ಬಾದಾಮಿ ಗೋಡಂಬಿ ತಿನ್ನಲು ಸಭೆಗೆ ಹೋಗಬೇಕಾ? ಕಾಂಗ್ರೇಸ್ ನಾಯಕರ ಆರೋಪಕ್ಕೆ ಹೆಚ್‌ಡಿಕೆ ತಿರುಗೇಟು

ಬಾದಾಮಿ ಗೋಡಂಬಿ ತಿನ್ನಲು ಸಭೆಗೆ ಹೋಗಬೇಕಾ? ಕಾಂಗ್ರೇಸ್ ನಾಯಕರ ಆರೋಪಕ್ಕೆ ಹೆಚ್‌ಡಿಕೆ ತಿರುಗೇಟು

ನವದೆಹಲಿ : ಸರ್ವಪಕ್ಷಗಳ ಸಭೆ ನಡೆಯುವ ಮುನ್ನವೇ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತದೆ ಇನ್ಯಾವ ಕಾರಣಕ್ಕೆ ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿದೆ. ನೀರು ಹರಿದು ಹೋದ ಮೇಲೆ ನಾವು ಬಾದಾಮಿ ಗೋಡಂಬಿ ತಿನ್ನಲು ಸಭೆಗೆ ಹೋಗಬೇಕಾ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸರ್ವಪಕ್ಷ ಸಭೆಗೆ ಗೈರಾಗಿರುವ ಹಿನ್ನಲೆ ಕಾಂಗ್ರೇಸ್ ನಾಯಕರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, CWRC ಶಿಫಾರಸು ಹಿನ್ನಲೆ ಸರ್ವಪಕ್ಷ ಸಭೆ ಕರೆದಿದ್ದರು ಆದರೆ ಚರ್ಚೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿದು ಹೋಗಿದೆ, ಕಬಿನಿಯಿಂದ ನೀರು ಹರಿದಿದೆ, ಕೆಆರ್‌ಎಸ್ ನಿಂದ ರೈತರ ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸಿದೆ, ನೀರು ಬಿಟ್ಟು ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ ಎಂದು ಆರೋಪಿಸಿದರು.ನೀರಿ ಹರಿದು ಹೋದ ಮೇಲೆ ನಾವು ಸಭೆಯಲ್ಲಿ ಕೊಡುವ ಗೋಡಂಬಿ ಬಾದಾಮಿ ತಿನ್ನೊಕೆ ಹೋಗಬೇಕಿತ್ತಾ, ನೀರಿ ಬಿಟ್ಟಿದ್ದಕ್ಕೆ ಶಹಬ್ಬಾಸಗಿರಿ ಕೊಡಲು ಹೋಗಬೇಕಾ ಎಂದು ಪ್ರಶ್ನೆ ಮಾಡಿದರು.

ನಾನು ಮಂಡ್ಯದಲ್ಲಿ ಜನತಾ ದರ್ಶನ ಮಾಡಿದಾಗ ರಾಜ್ಯ ಸರ್ಕಾರ ಅಧಿಕಾರಿಗಳು ಭಾಗಿಯಾಗಬಾರದು ಎಂದು ಆದೇಶ ಮಾಡಿದ್ದಾರೆ, ಅಧಿಕಾರಗಳ ಸಭೆ ನಡೆಸಬಾರದು ಎಂದು ಆದೇಶದ ಮಾಡಿದ ಮೇಲೆ ನಮ್ಮಿಂದ ಏನು ಬಯಸುತ್ತಿದ್ದೀರಾ? ಪಾಂಡವಪುರದಲ್ಲಿ ಮತ ಕೊಟ್ಟ ಜನರಿಗೆ ಧನ್ಯವಾದ ಹೇಳಬೇಕಿತ್ತು ಹೋಗಿದ್ದೆ ಯಾವ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ನನಗೆ ಗೊತ್ತಿದೆ, ನಾನು ಹೋಗಲು ಇವರ ಅನುಮತಿ ಪಡೆಯಬೇಕಾ? ಎಂದರು.

