46 ವರ್ಷಗಳ ಬಳಿಕ ತೆರೆದ ಜಗನ್ನಾಥ ದೇವಾಲಯದ ರತ್ನ ಭಂಡಾರ

46 ವರ್ಷಗಳ ಬಳಿಕ ತೆರೆದ ಜಗನ್ನಾಥ ದೇವಾಲಯದ ರತ್ನ ಭಂಡಾರ

ಪುರಿ : ಒಡಿಶಾದ ಪುರಿಯಲ್ಲಿರುವ 12 ನೇ ಶತಮಾನದ ಜಗನ್ನಾಥ ದೇವಾಲಯದ ಖಜಾನೆ ರತ್ನ ಭಂಡಾರ್ ಅನ್ನು 46 ವರ್ಷಗಳ ನಂತರ ಭಾನುವಾರ ಮಧ್ಯಾಹ್ನ ಮತ್ತೆ ತೆರೆಯಲಾಯಿತು. ಒಡಿಶಾ ಸರ್ಕಾರ ರಚಿಸಿರುವ 11 ಸದಸ್ಯರ ಸಮಿತಿಯ ಸದಸ್ಯರು ಭಾನುವಾರ ಮಧ್ಯಾಹ್ನ ಜಗನ್ನಾಥ ದೇವಾಲಯದ ಪೂಜ್ಯ ಭಂಡಾರವನ್ನು ತೆರೆದು ಒಳ ಪ್ರವೇಶಿಸಿದರು. ಒರಿಸ್ಸಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿಸ್ವನಾಥ್ ರಾತ್, ಶ್ರೀ ಜಗನ್ನಾಥ ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ, ಎಎಸ್‌ಐ ಸೂಪರಿಂಟೆಂಡೆಂಟ್ ಡಿಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜರ ಪ್ರತಿನಿಧಿ. ದೇವಾಲಯದ ಸೇವಕರು, ಪಟ್ಜೋಶಿ ಮೊಹಾಪಾತ್ರ, ಭಂಡಾರ್ ಮೆಕಾಪ್, ಚಡೌಕರಣಾ ಮತ್ತು ದೆಯುಲಿಕರನ್ ಸಹ ದೇವಸ್ಥಾನದ ರತ್ನ ಬಂಡಾರ ಪ್ರವೇಶಿದ್ದಾರೆ‌. ರತ್ನ ಭಂಡಾರವು ಒಡಹುಟ್ಟಿದ ದೇವತೆಗಳಾದ ಜಗನ್ನಾಥ, ಸುಭದ್ರ ಮತ್ತು ಬಲಭದ್ರಗೆ ಸಂಬಂಧಿಸಿದ ಅಮೂಲ್ಯ ಆಭರಣಗಳನ್ನು ಹೊಂದಿದೆ‌. ಶತಮಾನಗಳಿಂದ ಭಕ್ತರು ಮತ್ತು ಹಿಂದಿನ ರಾಜರು ದಾನ ಮಾಡಿರುವ ವಸ್ತುಗಳಿದೆ. ಒಳ ಖಜಾನೆ ಮತ್ತು ಹೊರ ಖಜಾನೆ ಎಂದು ಎರಡು ಭಾಗ ಮಾಡಿದ್ದು ಮೊದಲು ಹೊರಗಿನ ಖಜಾನೆ ತೆರೆಯಲಾಗಿದೆ‌. ಹೊರಗಿನ ಖಜಾನೆಯಲ್ಲಿ ವಾರ್ಷಿಕ ರಥಯಾತ್ರೆಯ ಸಮಯದಲ್ಲಿ ಬಳಸುವ ಸುನಾ ಬೇಷಾ (ಚಿನ್ನದ ಉಡುಪು) ಸೇರಿ ಪೂಜೆ ಮತ್ತು ಅಲಂಕಾರಕ್ಕೆ ಬಳಸುವ ಚಿನ್ನಾಭರಣಗಳಿದೆ ಎಂದು ವರದಿಯಾಗಿದೆ. ಹೊರಗಿನ ಖಜಾನೆ ಎಣಿಕೆ ಅಂತ್ಯವಾದ ಬಳಿಕ ಒಳ ಖಜಾನೆಯನ್ನು ತೆರೆಯಲಾಗುತ್ತದೆ. ಹಂತ ಹಂತವನ್ನು ಎಲ್ಲವನ್ನು ಎಣಿಕೆ ಮಾಡಿ ವಜ್ರ, ಹವಳ, ಚಿನ್ನಾಭರಣಗಳ ಸಂಖ್ಯೆ ಎಷ್ಟು, ಅದರ ಇಂದಿನ ಮೌಲ್ಯ ಏನು ಮತ್ತು ವಸ್ತುಗಳಿ ಯಾವ ಕಾಲಕ್ಕೆ ಸಂಬಂಧಿಸಿವೆ ಎನ್ನುವ ಮಾಹಿತಿ ಬಿಡುಗಡೆ ಮಾಡುವ ನಿರೀಕ್ಷೆಗಳಿದೆ. ರತ್ನ ಭಂಡಾರ್‌ನಲ್ಲಿರುವ ಬೆಲೆಬಾಳುವ ವಸ್ತುಗಳ ಡಿಜಿಟಲ್ ಕ್ಯಾಟಲಾಗ್ ಅನ್ನು ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದೆ ಅದು ಅವುಗಳ ತೂಕ ಮತ್ತು ತಯಾರಿಕೆಯ ವಿವರಗಳನ್ನು ಹೊಂದಿರುತ್ತದೆ.

Previous Post
ರಾಜ್ಯದ ಎಲ್ಲೆಡೆ ಡೆಂಗ್ಯೂ ಜ್ವರದ ಭೀತಿ ತೀವ್ರವಾಗಿ ಉಲ್ಬಣಗೊಂಡಿದ್ದು, ಜ್ವರಪೀಡಿತರ ಸಂಖ್ಯೆ 10 ಸಾವಿರ ಸನಿಹಕ್ಕೆ ತಲುಪುತ್ತಿದೆ
Next Post
ನೇಪಾಳದ ಪ್ರಧಾನಿಯಾಗಿ ಓಲಿ ನೇಮಕ: ನಾಳೆ ಪ್ರಮಾಣವಚನ

Recent News