ಅಗ್ನಿವೀರ್‌ಗಳಿಗೆ 10% ಮೀಸಲಾತಿ, ಚುನಾವಣೆಗೂ ಮುನ್ನ ಹರಿಯಾಣ ಸರ್ಕಾರದಿಂದ ಮಹತ್ವದ ಘೋಷಣೆ

ಅಗ್ನಿವೀರ್‌ಗಳಿಗೆ 10% ಮೀಸಲಾತಿ, ಚುನಾವಣೆಗೂ ಮುನ್ನ ಹರಿಯಾಣ ಸರ್ಕಾರದಿಂದ ಮಹತ್ವದ ಘೋಷಣೆ

ನವದೆಹಲಿ : ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರವು ಅಗ್ನಿಪಥ ಯೋಜನೆಯ ಮೂಲಕ ಸೇನೆಗೆ ನೇಮಕಗೊಂಡಿರುವ ಅಗ್ನಿವೀರ್‌ಗಳಿಗೆ ಪೊಲೀಸ್ ಮತ್ತು ಗಣಿಗಾರಿಕೆ ಸಿಬ್ಬಂದಿ ಉದ್ಯೋಗಗಳಲ್ಲಿ 10% ಮೀಸಲಾತಿ ನೀಡಲಾಗುವುದು ಎಂದು ಪ್ರಕಟಿಸಿದೆ.

ಹರಿಯಾಣ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಬಾಕಿ ಇರುವ ಮುನ್ನ ಈ ನಿರ್ಧಾರವು ಪ್ರಕಟಿಸಿದೆ‌. ಅಗ್ನಿಪಥ್ ಯೋಜನೆಯ ವಿರುದ್ಧ ಯುವಕರಲ್ಲಿರುವ ಕೋಪವಿದ್ದು ಇದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ದುರ್ಬಲ ಸಾಧನೆಗೆ ಕಾರಣವಾಗಿದೆ ಎಂಬ ವರದಿಗಳ ಬಂದ ಬೆನ್ನಲೆ ಸರ್ಕಾರ ಈ ಆದೇಶ ಪ್ರಕಟಿಸಿದೆ.

ಸಿ ಗುಂಪಿನ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ 5ರಷ್ಟು ಮೀಸಲಾತಿ ನೀಡಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ. ಇದಲ್ಲದೆ, ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. ಅಲ್ಲದೆ, ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ

Previous Post
ಉತ್ತರ ಕನ್ನಡ ಜಿಲ್ಲೆಯ ಭೂ ಕುಸಿತ ದುರಂತ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Next Post
ಜುಲೈ ಅಂತ್ಯಕ್ಕೆ ಬಿಜೆಪಿ ಆಡಳಿತ ರಾಜ್ಯಗಳ ಸಭೆ

Recent News