ಸಿಎಎ ನಿರಾಶ್ರಿತರಿಗೆ ನ್ಯಾಯ ಮತ್ತು ಹಕ್ಕು ನೀಡಿದೆ – ಅಮಿತ್ ಶಾ

ಸಿಎಎ ನಿರಾಶ್ರಿತರಿಗೆ ನ್ಯಾಯ ಮತ್ತು ಹಕ್ಕು ನೀಡಿದೆ – ಅಮಿತ್ ಶಾ

ಅಹಮದಾಬಾದ್‌ : ಪೌರತ್ವ ತಿದ್ದುಪಡಿ ಕಾಯ್ದೆಯು ಜನರಿಗೆ ಪೌರತ್ವವನ್ನು ನೀಡುವುದು ಮಾತ್ರವಲ್ಲದೇ ಇದು ಜನರಿಗೆ ನ್ಯಾಯ ಮತ್ತು ಹಕ್ಕುಗಳನ್ನು ಒದಗಿಸುತ್ತದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಹಮದಾಬಾದ್‌ನ ಸರೋವರ ಪ್ರದೇಶದಲ್ಲಿ ಆಮ್ಲಜನಕ ಪಾರ್ಕ್ ಅನ್ನು ಉದ್ಘಾಟಿಸಿ ಅವರು ಸಿಎಎ ಬಗ್ಗೆ ಮಾತನಾಡಿದರು.

ರಾಜಕಾರಣದಿಂದಾಗಿ ದೇಶದಲ್ಲಿ ಆಶ್ರಯ ಪಡೆದಿರುವ ಜನರಿಗೆ ನ್ಯಾಯ ಸಿಕ್ಕಿಲ್ಲ. ಹಿಂದೂಗಳು, ಬೌದ್ಧರು, ಸಿಖ್ಖರು ಮತ್ತು ಜೈನರು ಎಂಬ ಕಾರಣಕ್ಕಾಗಿ ನೆರೆಯ ದೇಶಗಳಲ್ಲಿ ಜನರು ಕಿರುಕುಳಕ್ಕೊಳಗಾದರು, ತಮ್ಮ ದೇಶದಲ್ಲಿ ಶೋಷಣೆಯನ್ನು ಎದುರಿಸಿದರು. ಪ್ರತಿಪಕ್ಷಗಳ ಮೈತ್ರಿಕೂಟದ ತುಷ್ಟೀಕರಣ ರಾಜಕಾರಣದಲ್ಲಿ ಅವರಿಗೆ ನ್ಯಾಯ ಸಿಗಲಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯಾಯ ಒದಗಿಸಿದರು ಎಂದರು.

ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 100 ದಿನಗಳಲ್ಲಿ 30 ಲಕ್ಷ ಮರಗಳನ್ನು ನೆಡಲು ಸಂಕಲ್ಪ ಮಾಡಿದೆ, ನಾನು ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದೇನೆ. ಅಹಮದಾಬಾದ್ ನ ಜನರೂ ಇದರಲ್ಲಿ ಭಾಗವಹಿಸಬೇಕು. ನಮ್ಮ ಕುಟುಂಬದ ಸದಸ್ಯರ ಸಂಖ್ಯೆಗೆ ಸಮಾನವಾದ ಮರಗಳನ್ನು ನಾವು ನೆಡಬಹಬೇಕು

ಪರಿಸರದ ಬದಲಾವಣೆ ಮತ್ತು ಜಾಗತಿಕ ತಾಪಮಾನವು ಇಂದು ಮಾನವರಿಗೆ ಎರಡು ದೊಡ್ಡ ಬೆದರಿಕೆಗಳಾಗಿವೆ. ಪ್ರಧಾನಿ ಮೋದಿ ಅವರು ‘ಏಕ್ ಪೀಡ್ ಮಾ ಕೆ ನಾಮ್’ ಅಭಿಯಾನಕ್ಕೆ ಚಾಲನೆ ನೀಡಿದ್ದು, ಜನರು ತಮ್ಮ ತಾಯಂದಿರೊಂದಿಗೆ ಗಿಡ ನೆಡುವಂತೆ ಕರೆ ನೀಡಿದ್ದಾರೆ. ನಾವೆಲ್ಲರೂ ನಮ್ಮ ಜವಾಬ್ದಾರಿಯನ್ನು ಅರಿತು ಗಿಡ ನೆಟ್ಟು ಅದರ ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು

Previous Post
ಬಿಜೆಪಿಯವರು ನೂರು ಜನ್ಮ ಎತ್ತಿ ಬಂದರೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
Next Post
ಆರ್‌ಎಸ್‌ಎಸ್ ಮೂಲಕ ದೇಶದ ಉನ್ನತ ಹುದ್ದೆಗಳ ಭರ್ತಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ

Recent News