25 ಕೋಚಿಂಗ್ ಸೆಂಟರ್‌ಗಳ ಬೇಸ್‌ಮೆಂಟ್ ಸೀಲ್

25 ಕೋಚಿಂಗ್ ಸೆಂಟರ್‌ಗಳ ಬೇಸ್‌ಮೆಂಟ್ ಸೀಲ್

ನವದೆಹಲಿ: ಓಲ್ಡ್ ರಾಜೇಂದರ್ ನಗರದ ರಾವ್ಸ್ ಐಎಎಸ್ ಕೋಚಿಂಗ್ ಸೆಂಟರ್ ನ ತಳಮಹಡಿಯಲ್ಲಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿನ ನಂತರ ಎಚ್ಚೆತ್ತುಕೊಂಡಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ), 25 ಅಕ್ರಮ ಬೇಸ್‌ಮೆಂಟ್ ಕೋಚಿಂಗ್ ಸೆಂಟರ್‌ಗಳನ್ನು ಸೀಲ್ ಮಾಡಿದೆ.

ಎಂಸಿಡಿ ಅಧಿಕೃತ ಮಾಹಿತಿಯ ಪ್ರಕಾರ ಜುಲೈ 28 ರಿಂದ ಜುಲೈ 31 ರವರೆಗೆ ನಗರದ ವಿವಿಧ ಭಾಗಗಳಲ್ಲಿರುವ ಕೋಚಿಂಗ್ ಸೆಂಟರ್‌ಗಳು, ಕಚೇರಿಗಳು ಅಥವಾ ಇತರ ವಾಣಿಜ್ಯ ಸಂಸ್ಥೆಗಳಾಗಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 25 ಬೇಸ್‌ಮೆಂಟ್‌ಗಳಿಗೆ ಸೀಲ್ ಮಾಡಿದೆ. ಈ ಅವಧಿಯಲ್ಲಿ 17 ಆಸ್ತಿ ಮಾಲೀಕರಿಗೆ ದೆಹಲಿ ಮಹಾನಗರ ಪಾಲಿಕೆ ಶೋಕಾಸ್ ನೋಟಿಸ್ ನೀಡಿದೆ.

ಮಧ್ಯ ದೆಹಲಿಯ ರಾಜೇಂದರ್ ನಗರ ಮತ್ತು ಪಶ್ಚಿಮ ದೆಹಲಿಯ ಪಟೇಲ್ ನಗರ ಮತ್ತು ರಂಜೀತ್ ನಗರ ಪ್ರದೇಶಗಳಲ್ಲಿನ ಕೋಚಿಂಗ್ ಸೆಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಓಲ್ಡ್ ರಾಜೇಂದರ್ ನಗರವೊಂದರಲ್ಲೇ, ಬಾರಾ ಬಜಾರ್ ಮಾರ್ಗದ ಸ್ಟ್ರೆಚ್‌ನಲ್ಲಿ 18 ಬೇಸ್‌ಮೆಂಟ್‌ಗಳನ್ನು ಸೀಲ್ ಮಾಡಲಾಗಿದೆ.

ಈ ಮೂರು ಪ್ರದೇಶಗಳಲ್ಲಿ ಒಟ್ಟು 15 ಆಸ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಅವುಗಳಲ್ಲಿ ಏಳು ಓಲ್ಡ್ ರಾಜೇಂದರ್ ನಗರದಲ್ಲಿವೆ. ಜುಲೈ 28 ರಿಂದ ಜುಲೈ 31 ರವರೆಗೆ ಸುಮಾರು 185 ಆಸ್ತಿಗಳನ್ನು ಎಂಸಿಡಿ ಸಮೀಕ್ಷೆ ನಡೆಸಿದೆ. ಕಾನೂನಿಗೆ ವಿರುದ್ಧವಾಗಿ ನೆಲಮಾಳಿಗೆಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿದ್ದಕ್ಕಾಗಿ ಸೀಲಿಂಗ್ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಹೇಳಿದೆ

Previous Post
ಪ್ರೊ. ಅರಿಂದಮ್ ಘೋಷ್ ಅವರಿಗೆ ಅಭಿನಂದನೆ ಸಲ್ಲಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ಮಧ್ಯಪ್ರಾಚ್ಯ ಉದ್ವಿಗ್ನತೆ ; ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ

Recent News