ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಮುಹಮ್ಮದ್ ಯೂನಸ್ ಆಯ್ಕೆ

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಮುಹಮ್ಮದ್ ಯೂನಸ್ ಆಯ್ಕೆ

ನವದೆಹಲಿ : ಶೇಖ್ ಹಸೀನಾ ರಾಜೀನಾಮೆಯಿಂದ ತೆರವಾಗಿದ್ದ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರನ್ನು ಆಯ್ಕೆ ಮಾಡಲಾಗಿದೆ. ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ‌.

ಬಾಂಗ್ಲಾದೇಶದಲ್ಲಿ ಬಡತನದ ವಿರುದ್ಧ ಹೋರಾಡಿರುವ ಯೂನಸ್, ಯೂನಸ್ ಬಡವರ ಬ್ಯಾಂಕರ್ ಎಂದು ಹೆಸರುವಾಸಿಯಾಗಿದ್ದರು. ಪ್ರತಿಭಟನಾ ನಿರತ ವಿಧ್ಯಾರ್ಥಿಗಳ ಆಯ್ಕೆಯೂ ಸಹ ಯೂನಸ್ ಆಗಿದ್ದರಿಂದ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್, ಯೂನಸ್ ಅವರನ್ನು ಆಯ್ಕೆ ಮಾಡಿದ್ದಾರೆ.

ಬಾಂಗ್ಲಾದ ಆರ್ಥಿಕ ತಜ್ಞ 84 ವರ್ಷದ ಮೊಹಮ್ಮದ್‌ ಯೂನುಸ್‌ 1983ರಲ್ಲಿ ಬಾಂಗ್ಲಾದಲ್ಲಿ ಬಡತನ ನಿರ್ಮೂಲನೆಗಾಗಿ ಗ್ರಾಮೀಣ ಬ್ಯಾಂಕ್‌ ಸ್ಥಾಪಿಸಿದ್ದರು. ಸಣ್ಣ ಪ್ರಮಾಣದ ಸಾಲ ನೀಡಿದ್ದರಿಂದ ಬಡವರಿಗೆ ಬಹಳಷ್ಟು ಸಹಾಯವಾಗಿತ್ತು. ಗ್ರಾಮೀಣ ಬ್ಯಾಂಕ್‌ ಸಾಧನೆಗೆ 2006ರಲ್ಲಿ ಇವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಲಭಿಸಿತ್ತು.

ಹಸೀನಾ ರಾಜೀನಾಮೆ ಮೂಲಕ ಬಾಂಗ್ಲಾಗೆ ಎರಡನೇ ಬಾರಿಗೆ ವಿಮೋಚನೆ ಸಿಕ್ಕಿದೆ ಎಂದು ಯುನುಸ್‌ ಅವರು ಹರ್ಷ ವ್ಯಕ್ತಪಡಿಸಿದ್ದರು. ನಾನು ಸರ್ಕಾರದ ಮುಖ್ಯಸ್ಥನಾಗಬೇಕು ಎಂದು ದೇಶದ ಜನರ ಇಚ್ಛೆ ಅದೇ ಆಗಿದ್ದರೆ ಈ ಜವಾಬ್ದಾರಿ ಹೊರಲು ನಾನು ಸಿದ್ಧನಿದ್ದೇನೆ. ಆದರೆ ಮಧ್ಯಂತರ ಸರ್ಕಾರ ಯಾವ ಸಮಸ್ಯೆಗೂ ಪರಿಹಾರ ಆಗಲಾರದು. ಶಾಂತಿಯುತ ಮುಕ್ತ ಚುನಾವಣೆ ನಡೆದರೆ ಮಾತ್ರ ಶಾಶ್ವತ ಶಾಂತಿ ನೀಡಬಲ್ಲದು ಎಂದು ಯೂನುಸ್‌ ಹೇಳಿದ್ದಾರೆ.

