ಕರ್ನಾಟಕದ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ತಮಿಳುನಾಡು ಚಿಂತನೆ

ಕರ್ನಾಟಕದ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ತಮಿಳುನಾಡು ಚಿಂತನೆ

ನವದೆಹಲಿ : ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸು ಅನ್ವಯ ನಿತ್ಯ ಒಂದು ಟಿಎಂಸಿ ನೀರು ಹರಿಸಲು ನಿರಾಕರಿಸಿದ ರಾಜ್ಯ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಅಸಮಧಾಮನ ವ್ಯಕ್ತಪಡಿಸಿದೆ. ಕಾವೇರಿ ನೀರು ಬಿಡುಗಡೆಗೆ ನಿರಾಕರಿಸಿದ ಬೆನ್ನಲೆ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಸರ್ವ ಪಕ್ಷ ಸಭೆ ನಡೆಸಿತು‌.

ಸಭೆಯಲ್ಲಿ ಮಾತನಾಡಿದ ಸಿಎಂ ಎಂ.ಕೆ ಸ್ಟಾಲಿನ್ ನೀರು ಬಿಡಲು ನಿರಾಕರಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ಸರಿಯಲ್ಲ, ಕಾವೇರಿ ಜಲಾಯನ ಪ್ರದೇಶದ ನಾಲ್ಕು ಪ್ರಮುಖ ಅಣೆಕಟ್ಟುಗಳಲ್ಲಿ ಒಟ್ಟು 75.586 ಟಿಎಂಸಿ ನೀರಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟವು ಕೇವಲ 13.808 ಟಿಎಂಸಿ ಅಡಿಗಳಷ್ಟಿದೆ ನೀರಿನ ಲಭ್ಯತೆ ಇದ್ದರು ನೀರು ಹರಿಸದಿರುವದಯ ಖಂಡನೀಯ.

ಸುಪ್ರೀಂಕೋರ್ಟ್ ಆದೇಶ ಅನ್ವಯ ನೀರು ಬಿಡುಗಡೆ ಮಾಡಿಸಲು ನಾವು ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣ ಪ್ರಾಧಿಕಾರಕ್ಕೆ ಒತ್ತಡ ಹಾಕಲಿದ್ದೇವೆ, ಒಂದು ವೇಳೆ ಕರ್ನಾಟಕ ನಿರ್ದೇಶನ ಪಾಲಿಸದಿದ್ದರೆ ನಾವು ಸುಪ್ರೀಂಕೋರ್ಟ್ ಗೆ ಮೆಟ್ಟಿಲೇರುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರದ ನಿಲುವಿಗೆ ಎಲ್ಲ ಪಕ್ಷಗಳು ಬೆಂಬಲ ನೀಡಿವೆ.

CWRC ಶಿಫಾರಸ್ಸು ಬೆನ್ನಲೆ ಸರ್ವ ಪಕ್ಷ ಸಭೆ ನಡೆಸಿದ್ದ ಸಿಎಂ ಸಿದ್ಧರಾಮಯ್ಯ, ಮಳೆಯ ಪ್ರಮಾಣ ನಿರೀಕ್ಷೆಗಿಂತ ಸರಿ ಸುಮಾರು 28% ಕೊರತೆ ಇದ್ದು ಈವರೆಗಿನ ಮಳೆಗೆ ಜಲಾಶಯಗಳು ಕೂಡಾ ಭರ್ತಿಯಾಗಿಲ್ಲ. ಹವಮಾನ ಇಲಾಖೆ ಮಳೆಯ ಭರವಸೆ ನೀಡಿದ್ದರು ಗ್ಯಾರಂಟಿ ಇಲ್ಲ ಹೀಗಾಗೀ ಜುಲೈ ಅಂತ್ಯದವರೆಗೂ ನೀರು ಸಾಧ್ಯವಿಲ್ಲ. ಹೀಗಾಗೀ ಒಂದು ಟಿಎಂಸಿ ಬದಲು ಎಂಟು ಸಾವಿರ ಕ್ಯೂಸೆಕ್ ಹರಿಸಲಾಗುವುದು ಎಂದು ಹೇಳಿದ್ದರು.

Previous Post
ಗವರ್ನರ್ ಬೋಸ್ ಕುರಿತ ಹೇಳಿಕೆ ಮಾನಹಾನಿಕರವಲ್ಲ: ಮಮತಾ ಬ್ಯಾನರ್ಜಿ
Next Post
ಮಾರ್ಕೇಂಡೇಯ ಆಣೆಕಟ್ಟು ನಿರ್ಮಾಣ ಪ್ರಕರಣ ಎಂಟು ವಾರಗಳಲ್ಲಿ ಸಂಧಾನ ಸಮಿತಿ ವರದಿ ಸಲ್ಲಿಕೆಗೆ ಸುಪ್ರೀಂ ಸೂಚನೆ

Recent News