ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಗೆ ನುಗ್ಗಿದ ಮಳೆ ನೀರು ಮೂವರು ವಿದ್ಯಾರ್ಥಿಗಳ ಧಾರುಣ ಸಾವು

ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಗೆ ನುಗ್ಗಿದ ಮಳೆ ನೀರು ಮೂವರು ವಿದ್ಯಾರ್ಥಿಗಳ ಧಾರುಣ ಸಾವು

IAS ಆಕಾಂಕ್ಷಿಗಳ ಪ್ರತಿಭಟನೆ | ಇಬ್ಬರು ವಶಕ್ಕೆ | ತನಿಖೆ ಆರಂಭಿಸಿದ ಪೊಲೀಸರು

ನವದೆಹಲಿ : ಹಳೆ ರಾಜೇಂದರ್‌ ನಗರದಲ್ಲಿರುವ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಗೆ ಕಳೆದ ರಾತ್ರಿ ಮಳೆ ನೀರು ನುಗ್ಗಿದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ, ಮೃತದೇಹವನ್ನು ಹೊರತೆಗೆಯಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕೋಚಿಂಗ್ ಕೇಂದ್ರ ನೆಲಮಾಳಿಗೆಯಲ್ಲಿ ಗ್ರಂಥಾಲಯವಿತ್ತು, ಇಲ್ಲಿ ಮೂವರು ವಿದ್ಯಾರ್ಥಿಗಳು ಓದುತ್ತಿದ್ದರು. ಸಂಜೆ ಏಳು ಗಂಟೆಗೆ ವೇಳೆಗೆ ಏಕಾಏಕಿ ನೆಲ ಮಾಳಿಗೆಗೆ ನೀರು ತುಂಬಿಕೊಂಡಿತು, ಈ ವೇಳೆ ವಿದ್ಯಾರ್ಥಿಗಳು ಹೊರ ಬರಲಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ‌ ತನಿಖೆಯಲ್ಲಿ ಗೊತ್ತಾಗಿದೆ.

ಮೃತ ವಿದ್ಯಾರ್ಥಿಗಳನ್ನು ತೆಲಂಗಾಣದ ತಾನಿಯಾ,
ಕೇರಳದ ನವೀನ್, ಉತ್ತರ ಪ್ರದೇಶದ ಶ್ರೇಯಾ ಎಂದು ಗುರುತಿಸಿದೆ. ವಿದ್ಯಾರ್ಥಿಗಳು ಸಿಲುಕಿದಾಗ ಅವರನ್ನು ಹಗ್ಗದ ಮೂಲಕ ಹೊರಗೆ ಕರೆ ತರುವ ಪ್ರಯತ್ನ ನಡೆಯಿತು, ಆದರೆ ಪಿಠೋಪಕರಣಗಳು ಅಡ್ಡಿಯಾದ ಹಿನ್ನಲೆ ಈ ಪ್ರಯತ್ನ ಯಶಸ್ವಿಯಾಗಿಲಿಲ್ಲ ಎಂದು ಸ್ಥಳೀಯ ವಿದ್ಯಾರ್ಥಿಗಳು ಹೇಳಿದ್ದಾರೆ.

