ಯುಪಿಯಲ್ಲಿ ಸರ್ಕಾರಿ ಅಧಿಕಾರಿಯಿಂದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಲಕ್ನೋ, ಆ. 14: ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಆರು ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ನಂತರ ಮೇಕೆಯೊಂದಿಗೆ ಮೃಗೀಯ ಕೃತ್ಯ ಎಸಗಿದ್ದಕ್ಕಾಗಿ 57 ವರ್ಷದ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ ಕುಟುಂಬವು ಆ ವ್ಯಕ್ತಿ ಅಧಿಕೃತ ಕೆಲಸಕ್ಕಾಗಿ ಗ್ರಾಮಕ್ಕೆ ಆಗಾಗ್ಗೆ ಬರುತ್ತಿದ್ದನು ಮತ್ತು ಹುಡುಗಿ ನೆರೆಹೊರೆಯವರ ಮಗುವಿನೊಂದಿಗೆ ಅಂಗಳದಲ್ಲಿ ಆಡುತ್ತಿದ್ದಾಗ, ಯಾರೂ ಇಲ್ಲದಿರುವುದನ್ನು ನೋಡಿ ಅವರ ಮನೆಗೆ ಪ್ರವೇಶಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ.
ಅತ್ಯಾಚಾರ ಮತ್ತು ಆತನ ಮೃಗೀಯತೆಯನ್ನು ನೆರೆಯ ಮನೆಯ ಮಗುವೊಂದು ತಿಳಿಸಿದೆ. ಈ ಘೋರ ಅಪರಾಧದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಪ್ರತಿಕ್ರಿಯಿಸಿದ್ದು, ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ರಾಜ್ಯ ಸರ್ಕಾರದಿಂದ ಬಾಲಕಿಯ ಕುಟುಂಬಕ್ಕೆ ₹8.25 ಲಕ್ಷ ನೆರವು ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸೂಲ್ಪುರ ಗ್ರಾಮದ ನಿವಾಸಿ ಗಜೇಂದ್ರ ಸಿಂಗ್ ಅವರು ಶಿಕಾರ್ಪುರ ಬ್ಲಾಕ್ನಲ್ಲಿ ಕೃಷಿ ಅಭಿವೃದ್ಧಿ ಅಧಿಕಾರಿಯಾಗಿ (ಕೃಷಿ ರಕ್ಷಣೆ) ನೇಮಕಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಸಂಜೆ ಅಹ್ಮದ್ಗಢ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದಕ್ಕೆ ತೆರಳಿದ ಅವರು, ಬಾಲಕಿ ಮತ್ತು ಹುಡುಗ ಮನೆಯ ಅಂಗಳದಲ್ಲಿ ಆಟವಾಡುತ್ತಿರುವುದನ್ನು ಕಂಡು ಅಲ್ಲಿದ್ದ ಮಂಚದ ಮೇಲೆ ಕುಳಿತುಕೊಂಡ ಎಂದು ಮಾಹಿತಿ ನೀಡಿದ್ದಾರೆ.
ಹಿರಿಯ ಪೊಲೀಸ್ ಅಧೀಕ್ಷಕ (ಬುಲಂದ್ಶಹರ್) ಶ್ಲೋಕ್ ಕುಮಾರ್ ಮಾತನಾಡಿ, “ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಸಿಂಗ್ ಬಾಲಕಿಯ ಮನೆಗೆ ಪ್ರವೇಶಿಸಿದ್ದಾನೆ. ಆತ ಬಾಲಕಿಯ ಮನೆಯವರಿಗೆ ಗೊತ್ತಿತ್ತು. ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ನಂತರ ಹತ್ತಿರದಲ್ಲಿ ಕಟ್ಟಿದ್ದ ಮೇಕೆಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಒಬ್ಬ ಹುಡುಗ ತನ್ನ ಫೋನ್ನಲ್ಲಿ ಅಪರಾಧವನ್ನು ಸೆರೆಹಿಡಿದಿದ್ದು, ಆತ ಸರ್ಕಾರಿ ಅಧಿಕಾರಿಯಾಗಿರುವುದರಿಂದ ಅವನನ್ನು ಅಮಾನತುಗೊಳಿಸಲಾಗಿದೆ ಮತ್ತು ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ” ಎಂದು ಹೇಳಿದರು.
“ಪೊಲೀಸರು ತ್ವರಿತ ವಿಚಾರಣೆ ನಡೆಸುತ್ತಿದ್ದಾರೆ; ಸಿಂಗ್ಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ” ಎಂದು ಕುಮಾರ್ ಹೇಳಿದರು. ಘಟನೆ ನಡೆದಾಗ ತಾನು ಮತ್ತು ಪತ್ನಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆವು ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ. ಬಾಲಕಿ ಮತ್ತು ಹುಡುಗ ನಡೆದ ವಿಷಯವನ್ನು ತಿಳಿಸಿದ್ದು, ಮಂಗಳವಾರ ಬೆಳಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ.