American President's proud speech about Indian Prime Minister

ಭಾರತದ ಪ್ರಧಾನಿ ಬಗ್ಗೆ ಅಮೆರಿಕ ಅಧ್ಯಕ್ಷರ ಹೆಮ್ಮೆಯ ಮಾತು

American President's proud speech about Indian Prime Minister
American President’s proud speech about Indian Prime Minister

ಭಾರತ ಈಗ ಜಾಗತಿಕ ಶಕ್ತಿಯಾಗಿದೆ, ಹೀಗಾಗಿ ಜಗತ್ತಿನ ಎಲ್ಲರಿಗೂ ಭಾರತ ಬೇಕೇ ಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತ ಮತ್ತೊಮ್ಮೆ ತನ್ನ ಶಕ್ತಿಯನ್ನು ತೋರಿಸಿದ್ದು, ಉಕ್ರೇನ್ ದೇಶಕ್ಕೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದ ನಷ್ಟದ ಕುರಿತಾಗಿ ಮಾಹಿತಿ ಪಡೆದಿದ್ದರು. ಅಲ್ಲದೆ ಭಾರತದ ಕಡೆಯಿಂದ ಮಾನವೀಯ ನೆರವು ನೀಡಲು ಕೂಡ ನಿರ್ಧರಿಸಿದ್ದರು.

ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಇಬ್ಬರು ನಾಯಕರು, ಉಕ್ರೇನ್ & ರಷ್ಯಾ ಯುದ್ಧದ ಬಗ್ಗೆ ಚರ್ಚೆ ಮಾಡಿದ್ದಾರೆ. ಇದೇ ಸಮಯದಲ್ಲಿ ಭಾರತದ ಪ್ರಧಾನಿ ಮೋದಿ ಅವರ ನಿರ್ಧಾರ & ಉಕ್ರೇನ್ ವಿಚಾರದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ ಹೆಮ್ಮೆ ಕೂಡ ವ್ಯಕ್ತಪಡಿಸಿದ್ದಾರೆ. ಹೀಗೆ ಭಾರತ ನೀಡುತ್ತಿರುವ ನೆರವಿನ ಬಗ್ಗೆ ಜೋ ಬೈಡನ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಉಕ್ರೇನ್‌ಗೆ ಮಾನವೀಯ ನೆಲೆಯಲ್ಲಿ ಬೆಂಬಲ ನೀಡಿ, ಶಾಂತಿ ಸಂದೇಶ ಸಾರಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಬೈಡನ್ ಅವರು ಇದೀಗ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ. ಇದರೊಂದಿಗೆ ಈಗಿನ ಪರಿಸ್ಥಿತಿಯಲ್ಲಿ ಇಂಡೋ & ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ನಮ್ಮ ಬದ್ಧತೆ ಬಗ್ಗೆಯೂ ಚರ್ಚೆ ನಡೆಸಿದೆವು ಎಂದಿದ್ದಾರೆ ಬೈಡನ್. ಹಾಗೇ ಜೋ ಬೈಡನ್ ಜೊತೆಗಿನ ಚರ್ಚೆ ಬಗ್ಗೆ ಪ್ರಧಾನಿ ಮೋದಿ ಕೂಡ ಮಾಹಿತಿ ನೀಡಿದ್ದಾರೆ.

ಉಕ್ರೇನ್‌ಗೆ ಸಿಕ್ಕಿದೆ ದೊಡ್ಡ ನೆರವು: ಕಳೆದ 2 ವರ್ಷಗಳಿಂದಲೂ ನಿರಂತರವಾಗಿ ಕಿತ್ತಾಡುತ್ತಿರುವ ರಷ್ಯಾ & ಉಕ್ರೇನ್ ಪ್ರಪಂಚದ ನಿದ್ದೆಗೆಡಿಸಿವೆ. ಯಾಕಂದ್ರೆ ಇಬ್ಬರ ನಡುವೆ ಯುದ್ಧ ನಡೆಯುವ ಸಮಯದಲ್ಲಿ, ಜಗತ್ತಿಗೂ ಸಂಕಷ್ಟ ಎದುರಾಗುವ ಭಯ ಕಾಡುತ್ತಿದೆ. ಯಾಕಂದ್ರೆ ಇಬ್ಬರ ