ಮಧ್ಯಪ್ರಾಚ್ಯ ಉದ್ವಿಗ್ನತೆ ; ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ

ಮಧ್ಯಪ್ರಾಚ್ಯ ಉದ್ವಿಗ್ನತೆ ; ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ

ನವದೆಹಲಿ : ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದಾಗಿ ಇಸ್ರೇಲ್‌ನ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ತನ್ನ ವಿಮಾನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿರುವುದಾಗಿ ಏರ್ ಇಂಡಿಯಾ ಶುಕ್ರವಾರ ತಿಳಿಸಿದೆ. ಆಗಸ್ಟ್ 8 ರವರೆಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ನಾವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಈ ಅವಧಿಯಲ್ಲಿ ಟೆಲ್ ಅವಿವ್‌ಗೆ ಮತ್ತು ಅಲ್ಲಿಂದ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರೊಂದಿಗೆ ಸಂಪರ್ಕಿಸುತ್ತಿದ್ದೇವೆ, ಪ್ರಯಾಣ ಮರುಹೊಂದಿಕೆ ಮತ್ತು ಪ್ರಯಾಣ ದರ ರದ್ದತಿ ಶುಲ್ಕಗಳ ಮರುಪಾವತಿಸುವ ಬಗ್ಗೆ ಮಾತನಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ನಮ್ಮ ಅತಿಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಅಗ್ರಗಣ್ಯ ಆದ್ಯತೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಕೇಂದ್ರವನ್ನು 011-69329333 / 011-69329999 ಗೆ ಕರೆ ಮಾಡಿ ಎಂದು ಹೇಳಿಕೆ ಸೇರಿಸಲಾಗಿದೆ. ಏರ್ ಇಂಡಿಯಾ ಪ್ರತಿ ವಾರ ದೆಹಲಿಯಿಂದ ಟೆಲ್ ಅವೀವ್‌ಗೆ ನಾಲ್ಕು ವಿಮಾನಗಳನ್ನು ನಿರ್ವಹಿಸುತ್ತದೆ.

ತನ್ನ ವೆಬ್‌ಸೈಟ್‌ನಲ್ಲಿ ಮತ್ತೊಂದು ಅಪ್‌ಡೇಟ್‌ನಲ್ಲಿ, ಏರ್ ಇಂಡಿಯಾ ಕಾರ್ಯಾಚರಣೆಯ ಕಾರಣಗಳಿಂದಾಗಿ ಆಗಸ್ಟ್ 1 ರಂದು ದೆಹಲಿಯಿಂದ ಟೆಲ್ ಅವೀವ್‌ಗೆ AI139 ಮತ್ತು ಟೆಲ್ ಅವೀವ್‌ನಿಂದ ದೆಹಲಿಗೆ ಬರಬೇಕಿದ್ದ AI140 ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಹೇಳಿದೆ. ಪ್ರಯಾಣಿಕರ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಎಂದು ಅದು ಹೇಳಿದೆ

Previous Post
25 ಕೋಚಿಂಗ್ ಸೆಂಟರ್‌ಗಳ ಬೇಸ್‌ಮೆಂಟ್ ಸೀಲ್
Next Post
20 ದಿನಗಳಲ್ಲಿ 13 ಮಕ್ಕಳು ಸಾವು ದೆಹಲಿ ಸರ್ಕಾರದ ವಿಶೇಷ ಚೇತನರ ಆಶ್ರಯಧಾಮದಲ್ಲಿ ಆತಂಕ

Recent News