ತ್ರಿವಳಿ ತಲಾಖ್‌ ವಿವಾಹದ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗಿದೆ ಸುಪ್ರೀಂಕೋರ್ಟ್ ಅಫಿಡೆವಿಟ್‌ನಲ್ಲಿ ಕೇಂದ್ರ ಸರ್ಕಾರ ಉಲ್ಲೇಖ

ನವದೆಹಲಿ: ತ್ರಿವಳಿ ತಲಾಖ್‌ ಪದ್ಧತಿಯು ವಿವಾಹದ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗಿದೆ. ಇದರಿಂದ ಮುಸ್ಲಿಂ ಮಹಿಳೆಯರ ಸ್ಥಿತಿ ಅತ್ಯಂತ ದಯನೀಯವಾಗಿದೆ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಾದಿಸಿದೆ. ಕೆಲವು ಮುಸ್ಲಿಂ ಸಮುದಾಯಗಳಲ್ಲಿ ಮಾನ್ಯವಾಗಿದ್ದ ಈ ಪದ್ಧತಿಯನ್ನು ಸುಪ್ರೀಂ ಕೋರ್ಟ್ 2017 ರಲ್ಲಿ ರದ್ದುಗೊಳಿಸಿದೆ. ಆ ಸಮುದಾಯದಲ್ಲಿ ಈ ರೀತಿಯ ವಿಚ್ಛೇದನಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಸರ್ಕಾರ ತಿಳಿಸಿದೆ. ತ್ರಿವಳಿ ತಲಾಖ್ ಸಂತ್ರಸ್ತೆಯರು ಪೊಲೀಸರನ್ನು ಸಂಪರ್ಕಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಕಾನೂನಿನಲ್ಲಿ ದಂಡನಾತ್ಮಕ ನಿಬಂಧನೆಗಳಿಲ್ಲದೇ, ಗಂಡನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದ ಕಾರಣ ಪೊಲೀಸರು ಅಸಹಾಯಕರಾಗಿದ್ದರು. ಈ ಪದ್ಧತಿ ತಡೆಯುವ ಸಲುವಾಗಿ ಕಟ್ಟುನಿಟ್ಟಾದ ಕಾನೂನು ನಿಬಂಧನೆಗಳ ತುರ್ತು ಅಗತ್ಯ ಎಂದು ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಪದ್ಧತಿಯನ್ನು ಅಮಾನ್ಯಗೊಳಿಸಿರುವುದರಿಂದ ಅದನ್ನು ಕ್ರಿಮಿನಲ್ ಪ್ರಕರಣ ಮಾಡುವ ಅಗತ್ಯವಿಲ್ಲ ಎಂದು ವಾದಿಸಿ ಅರ್ಜಿ ಸಲ್ಲಿಕೆಯಾಗಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೀಗೆ ತಿಳಿಸಿದೆ. ಮೂಲ ಅಫಿಡವಿಟ್ ಅನ್ನು ಈ ತಿಂಗಳ ಆರಂಭದಲ್ಲಿ ಸಮಸ್ತ ಕೇರಳ ಜಮಿಯತುಲ್ ಉಲೇಮಾ ಸಲ್ಲಿಸಿದೆ. ನಮ್ಮದು ಪ್ರಖ್ಯಾತ ಸುನ್ನಿ ವಿದ್ವಾಂಸರ ಸಂಘ ಹೇಳಿಕೊಂಡಿದೆ. ಇತರ ಅಂಶಗಳ ಪೈಕಿ ಅರ್ಜಿದಾರರು, ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 2019 ಅನ್ನು ಅಸಾಂವಿಧಾನಿಕ ಎಂದು ಕರೆದಿದ್ದಾರೆ.

Previous Post
ಕಾಂಗ್ರೆಸ್ ಸರ್ಕಾರ ನನ್ನನ್ನು ಹೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದೆ – ಎಚ್.ಡಿ.ಕೆ.
Next Post
ಮಕ್ಕಳ ಜೊತೆಗೆ ಮೋದಿ ರಕ್ಷಾ ಬಂಧನ ಆಚರಣೆ

Recent News