತುಪಡಿಸಿದ ಕೇಂದ್ರಗಳಲ್ಲಿ ಒಂದಾದ ಗೋದ್ರಾದ ಜೈ ಜಲರಾಮ್ ಶಾಲೆಯಲ್ಲಿ ಅಕ್ರಮ ನಡೆಸಿದೆ.

ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್ ಸೇರಿದಂತೆ ಆರು ಆರೋಪಿಗಳ ಪೈಕಿ ಐವರನ್ನು ಈಗಾಗಲೇ ಸಿಬಿಐ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ದೀಕ್ಷಿತ್ ಪಟೇಲ್ ನೀಟ್-ಯುಜಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ರತಿ ವಿದ್ಯಾರ್ಥಿಯಿಂದ 10 ಲಕ್ಷ ರೂ. ಪಡರದಿದ್ದಾರೆ ಎಂದು ಸಿಬಿಐ ಹೇಳಿದ್ದು, ಕಳೆದ ತಿಂಗಳು ಗುಜರಾತ್ ಪೊಲೀಸರಿಂದ ಪ್ರಕರಣದ ತನಿಖೆಯನ್ನು ವಹಿಸಿಕೊಂಡ ಸಿಬಿಐ ಈಗ ದೊಡ್ಡ ಪಿತೂರಿಯ ಭಾಗವಾಗಿ ಅಂತರರಾಜ್ಯ ಸಂಪರ್ಕಗಳನ್ನು ಬಯಲಿಗೆಳೆಯುವತ್ತ ಗಮನ ಹರಿಸಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಇದುವರೆಗೆ ಆರು ಎಫ್‌ಐಆರ್‌ಗಳನ್ನು ದಾಖಲಿಸಿ 11 ಜನರನ್ನು ಬಂಧಿಸಿದೆ. ಬಿಹಾರದಲ್ಲಿ ದಾಖಲಾದ ಎಫ್‌ಐಆರ್ ಪೇಪರ್ ಸೋರಿಕೆಗೆ ಸಂಬಂಧಿಸಿದ್ದು, ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾದ ಎಫ್‌ಐಆರ್ ಅಭ್ಯರ್ಥಿಗಳ ವಂಚನೆಗೆ ಸಂಬಂಧಿಸಿವೆ.

Previous Post
ವಾಲ್ಮೀಕಿ ನಿಗಮದಲ್ಲಿ ಅಕ್ರಮ ಸಿಬಿಐನಿಂದ ತನಿಖೆ ತೀವ್ರಗೊಳಿಸಿ – ಅಮಿತ್ ಶಾ ಶೋಭಾ ಕರಂದ್ಲಾಜೆ ಪತ್ರ
Next Post
ರಾಮೇಶ್ವರಂ ಕಫೆ ಸ್ಫೋಟ ಪ್ರಕರಣ ಸಚಿವೆ ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ತರಾಟೆ

Recent News