ಯಾವ ಕಾರಣಕ್ಕೂ ಇಸ್ಲಾಮಿಕ್ ಭಯೋತ್ಪಾದನೆ ಸಹಿಸಲಾರೆ – ಟ್ರಂಪ್ ಗುಡುಗು!
ವಾಷಿಂಗ್ಟನ್: ಯಾವುದೇ ಕಾರಣಕ್ಕೂ ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಹಿಸಲಾಗದು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಷ್ಯಾ- ಉಕ್ರೇನ್ ಯುದ್ಧವನ್ನು ನಿಲ್ಲಿಸುತ್ತೇನೆ.
ಆದರೆ ಅದು ನಿಜವಾದ ಸಮಸ್ಯೆ ಸವಾಲು ಅಲ್ಲ. ಇಸ್ಲಾಮಿಕ್ ಭಯೋತ್ಪಾದನೆ ನಿಜವಾದ ಸಮಸ್ಯೆ. ಅದು ಕ್ಯಾನ್ಸರ್ನಂತೆ ಜಗತ್ತಿಡೀ ವ್ಯಾಪಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ನಾನು ಅಮೆರಿಕದ ಅಧ್ಯಕ್ಷನಾದರೆ ಐಸಿಸ್ ಅನ್ನು ಸಂಪೂರ್ಣ ನಾಶ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಟ್ರಂಪ್ ಇಸ್ಲಾಮಿಕ್ ಭಯೋತ್ಪಾದನೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ಇಸ್ಲಾಂ ನಮ್ಮನ್ನು ದ್ವೇಷಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಮಾರ್ಚ್ 2016 ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದು ಇಸ್ಲಾಂ ಧರ್ಮ ಅಥವಾ ಧರ್ಮದ ಬಗ್ಗೆ ಚರ್ಚೆಯಲ್ಲ. ಇದು ಆಮೂಲಾಗ್ರ ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಎಂದೂ ಟ್ರಂಪ್ ಈ ಹಿಂದೆ ರೇಡಿಯೊ ಸಂದರ್ಶನವೊಂದರಲ್ಲಿ ಹೇಳಿದ್ದರು.