ಮೈಕ್ರೋಸಾಫ್ಟ್ ಸಾಫ್ಟವೇರ್ ನಲ್ಲಿ ತಾಂತ್ರಿಕ ಸಮಸ್ಯೆ ವಿಶ್ವದ್ಯಾಂತ ಹಲವು ವಲಯಗಳಲ್ಲಿ ದೊಡ್ಡ ಸಮಸ್ಯೆ

ಮೈಕ್ರೋಸಾಫ್ಟ್ ಸಾಫ್ಟವೇರ್ ನಲ್ಲಿ ತಾಂತ್ರಿಕ ಸಮಸ್ಯೆ ವಿಶ್ವದ್ಯಾಂತ ಹಲವು ವಲಯಗಳಲ್ಲಿ ದೊಡ್ಡ ಸಮಸ್ಯೆ

ನವದೆಹಲಿ : ಮೈಕ್ರೋಸಾಫ್ಟ್ ಸಾಫ್ಟವೇರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ವಿಶ್ವದ್ಯಾಂತ ಹಲವು ವಲಯಗಳಲ್ಲಿ ದೊಡ್ಡ ಸಮಸ್ಯೆ ಕಂಡು ಬಂದಿದೆ. ಲಕ್ಷಾಂತರ ಜನ ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ದಿಢೀರ್ ಎಂದು ಸಿಸ್ಟಮ್ ಆಫ್ ಆಗುವುದು ಅಥವಾ ರೀಸ್ಟಾರ್ಟ್ ಆಗುವುದು ಸಮಸ್ಯೆಗೆ ಕಾರಣವಾಗಿದೆ. ಇದನ್ನು ತಾಂತ್ರಿಕ ಭಾಷೆಯಲ್ಲಿ ಬ್ಲೂ ಸ್ಕ್ರೀನ್ ಡೆತ್ ಎಂದು ಕರೆಯಲಾಗುತ್ತದೆ.

ಮೆಕ್ರೋಸಾಫ್ಟ್‌ನ 365ಕ್ಕೂ ಹೆಚ್ಚು ಆಪ್‌ಗಳಿದ್ದು, ಇದೆಲ್ಲವುಗಳು ಸಮಸ್ಯೆ ತೋರಿಸುತ್ತಿದ್ದು, ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಇತ್ತೀಚಿನ ಜಾಗತಿಕ ಸೈಬರ್ ಭದ್ರತಾ ಸಂಸ್ಥೆ ಕ್ರೌಡ್‌ಸ್ಟ್ರೈಕ್‌ನಲ್ಲಿ ಮಾಡಿದ ಹೊಸ ಅಪ್‌ಡೇಟ್‌ನ ನಂತರ ಈ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಇಂದು ಮುಂಜಾನೆಯಿಂದ ಈ ಸಮಸ್ಯೆ ಆರಂಭವಾಗಿದ್ದು, ಇದು ಜಾಗತಿಕ ಮಟ್ಟದ ಹಲವು ಕಂಪನಿಗಳ ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿತು.

ಭಾರತ, ಅಮೆರಿಕಾ, ಆಸ್ಟ್ರೇಲಿಯಾ ಸೇರಿ ಹಲವು ದೇಶಗಳಲ್ಲಿ ಸಾಫ್ಟವೇರ್ ಕ್ರ್ಯಾಶ್ ಪರಿಣಾಮ ಐಟಿ ವಲಯದಿಂದ ಹಿಡಿದು ಫ್ಲೈಟ್‌ಗಳಿಂದ ಬ್ಯಾಂಕಿಂಗ್, ಹೆಲ್ತ್, ಸೂಪರ್‌ಮಾರ್ಕೆಟ್‌ಗಳವರೆಗೆ ಎಲ್ಲ ಕಾರ್ಯಾಚರಣೆಗಳಲ್ಲಿ ಅಡಚಣೆ ವರದಿಯಾಗಿದೆ. ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಮೈಕ್ರೋಸಾಫ್ಟ್‌ ಸ್ಥಗಿತದಿಂದ ಪರಿಣಾಮ ಎದುರಿಸಿದೆ.

ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್, ಡೆಲ್ಟಾ, ಯುನೈಟೆಡ್ ಮತ್ತು ಅಮೇರಿಕನ್ ಏರ್ಲೈನ್ಸ್ ಸೇರಿದಂತೆ ಅಮೇರಿಕಾದ ಹಲವಾರು ಪ್ರಮುಖ ಏರ್ಲೈನ್ಸ್ಗಳ ಎಲ್ಲಾ ವಿಮಾನಗಳನ್ನು ಸಂವಹನ ಸಮಸ್ಯೆ ಎದುರಿಸಿವೆ. ಅಮೇರಿಕಾದ ಹಲವಾರು ರಾಜ್ಯಗಳಲ್ಲಿ 911 ತುರ್ತು ಸೇವೆಗಳು ಸಹ ಹಾನಿಗೊಳಗಾಗಿವೆ.