ಆಂಧ್ರಪ್ರದೇಶಕ್ಕೆ ಹೋದರೆ ಅಲ್ಲಿ ಸಿಎಂ ಫೋನ್ ಮಾಡಿ ಸಹಕಾರ ಕೇಳುತ್ತಾರೆ, ನಾನು ರಾಜ್ಯದಲ್ಲಿ ಉದ್ಯೋಗ ಸೃಷ್ಠಿಯಾಗಲಿ ಎಂದು ಕೇಂದ್ರದ ಯೋಜನೆಗಳಿಗೆ ಸಹಿ ಹಾಕಿದರೆ ಅದನ್ನು ನಿಲ್ಲಸ್ತಿರಿ? ನಮ್ಮನ್ನು ಹೇಗೆ ನಡೆಸುಕೊಳ್ಳುತ್ತಿದ್ದೀರಿ, ಈಗ ಸಭೆಗೆ ಬಂದಿಲ್ಲ ಎಂದು ಆರೋಪ ಮಾಡುತ್ತಿದ್ದೀರಿ ಎಂದು ಅಸಮಧಾನ ವ್ಯಕ್ತಪಡಿಸಿದರು.

ಡಿಕೆ ಶಿವಕುಮಾರ್ ಕೊಳ್ಳೆ ಹೊಡೆದಿದ್ದಾರೆ

ಕಸದ ಟೆಂಡರ್ ನಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಹೆಚ್‌ಡಿಕೆ, ಯಾವುದೇ ಸರ್ಕಾರಿ ಕಾರ್ಯಕ್ರಮ ಮಾಡಿದರೂ ಪ್ರಮಾಣಿಕವಾಗಿ ಮಾಡಿದ್ದೇವೆ, ಇವರ ಥರ ಕಾನೂನು ಬಾಹಿರ ಕೆಲಸ ಮಾಡಿಲ್ಲ‌. ನಾನು ಕಾರ್ಪೋರೆಷನ್ ಕಸ ಎತ್ತಿದ್ದಿನಿ ಸಿನಿಮಾ ಡಬ್ಬಾ ಹೊತ್ತಿದ್ದಿನಿ, ನಮ್ಮ ಕಾಲದಲ್ಲಿ ಸಿಡಿ ಇರಲಿಲ್ಲ ಕಷ್ಟಪಟ್ಟು ದುಡಿದಿದ್ದೇವೆ ಕಂಡ ಕಂಡ ಕೊಳ್ಳೆ ಹೊಡೆದು ಜೀವನ ಮಾಡಿಲ್ಲ. ಭಾನುವಾರವೂ ಸಭೆ ನಡೆಸಿ ನನ್ನ ವಿರುದ್ಧ ದಾಖಲೆ ಹುಡುಕುತ್ತಿದ್ದಾರೆ ಸಣ್ಣ ಪುಟ್ಟ ಸಮಸ್ಯೆ ಇದ್ದವ ಅಂತಾ ಹುಡುಕುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಿಡೋ ಹೆಸರಿನಲ್ಲಿ ಮಾಡಿದ ಅಕ್ರಮ ಮುಚ್ಚಲು ಕೆಂಪಣ್ಣ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದರು, ಈಗ ದೇಸಾಯಿ ಅಯೊಗ ಮಾಡಿದ್ದಾರೆ. ಮೂಡಾ ದಲ್ಲಿ ಹಗರಣ ನಡೆದಿಲ್ಲ ಎಂದು ನಿಮ್ಮ ಸಚಿವರು ಹೇಳಿದ್ದರು, ಹಾಗಿದ್ದರೆ ಆಯೋಗ ರಚನೆ ಯಾಕೆ ಮಾಡಿದ್ದೀರಿ, ತಪ್ಪುಗಳನ್ನು ಮುಚ್ಚಿಕೊಳ್ಳಲು ಆಯೋಗ ಮಾಡಿ ರಿಲಿಫ್ ಪಡೆಯುತ್ತಿದ್ದಿರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದರು.

Previous Post
ಸಂಸತ್ತಿನ ಭದ್ರತಾ ಲೋಪ ಪ್ರಕರಣ ಆರೋಪಿಗಳ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಕೆ
Next Post
ಎಲ್ಗಾರ್ ಪರಿಷತ್ ಪ್ರಕರಣ: ಜ್ಯೋತಿ ಜಗತಾಪ್‌ಗೆ ಜಾಮೀನು ನಿರಾಕರಣೆ

Recent News