ಅಲ್ಪಸಂಖ್ಯಾತರ ಮೇಲೆ ದಾಳಿಗೆ ಜಮ್ಮತ್-ಎ-ಇಸ್ಲಾಮಿ ಪ್ರಚೋದನೆ

ಮಂಗಳವಾರ ಬಾಂಗ್ಲಾದೇಶದಲ್ಲಿ ಅಲ್ಲಿರುವ ಅಲ್ಪ ಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮಾಡಲಾಗಿತ್ತು. ಮನೆ ಮತ್ತು ಮಂದಿರಾ ಇತರೆ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡಿದ್ದು ಅಲ್ಲದೇ 24 ಜಿಲ್ಲೆಗಳಲ್ಲಿ 300 ಅಧಿಕ ಮಂದಿಯ ಮೇಲೆ ದಾಳಿ ಮಾಡಲಾಗಿತ್ತು. ಈ ದಾಳಿಗೆ ಪ್ರೇರಣೆ ನೀಡಿದ್ದು ನಾವೇ ಎಂದು ಜಮ್ಮತ್-ಎ-ಇಸ್ಲಾಮಿ ಒಪ್ಪಿಕೊಂಡಿದೆ. ಶೇಖ್ ಹಸೀನಾ ರಾಜೀನಾಮೆ ಬೆನ್ನಲೆ ದಾಳಿಗೆ ಪ್ರಚೋದಿಸಿರುವುದಾಗಿ ಮತ್ತು ಮಂದಿರಗಳ ಮೇಲೆ ದಾಳಿ ನಡೆಸಿರುವುದಾಗಿ ಜಮ್ಮತ್-ಎ-ಇಸ್ಲಾಮಿ ಒಪ್ಪಿಕೊಂಡಿದೆ.

ಅವಾಮಿ ಲೀಗ್ ನಾಯಕರ ಮಾರಣಹೋಮ

ಶೇಖ್ ಹಸೀನಾ ರಾಜೀನಾಮೆ ಬಳಿಕವೂ ಅಲ್ಲಿರುವ ಹೋರಾಟಗಾರ ಸಿಟ್ಟು ತಣಿದಂತೆ ಕಾಣುತ್ತಿಲ್ಲ. ಮೀಸಲಾತಿ ಹೋರಾಟಗಾರರು ಅವಾಮಿ ಲೀಗ್ ನಾಯಕರು ಮತ್ತು ಕುಟುಂಬಸ್ಥರ ಹತ್ಯ ಮಾಡಿದ್ದು ಆ ಶವಗಳು ಈಗ ಪತ್ತೆಯಾಗುವೆ. ಕನಿಷ್ಠ 20 ಮೃತ ದೇಹಗಳು ಪತ್ತೆಯಾಗಿದ್ದು, ಸತ್ಖಿರಾ ಪ್ರದೇಶದಲ್ಲಿ ನಡರದ ಹಿಂಸಾಚಾರದಲ್ಲಿ ಕನಿಷ್ಠ 10 ಮಂದಿ ಅವಾಮಿ ಲೀಗ್ ನಾಯಕರು ಸಾವನ್ನಪ್ಪಿದ್ದಾರೆ. ಇಷ್ಟೆ ಅಲ್ಲದೇ ಅವಾಮಿ ಲೀಗ್ ನಾಯಕರು ಮತ್ತು ಕಾರ್ಯಕರ್ತರ ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಧ್ವಂಸಗೊಳಿಸಲಾಯಿತು, ಲೂಟಿ ಮಾಡಲಾಗಿದೆ. ಅವಾಮಿ ಲೀಗ್ ನಾಯಕರ ಸರಣಿ ಹತ್ಯೆ ಹಿನ್ನಲೆ ಆತಂಕಗೊಂಡಿರುವ ನಾಯಕರು ಢಾಕಾ ತೊರೆಯುತ್ತಿದ್ದಾರೆ. ಹೀಗೆ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನದಿಂದ ದೆಹಲಿಗೆ ಹೊರಟಿದ್ದ ಬಾಂಗ್ಲಾದೇಶದ ಮಾಜಿ ವಿದೇಶಾಂಗ ಸಚಿವ ಹಸನ್ ಮಹಮೂದ್ ಮತ್ತು ಮಾಜಿ ರಾಜ್ಯ ಸಚಿವ ಜುನೈದ್ ಅಹ್ಮದ್ ಪಾಲಕ್ ಬಂಧಿಸಲಾಗಿದೆ.

