ಅಂತಾರಾಷ್ಟ್ರೀಯ ಕ್ರೀಡಾಕೂಟ ಪದಕ ಗೆದ್ದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ

ಅಂತಾರಾಷ್ಟ್ರೀಯ ಕ್ರೀಡಾಕೂಟ ಪದಕ ಗೆದ್ದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ

ಬೆಂಗಳೂರು: ರಾಜ್ಯದ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ (Government Job) ಲಭಿಸಿದೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ 12 ಕ್ರೀಡಾಪಟುಗಳಿಗೆ ಗ್ರೂಪ್ ಎ, ಬಿ ಹುದ್ದೆಗಳ ನೇಮಕಾತಿ ಸಂಬಂಧ ಸಿಎಂ ಸಿದ್ದರಾಮಯ್ಯಅವರು ಭಾನುವಾರ ನೇಮಕಾತಿ ಪತ್ರವನ್ನು ವಿತರಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು.

ಸರ್ಕಾರಿ ಹುದ್ದೆ ಪಡೆದ ಕ್ರೀಡಾಪಟುಗಳು

ಗಿರೀಶ್ ಎಚ್.ಎನ್ – ಕ್ಲಾಸ್ ಒನ್ ಆಫೀಸರ್ ಹುದ್ದೆ
ದಿವ್ಯಾ.ಟಿ.ಎಸ್- ಗ್ರೂಪ್ ಬಿ ಹುದ್ದೆ
ಉಷಾರಾಣಿ ಎನ್- ಗ್ರೂಪ್ ಬಿ ಹುದ್ದೆ
ಸುಷ್ಮಿತ ಪವಾರ್ ಒ- ಗ್ರೂಪ್ ಬಿ ಹುದ್ದೆ
ನಿಕ್ಕಿನ್ ತಿಮ್ಮಯ್ಯ ಸಿ.ಎ- ಗ್ರೂಪ್ ಬಿ
ಎಸ್.ವಿ.ಸುನೀಲ್ -ಗ್ರೂಪ್ ಬಿ ಹುದ್ದೆ
ಕಿಶನ್ ಗಂಗೊಳ್ಳಿ- ಗ್ರೂಪ್ ಬಿ ಹುದ್ದೆ
ರಾಘವೇಂದ್ರ- ಗ್ರೂಪ್ ಬಿ ಹುದ್ದೆ
ರಾಧಾ ವಿ- ಗ್ರೂಪ್ ಬಿ ಹುದ್ದೆ
ಶರತ್ ಎಂ.ಎಸ್- ಗ್ರೂಪ್ ಬಿ ಹುದ್ದೆ
ಗುರುರಾಜ – ಗ್ರೂಪ್ ಬಿ ಹುದ್ದೆ
ಮಲಪ್ರಭಾ ಯಲ್ಲಪ್ಪ ಜಾಧವ- ಗ್ರೂಪ್ ಬಿ ಹುದ್ದೆ

ಸಿಎಂ ಅಭಿನಂದನೆ

ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ ಸಹಾಯ ಮಾಡಬೇಕು ಎಂದು ನಮ್ಮ ಸರ್ಕಾರ ಉದ್ಯೋಗ ನೀಡುತ್ತಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಕ್ಲಾಸ್-1 , ಏಷ್ಯಯನ್ ಗೇಮ್ಸ್ ವಿಜೇತರಿಗೆ ಕ್ಲಾಸ್ -2 ಹುದ್ದೆ ನೀಡಲಾಗುತ್ತಿದೆ. 12 ಮಂದಿ ಅರ್ಹ ಕ್ರೀಡಾಪಟುಗಳಿಗೆ ನೇರ ನೇಮಕಾತಿಯ ಉದ್ಯೋಗ ಪತ್ರ ನೀಡಲಾಗಿದೆ. ಅರಣ್ಯ ಹಾಗೂ ಪೋಸಿಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ‌ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. 12 ಮಂದಿ ಪದಕ ವಿಜೇತ ಸಾಧಕರಿಗೆ 11 ಜನರಿಗೆ ಕ್ಲಾಸ್ -2 ಹುದ್ದೆ ಹಾಗೂ ಒಬ್ಬರಿಗೆ ಕ್ಲಾಸ್-1 ಹುದ್ದೆ ನೀಡಲಾಇದೆ. 45 ವರ್ಷಗಳ ಒಳಗೆ ಉದ್ಯೋಗಕ್ಕೆ ಸೇರಲು ಅವಕಾಶ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಭಾರತ ಜನಸಂಖ್ಯೆಯಲ್ಲಿ ನಂಬರ್ 1 ಸ್ಥಾನದಲ್ಲಿದೆ, ಸದ್ಯ 143 ಕೋಟಿ ಜನಸಂಖ್ಯೆ ಇದೆ. ಹೆಚ್ಚು ಜನರು ಕ್ರೀಡೆಗಳಲ್ಲಿ ಭಾಗವಹಿಸಬೇಕು, ಹೆಚ್ಚು ಪ್ರೋತ್ಸಾಹ ಕೊಡುವುದು ಸರ್ಕಾರದ ಜವಾಬ್ದಾರಿ. ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತೇವೆ. ನೌಕರಿ ಪಡೆದ ತಮಗೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.

ಕಾರ್ಯಕ್ರದಲ್ಲಿ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ, ಎಂಎಲ್‌ಸಿ ಗೋವಿಂದರಾಜು, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್ ಪ್ರಸಾದ್, ಇಲಾಖೆ ಆಯುಕ್ತ ಆರ್.ಚೇತನ್ ಸೇರಿ ಹಲವರು ಉಪಸ್ಥಿತರಿದ್ದರು.

Previous Post
ದೇಶದ ಮೊದಲ ಕೆಎಚ್ಐಆರ್ ಸಿಟಿ ಯೋಜನೆಗೆ ಚಾಲನೆ
Next Post
ಎಂಸಿಡಿಗೆ ಸದಸ್ಯರನ್ನು ನಾಮನಿರ್ದೇಶನದ ಅಧಿಕಾರ ಎಲ್‌ಜಿಗಿದೆ – ಸುಪ್ರೀ‌ಕೋರ್ಟ್

Recent News