ಅಗ್ನಿವೀರ್ ಯೋಜನೆ ರದ್ದು ಮಾಡುವೆವು: ಅಖಿಲೇಶ್

ಅಗ್ನಿವೀರ್ ಯೋಜನೆ ರದ್ದು ಮಾಡುವೆವು: ಅಖಿಲೇಶ್

ನವದೆಹಲಿ, ಜು. 27: “ನಾವು ಅಧಿಕಾರಕ್ಕೆ ಬಂದ ತಕ್ಷಣ ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸುತ್ತೇವೆ” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವೃತ್ತ ಅಗ್ನಿವೀರರಿಗೆ ಮೀಸಲಾತಿ ಘೋಷಿಸಿದ ಒಂದು ದಿನದ ನಂತರ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ನಾವು ಅಧಿಕಾರಕ್ಕೆ ಬಂದ ತಕ್ಷಣ, ದೇಶದ ಭದ್ರತೆಗೆ ರಾಜಿ ಮಾಡಿಕೊಳ್ಳುವ ಮತ್ತು ಸೈನಿಕರ ಭವಿಷ್ಯದ ಜೊತೆ ಆಟವಾಡುವ ಅಲ್ಪಾವಧಿಯ ‘ಅಗ್ನಿವೀರ್’ ಸೇನಾ ನೇಮಕಾತಿಯನ್ನು 24 ಗಂಟೆಗಳಲ್ಲಿ ರದ್ದುಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ. “ಅಗ್ನಿವೀರ್‌ನಲ್ಲಿ ಇದು ನಮ್ಮ ಬೇಡಿಕೆಯಾಗಿದೆ. ಹಳೆಯ ನೇಮಕಾತಿ (ಮಾದರಿ) ಅನ್ನು ಮರುಸ್ಥಾಪಿಸಬೇಕು” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ನೇಮಕಾತಿಯಲ್ಲಿ ಸೇವೆಯಿಂದ ಹಿಂದಿರುಗಿದ ಅಗ್ನಿವೀರರಿಗೆ ಉತ್ತರ ಪ್ರದೇಶ ಸರ್ಕಾರವು ನೇಮಕಾತಿ ನೀಡಲಿದೆ ಎಂದು ಸಿಎಂ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ.

Previous Post
ದೇಶದಲ್ಲಿ ಅತಿಹೆಚ್ಚು ಸ್ಟಾರ್ಟ್‌ಅಪ್‌ಗಳು ನೋಂದಣಿಯಾಗಿರುವ ಎರಡನೇ ರಾಜ್ಯ ಕರ್ನಾಟಕ
Next Post
ನೀತಿ ಆಯೋಗದ ಸಭೆಯಲ್ಲಿ ಮಾತನಾಡಲು ಬಿಟ್ಟಿಲ್ಲ: ಮಮತಾ ಬ್ಯಾನರ್ಜಿ

Recent News