ಶೇಖ್ ಹಸೀನಾ ರಾಜೀನಾಮೆ ಹಿಂದೆ ಸೇನಾ ಮುಖ್ಯಸ್ಥರ ಪಿತೂರಿ

ಶೇಖ್ ಹಸೀನಾ ರಾಜೀನಾಮೆ ಹಿಂದೆ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಷಡ್ಯಂತ್ರದ ಆರೋಪ ಕೇಳಿ ಬಂದಿದೆ. ಕಳೆದ ಜೂನ್ ನಲ್ಲಿ ಸೇನಾ ಮುಖ್ಯಸ್ಥರನ್ನಾಗಿ ಜನರಲ್ ವಾಕರ್-ಉಜ್-ಜಮಾನ್ ಆಯ್ಕೆ ಮಾಡಲಾಗಿತ್ತು, ನೇಮಕ ಬೆನ್ನಲೆ ಸಂಭವನೀಯ ಅಪಾಯಗಳ ಬಗ್ಗೆ ಭಾರತೀಯ ಸರ್ಕಾರಿ ಅಧಿಕಾರಿಗಳು ಶೇಖ್ ಹಸೀನಾ ಅವರಿಗೆ ಎಚ್ಚರಿಕೆ ನೀಡಿದ್ದರು. ಅದಾಗ್ಯೂ ವಾಕರ್-ಉಜ್-ಜಮಾನ್ ಅವರನ್ನು ಹಸೀನಾ ಮುಂದುವರಿಸಿದ್ದರು. ಪ್ರತಿಭಟನೆ ತೀವ್ರವಾದ ಬೆನ್ನಲೆ ಹೋರಾಟ ನಿಯಂತ್ರಣದ ಬದಲು ಹಸೀನಾ ರಾಜೀನಾಮೆಗೆ ವಾಕರ್-ಉಜ್-ಜಮಾನ್ ಒತ್ತಡ ಹಾಕಿದ್ದರು, ಪ್ರತಿಭಟನೆಗಳು ತೀವ್ರಗೊಳ್ಳುವ ಕೆಲವೇ ವಾರಗಳ ಮೊದಲು ದೂರದರ್ಶನ ಭಾಷಣ ಮಾಡಿದ್ದ ವಾಕರ್-ಉಜ್-ಝಮಾನ್, ದೇಶದ ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಮತ್ತು ಮಧ್ಯಂತರ ಸರ್ಕಾರದ ರಚನೆಯ ಮೇಲ್ವಿಚಾರಣೆ ನಡೆಸುವುದಾಗಿ ಘೋಷಿಸಿದರು ಹೀಗಾಗಿ ಸರ್ಕಾರದ ಪತನದ ಹಿಂದೆ ಸೇನಾ ಮುಖ್ಯಸ್ಥರ ಷಡ್ಯಂತ್ರದ ಅನುಮಾನ ವ್ಯಕ್ತವಾಗಿದೆ.

ಪ್ರಯಾಣಕ್ಕೆ ಸಿಗದ ಅನುಮತಿ

ಲಂಡನ್ ತೆರಳಬೇಕು ಎಂದು ಭಾರತಕ್ಕೆ ಆಗಮಿಸಿದ್ದ ಶೇಖ್ ಹಸೀನಾಗೆ ಬ್ರಿಟಿಷ್ ಸರ್ಕಾರ ಮತ್ತು ಅಮೇರಿಕಾ ಆಶ್ರಯ ನೀಡಲು ನಿರಾಕರಿಸಿದೆ‌. ಹೀಗಾಗೀ ಅನುಮತಿ ಸಿಗುವವರೆಗೂ ಭಾರತದಲ್ಲಿ ಉಳಿಯಬೇಕು ಎನ್ನುವ ಅನಿವಾರ್ಯ ನಿರ್ಮಾಣವಾಗಿದೆ. ಈ ಹಿನ್ನಲೆ ಅವರಿಗೆ ತಾತ್ಕಲಿಕವಾಗಿ ಉಳಿಯಲು ಭಾರತ ಸರ್ಕಾರ ವ್ಯವಸ್ಥೆ ಮಾಡುತ್ತಿದೆ. ಸದ್ಯ ಇಂಡನ್ ಏರ್ ಬೇಸ್ ನಲ್ಲಿರುವ ಅವರಿಗೆ ಎನ್‌ಎಸ್‌ಜಿ ಮತ್ತು ಗರುಡಾ ಕಮಾಂಡೊಗಳಿಗೆ ಭದ್ರತೆ ನೀಡಲಾಗಿದೆ.

ಯುರೋಪ್ ದೇಶಗಳಿಗೆ ಶೇಖ್ ಹಸೀನಾಗೆ ಅನುಮತಿ ಸಿಗದ ಹಿನ್ನಲ ಅವರು ಭಾರತದಲ್ಲಿ ದೀರ್ಘಾವಧಿ ಉಳಿಯಬಹುದಾ ಎನ್ನುವ ಚರ್ಚೆ ಶುರುವಾಗಿದೆ. 1975 ರಿಂದ 81 ವರೆಗೂ ಉಳಿದಂತೆ ಮತ್ತೆ ಇಲ್ಲೆ ಆಶ್ರಯ ಪಡೆಯಬಹುದಾ ಎನ್ನುವ ಅನುಮಾನ ಹೆಚ್ಚಿದೆ. ಆದರೆ ಇದರಿಂದ ಭಾರತಕ್ಕೆ ಕೆಲವು ಸಮಸ್ಯೆ ಎದುರಾಗಬಹುದು ಸಾಧ್ಯತೆಗಳಿದೆ.

