ಕರ್ನಾಟಕದ ಹಕ್ಕುಗಳನ್ನು ನಾವು ಎಂದಿಗೂ ಕಿತ್ತುಕೊಂಡಿಲ್ಲ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕರ್ನಾಟಕದ ಹಕ್ಕುಗಳನ್ನು ನಾವು ಎಂದಿಗೂ ಕಿತ್ತುಕೊಂಡಿಲ್ಲ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು : ಕರ್ನಾಟಕದ ಹಕ್ಕುಗಳನ್ನು ನಾವು ಎಂದಿಗೂ ಕಿತ್ತುಕೊಂಡಿಲ್ಲ, ಕೇಂದ್ರ ಸರ್ಕಾರದ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಯುಪಿಎ ಸರಕಾರ ಹತ್ತು ವರ್ಷದ ಅವಧಿಯಲ್ಲಿ 81 ಸಾವಿರ ಕೋಟಿ ರೂ. ನೀಡಿದರೆ ನಾವು ಕಳೆದ 10 ವರ್ಷಗಳಲ್ಲಿ ಕರ್ನಾಟಕದ ಅಭಿವೃದ್ಧಿಗೆ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಬಜೆಟ್ ನೀಡಿದೆ. ಆದರೆ ಕರ್ನಾಟಕ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಕರ್ನಾಟಕದ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಜನರಿಗೆ ಹೇಳುತ್ತಿದೆ ರಾಜ್ಯ ಸರ್ಕಾರ ಮಾಡುತ್ತಿರುವುದು ಯಾರಿಗೂ ಪ್ರಯೋಜನವಾಗುತ್ತಿಲ್ಲ ಎಂದರು.

ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ 2004ರಿಂದ 2014ರವರೆಗಿನ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಕೇವಲ 81,791 ಕೋಟಿ ರೂ ಅನುದಾನ ಘೋಷಿಸಿದೆ ಕೇವಲ 60,779 ಕೋಟಿ ಅನುದಾನ ನೀಡಿದೆ. 2014ರಿಂದ 24ರ ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ 2,95,818 ರೂ ಘೋಷಿಸಿದೆ 2,39,955 ಕೋಟಿ ರೂ ನೀಡಿದೆ ಎಂದರು.

ಬಜೆಟ್ ನಲ್ಲಿ ಉದ್ಯೋಗ ಎಂಬ ಪದ ಬಳಸಿದ್ದೇನೆ ಪ್ರತಿಯೊಂದು ಅಕ್ಷರಕ್ಕೂ ಒಂದು ಅರ್ಥವಿದೆ. ಇ ಎಂದರೆ ಉದ್ಯೋಗ, ಎಂ ಎಂದರೆ ಮಧ್ಯಮ ವರ್ಗ, ಅದೇ ರೀತಿ ಪ್ರತಿ ಅಕ್ಷರಕ್ಕೂ ಒಂದೊಂದು ಅರ್ಥವಿದೆ. ಎಲ್ಲವನ್ನೂ ಈ ಬಜೆಟ್‌ನಲ್ಲಿ ಸೇರಿಸಲಾಗಿದೆ. ಬಜೆಟ್‌ನಲ್ಲಿ ನಾವು ಯುವಕರು ಮತ್ತು ಎಂಎಸ್‌ಎಂಇಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಎಂಎಸ್‌ಎಂಇಗಳು ಸಾಕಷ್ಟು ಸೌಲಭ್ಯಗಳನ್ನು ಪಡೆಯಲಿವೆ. ನಾವು ಉನ್ನತ ಶಿಕ್ಷಣಕ್ಕಾಗಿ ಹತ್ತು ಲಕ್ಷ ಸಬ್ಸಿಡಿ ಅಥವಾ ಬಡ್ಡಿ ಸಹಾಯದ ಸಾಲಗಳನ್ನು ನೀಡುತ್ತಿದ್ದೇವೆ. ಇದು ಮಧ್ಯಮ ವರ್ಗದ ಕುಟುಂಬಗಳು ಮತ್ತು ಭಾರತದಲ್ಲಿ ಓದುತ್ತಿರುವ ಯುವಕರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದರು.

Previous Post
IAS ಆಕಾಂಕ್ಷಿಗಳ ಸಾವು; ರಾಹುಲ್ ಗಾಂಧಿ ಸಂತಾಪ
Next Post
ಮೇಘಾಲಯದ ರಾಜ್ಯಪಾಲರಾಗಿ ಮಾಜಿ ಸಂಸದ ಸಿ ಹೆಚ್‌ ವಿಜಯ್‌ ಶಂಕರ್‌ ನೇಮಕ

Recent News