ಪ್ರಕರಣ ಸಂಬಂಧ ಕೋಚಿಂಗ್ ಸೆಂಟರ್​ ಮಾಲೀಕ, ಕೋಚಿಂಗ್ ಸೆಂಟರ್ ಮಾಲೀಕ ಮತ್ತು ಸಂಯೋಜಕರ ಬಂಧಿಸಿ ತನಿಖೆ ಆರಂಭಿಸಿದೆ. ಕೋಚಿಂಗ್​ ಸೆಂಟರ್‌ನಿಂದ ನಿಯಮ ಉಲ್ಲಂಘಿಸಿದೆ ನೆಲಮಾಳಗಿಯಲ್ಲಿ ಪಾರ್ಕಿಂಗ್ ಮತ್ತು ಸ್ಟೋರ್ ರೂಂಗಾಗಿ ಇನ್‌ಸ್ಟಿಟ್ಯೂಟ್ 09 ಜುಲೈ 2024 ರಂದು NOC ಪಡೆದಿದೆ ಆದರೆ ಇಲ್ಲಿ ನಿಯಮ ಪಾಲನೆ ಮಾಡದೆ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸುಮಾರು ಸಂಜೆ 7 ಗಂಟೆಗೆ ಕೋಚಿಂಗ್ ಸೆಂಟರ್‌ನಲ್ಲಿ ನೀರು ತುಂಬಿರುವ ಕುರಿತು ತಮಗೆ ಕರೆ ಬಂದಿತ್ತು. ಕೆಲವರು ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ ಎಂದು ಕರೆ ಮಾಡಿದವರು ನಮಗೆ ತಿಳಿಸಿದರು. ಸಂಪೂರ್ಣ ನೆಲಮಾಳಿಗೆಯು ಹೇಗೆ ಜಲಾವೃತವಾಯಿತು ಎಂಬುದನ್ನು ನಾವು ತನಿಖೆ ನಡೆಸುತ್ತಿದ್ದೇವೆ. ನೆಲಮಾಳಿಗೆಯು ಅತ್ಯಂತ ವೇಗವಾಗಿ ಜಲಾವೃತಗೊಂಡಿತು, ಇದರಿಂದಾಗಿ ಕೆಲವರು ಒಳಗೆ ಸಿಲುಕಿಕೊಂಡರು ಎಂದು ಡಿಸಿಪಿ ಹರ್ಷವರ್ಧನ್ ತಿಳಿಸಿದ್ದಾರೆ.

ಘಟನೆ ನಡೆದ ಕೂಡಲೇ ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಘಟನೆಯ ಕುರಿತು ತನಿಖೆ ಆರಂಭಿಸಿ 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸಚಿವೆ ಅತಿಶಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಸೂಚಿಸಿದರು. ಈ ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಈ ಘಟನೆಗೆ ಹೊಣೆಗಾರರಾದವರನ್ನು ಬಿಡಲಾಗುವುದಿಲ್ಲ ಎಂದು ಅತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಮತ್ತು ನವದೆಹಲಿ ಸಂಸದ ಬಾನ್ಸುರಿ ಸ್ವರಾಜ್ ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ಎಎಪಿ ಆಡಳಿತವನ್ನು ದೂಷಿಸಿದರು, ಸ್ಥಳೀಯ ಶಾಸಕರು ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಪದೇ ಪದೇ ಮಾಡಿದ ಮನವಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೆಹಲಿ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯವು ಈ ಅವಘಡಕ್ಕೆ ಕಾರಣವಾಗಿದೆ. ಜಲ ಮಂಡಳಿಯ ಸಚಿವೆ ಅತಿಶಿ ಮತ್ತು ಸ್ಥಳೀಯ ಶಾಸಕ ದುರ್ಗೇಶ್ ಪಾಠಕ್ ಜವಾಬ್ದಾರಿ ವಹಿಸಿ ರಾಜೀನಾಮೆ ನೀಡಬೇಕು ಎಂದು ಸಚ್‌ದೇವ ಒತ್ತಾಯಿಸಿದ್ದಾರೆ.

Previous Post
ಜೈಲಿನಿಂದ ಬಿಡುಗಡೆಯಾದ ಗ್ಯಾಂಗ್​​ಸ್ಟರ್​​ಗೆ ಸ್ವಾಗತಕೋರಿ ರ‍್ಯಾಲಿ
Next Post
ಇಂಡಿಯಾ ಸಿಮೆಂಟ್ಸ್ 32.72% ಪಾಲು ಪಡೆಯಲು ಅಲ್ಟ್ರಾಟೆಕ್ ನಿರ್ಧಾರ

Recent News