ಗಡಿಯಲ್ಲಿ ಹದ್ದಿನ ಕಣ್ಣು

ಬಾಂಗ್ಲಾದೇಶದ ಬೆಳವಣಿಗೆಗಳ ಬೆನ್ನಲೆ ಭಾರತಕ್ಕೆ ವಲಸಿಗರ ಅಕ್ರಮ ಪ್ರವೇಶ ಸಾಧ್ಯತೆ ಹೆಚ್ಚಿದೆ. ಅಕ್ರಮ ವಲಸೆಯನ್ನು ತಡೆಯಲು ಮಣಿಪುರ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಫೆರ್ಜಾಲ್ ಮತ್ತು ಜಿರಿಬಾಮ್ ಜಿಲ್ಲೆಯ ಕೆಲವು ಭಾಗಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ಫೆರ್ಜಾಲ್ ಜಿಲ್ಲೆಯಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ನಿಯಮ ಸಡಿಲಿಕೆ ಮಾಡಿದೆ, ಜಿರಿಬಾಮ್ ಮುನ್ಸಿಪಲ್ ಕೌನ್ಸಿಲ್ ಮತ್ತು ಬೊರೊಬೆಕ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಸಡಿಲಿಕೆ ಮಾಡಿದೆ. ಕಾನೂನು ಬಾಹಿರವಾಗುವ ಚಟುವಟಿಕೆ ಸಾಧ್ಯತೆ ಹಿನ್ನಲೆ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಸಭೆ ಮತ್ತು ಸಂಚಾರಕ್ಕೆ ನಿಷೇಧ ಹೇರಿದೆ.

ಬಾಂಗ್ಲಾ ಬೆಳವಣಿಗೆ ಹಿನ್ನಲೆ ಬಿಎಸ್‌ಎಫ್ ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಅವರು ಸತತ ಮೂರನೇ ದಿನ ಭಾರತ-ಬಾಂಗ್ಲಾದೇಶ ಗಡಿಗೆ ಭೇಟಿ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದು ಬಿಎಸ್‌ಎಫ್‌ನ ಯುದ್ಧತಂತ್ರದ ಮತ್ತು ಕಾರ್ಯಾಚರಣೆಯ ಸನ್ನದ್ಧತೆ ಮತ್ತು ನಿಯೋಜನೆ ಪರಿಶೀಲನೆ ಮಾಡಿದ್ದಾರೆ.

ಬಾಂಗ್ಲಾದೇಶದ ಪರಿಸ್ಥಿತಿ ಭಾರತಕ್ಕೆ

ಬಾಂಗ್ಲಾದೇಶದಲ್ಲಿ ಏನಾಗುತ್ತಿದೆಯೋ ಅದು ಭಾರತದಲ್ಲೂ ಸಂಭವಿಸಬಹುದು ಎಂದು ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ತಜ್ಞ ಮುಜಿಬುರ್ ರೆಹಮಾನ್ ಅವರ ಶಿಕ್ವಾ-ಎ-ಹಿಂದ್: ಭಾರತೀಯ ಮುಸ್ಲಿಮರ ರಾಜಕೀಯ ಭವಿಷ್ಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಎಲ್ಲವೂ ಸಾಮಾನ್ಯವಾಗಿ ಕಾಣಿಸಬಹುದು, ಇಲ್ಲಿ ಎಲ್ಲವೂ ಸಾಮಾನ್ಯವಾಗಿ ಕಾಣಿಸಬಹುದು, ನಾವು ವಿಜಯೋತ್ಸವವನ್ನು ಆಚರಿಸುತ್ತಿರಬಹುದು ಆದರೂ 2024 ರ ಗೆಲುವು ಅಥವಾ ಯಶಸ್ಸು ಕೇವಲ ಕನಿಷ್ಠ ಎಂದು ಕೆಲವರು ನಂಬುತ್ತಾರೆ ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆಯೋ ಅದು ಇಲ್ಲಿಯೂ ಸಂಭವಿಸಬಹುದು ಬಾಂಗ್ಲಾದೇಶದಂತೆ ಸ್ಪೋಟಿಸಿದಂತೆ ಕೆಲವು ವಿಷಯಗಳು ಸ್ಫೋಟಗೊಳ್ಳುವುದು ತಡೆಯುತ್ತಿದೆ ಎಂದು ಹೇಳಿದ್ದಾರೆ.

Previous Post
ಒಲಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ವಿನೇಶ್ ಫೋಗಟ್
Next Post
ದಾವಣಗೆರೆ-ಚಿತ್ರದುರ್ಗ ತುಮಕೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ಅನುದಾನ ಸಂಸದ ಗೋವಿಂದ ಕಾರಜೋಳ ಪ್ರಶ್ನೆಗೆ ರೈಲ್ವೆ ಸಚಿವರ ಉತ್ತರ

Recent News