ಬ್ರಿಟಿಷ್ ಸುದ್ದಿ ವಾಹಿನಿ ಸ್ಕೈ ನ್ಯೂಸ್ ಕೂಡಾ ಪ್ರಸಾರ ರದ್ದಾಗಿತ್ತು. ಭಾರತದಲ್ಲೂ ವಿಮಾನಯಾನ ಸೇರಿ ಹಲವು ವಯಲಗಳಲ್ಲಿ ಸಮಸ್ಯೆ ಕಂಡು ಬಂತು. ಮೈಕ್ರೋಸಾಫ್ಟ್ 365 ಅವರು ಸಮಸ್ಯೆಯನ್ನು ತನಿಖೆ ಮಾಡುತ್ತಿದ್ದಾರೆ ಮತ್ತು ಕೆಲವು ಕ್ಷಣಗಳಲ್ಲೇ ಸಮಸ್ಯೆ ಬಗೆಹರಿಯುವ ಮೈಕ್ರೋಸಾಫ್ಟ್ ಭರವಸೆ ನೀಡಿದೆ.

ಭಾರತದಲ್ಲಿ ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ – ಬುಕಿಂಗ್, ಚೆಕ್-ಇನ್ ಮತ್ತು ಫ್ಲೈಟ್‌ಗಳ ಮೇಲೆ ಪರಿಣಾಮ ಬೀರಿದೆ. ಮೈಕ್ರೋಸಾಫ್ಟ್ ಕೈಕೊಟ್ಟ ಪರಿಣಾಮ ಪ್ರಯಾಣಿಕರನ್ನು ವ್ಯಕ್ತಿಗತವಾಗಿ ಪರಿಶೀಲನೆ ಮಾಡಲಾಗುತ್ತಿದ್ದು, ಪ್ರಯಾಣಿಕರಿಗೆ ವಿಳಂಬವಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ವ್ಯವಸ್ಥೆಗಳು ಸ್ಥಗಿತಗೊಂಡಿತ್ತು.

ಯಾವ ಸಾಫ್ಟ್ ವೇರ್ ಗಳಲ್ಲಿ ತೊಂದರೆ?

ಪವರ್ ಬಿಐ, ಮೈಕ್ರೋಸಾಫ್ಟ್ ಫ್ಯಾಬ್ರಿಕ್, ಮೈಕ್ರೋಸಾಫ್ಟ್ ಟೀಮ್ಸ್, ಮೈಕ್ರೋಸಾಫ್ಟ್ 365 ಅಡ್ಮಿನ್ ಸೆಂಟರ್, ಮೈಕ್ರೋಸಾಫ್ಟ್ ಪರ್ವ್ಯೂ, ವಿವಾ ಎಂಗೇಜ್ ಎಂಬ ಸಾಫ್ಟ್ ವೇರ್ ಗಳಲ್ಲಿ ಈ ರೀತಿಯ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದಲ್ಲದೆ, ಮೈಕ್ರೋಸಾಫ್ಟ್ ಡಿಫೆಂಡರ್, ಮೈಕ್ರೋಸಾಫ್ಟ್ ಡಿಫೆಂಡರ್ ಫಾರ್ ಎಂಡ್ ಪಾಯಿಂಟ್, ಮೈಕ್ರೋಸಾಫ್ಟ್ ಇನ್ ಟ್ಯೂನ್, ಮೈಕ್ರೋಸಾಫ್ಟ್ ಒನ್ ನೋಟ್, ಒನ್ ಡ್ರೈವ್ ಫಾರ್ ಬ್ಯುಸಿನೆಸ್, ಶೇರ್ ಪಾಯಿಂಟ್ ಆನ್ ಲೈನ್, ವಿಂಡೋಸ್ 365 ಅಡಿಯಲ್ಲಿನ ಕ್ಲೌಡ್ ಪಿಸಿಗಳಲ್ಲೂ ಈ ರೀತಿಯ ತೊಂದರೆಗಳು ಕಾಣಿಸಿಕೊಂಡಿವೆ.

Previous Post
ಕನ್ವರ್ ಯಾತ್ರೆ ; ಅಂಗಡಿ ಮಾಲೀಕರು ಗುರುತು ಬಹಿರಂಗಪಡಿಸಲು ಆದೇಶ
Next Post
ಪರಿಸರ ಸಂರಕ್ಷಣಾ ಕಾಯ್ದೆ ಉಲ್ಲಂಘನೆಗೆ ಟೀಕಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

Recent News