ಶೇಖ್ ಹಸೀನಾ ಲಂಡನ್ ಪ್ರಯಾಣಕ್ಕೆ ಬ್ರಿಟಿಷ್ ಕಾನೂನು ತಡೆ

ಶೇಖ್ ಹಸೀನಾ ಲಂಡನ್ ಪ್ರಯಾಣಕ್ಕೆ ಬ್ರಿಟಿಷ್ ಕಾನೂನು ತಡೆ

ನವದೆಹಲಿ : ರಾಜೀನಾಮೆ ಬಳಿಕ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಲಂಡನ್ ತೆರಳುವ ಯೋಜನೆಗೆ ತಡೆ ಬಿದ್ದಿದೆ. ಬ್ರಿಟಿಷ್ ಕಾನೂನುಗಳ ಸಮಸ್ಯೆಯಿಂದಾಗಿ ಅವರು ಕೆಲವು ದಿನಗಳ ಕಾಲ ಭಾರತದಲ್ಲಿ ತಂಗುವ ಅನಿವಾರ್ಯವಿದೆ ಎಂದು ಉನ್ನತ ಮೂಲಗಳು ಹೇಳಿವೆ‌. ಸೋಮವಾರ ಸಂಜೆ ದೆಹಲಿ ಬಳಿಯ ಹಿಂಡನ್ ವಾಯುನೆಲೆಗೆ ಶೇಖ್ ಹಸೀನಾ ಬಂದಿಳಿದರು. ಹಸೀನಾ ಸಹೋದರಿ ಶೇಖ್ ರೆಹಾನಾ ಬ್ರಿಟಿಷ್ ಪ್ರಜೆಯಾಗಿರುವುದರಿಂದ ಯುಕೆಯಲ್ಲಿ ಆಶ್ರಯ ಪಡೆಯುವ ಸಾಧ್ಯತೆಯಿದೆ. ಆದರೆ ಬ್ರಿಟಿಷ್ ಆಶ್ರಯ ನಿಯಮಗಳು ಅವಾಮಿ ಲೀಗ್ ನಾಯಕಿಗೆ ತಡೆ ಆಗಬಹುದು ಎನ್ನಲಾಗಿದೆ. UK ವಲಸೆ ನಿಯಮಗಳು ಮತ್ತು ರೂಢಿಗಳ ಪ್ರಕಾರ ಯುಕೆಯು ಅಗತ್ಯವಿರುವ ಜನರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ದಾಖಲೆಯನ್ನು ಹೊಂದಿದೆ ಆದಾಗ್ಯೂ, ತಾತ್ಕಾಲಿಕ ಆಶ್ರಯ ಪಡೆಯಲು ಯುಕೆಗೆ ಪ್ರಯಾಣಿಸುವರಿಗೆ ನೇರ ಅನುಮತಿಯನ್ನು ನಿಯಮಗಳಲ್ಲಿ ನೀಡಲಾಗುವುದಿಲ್ಲ.  ರಕ್ಷಣೆ ಪಡೆಯುಲು ಇಚ್ಛಿಸುವವರು ಅಥಾವ ಅಂತರರಾಷ್ಟ್ರೀಯ ರಕ್ಷಣೆಯ ಅಗತ್ಯವಿರುವವರು ಬ್ರಿಟನ್ ತಲುಪುವ ಮೊದಲ ಸುರಕ್ಷಿತ ದೇಶದಲ್ಲಿ ಆಶ್ರಯ ಪಡೆಯಬೇಕು. ಸದ್ಯ ಶೇಖ್ ಹಸೀನಾ ಭಾರತದಲ್ಲಿರುವ ಹಿನ್ನಲೆ ಈ ನಿಯಮ ಪೂರೈಸಲಿದ್ದಾರೆ‌, ಆದರೆ ಒಂದಷ್ಟು ದಿನ ಅವರು ಭಾರತದಲ್ಲಿ ತಂಗಬೇಕಾದ ಅನಿವಾರ್ಯತೆ ಬರಲಿದೆ, ಆ ಬಳಿಕವಷ್ಟೆ ಅವರು ಬ್ರಿಟನ್ ತಲುಪಬಹುದಾಗಿದೆ.

Previous Post
ಭಾರತದಲ್ಲಿ ತಂಗಲು ಬಹಳ‌ ಕಡಿಮೆ ಅವಧಿಯಲ್ಲಿ ಹಸೀನಾ ಮನವಿ ಮಾಡಿದ್ದರು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ
Next Post
ಆರೋಗ್ಯ, ಜೀವ ವಿಮೆ ಮೇಲಿನ ಜಿಎಸ್‌ಟಿ ವಿರೋಧಿಸಿ ‘ಇಂಡಿಯಾ’ ಪ್ರತಿಭಟನೆ

Recent News