ಹಿಂಡೆನ್ಬರ್ಗ್ ಆರೋಪ ದುರುದ್ದೇಶಪೂರಿತವೆಂದ ಅದಾನಿ ಗ್ರೂಪ್
ಮುಂಬೈ : ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್ಬರ್ಗ್ ನಮ್ಮ ವಿರುದ್ಧ ಮಾಡಿರುವ ಆರೋಪಗಳು ದುರುದ್ದೇಶಪೂರಿತ ಮತ್ತು ತಿರುಚಲಾದ ಮಾಹಿತಿ ಹಾಗೂ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಅದಾನಿ ಗ್ರೂಪ್ ಹೇಳಿದೆ.
ವಾಸ್ತವ ಮತ್ತು ಕಾನೂನನ್ನು ನಿರ್ಲಕ್ಷಿಸಿ ವೈಯಕ್ತಿಕ ಲಾಭಕ್ಕಾಗಿ ಮಾಡಿರುವ ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ.
ಈ ವಿಚಾರಗಳ ಬಗ್ಗೆ ತನಿಖೆ ನಡೆಸಿ ಈಗಾಗಲೇ ಆಧಾರರಹಿತವೆಂದು ಸಾಬೀತುಪಡಿಸಲಾಗಿದೆ. 2024 ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣವನ್ನು ವಜಾಗೊಳಿಸಿದೆ ಎಂದು ಅದಾನಿ ಗ್ರೂಪ್ ಹೇಳಿದೆ.
ನಮ್ಮ ಸಾಗರೋತ್ತರ ವ್ಯವಹಾರಗಳು ಪಾರದರ್ಶಕವಾಗಿದೆ. ಎಲ್ಲಾ ಸಂಬಂಧಿತ ವಿವರಗಳನ್ನು ಸಾರ್ವಜನಿಕ ದಾಖಲೆಗಳಲ್ಲಿ ನಿಯಮಿತವಾಗಿ ಬಹಿರಂಗಪಡಿಸಲಾಗುತ್ತದೆ. ಆರೋಪದಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳು ಅಥವಾ ವಿಷಯಗಳೊಂದಿಗೆ ಅದಾನಿ ಗ್ರೂಪ್ ಯಾವುದೇ ವಾಣಿಜ್ಯ ಸಂಬಂಧವನ್ನು ಹೊಂದಿಲ್ಲ. ಎಲ್ಲಾ ಕಾನೂನು ಮತ್ತು ಸಂಬಂಧಿಸಿದ ಕಾನೂನುಬದ್ಧ ಸಂಸ್ಥೆಗಳ ನಿಯಮಗಳಿಗೆ ದೃಢವಾಗಿ ಬದ್ಧರಾಗಿಯೇ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದೆ.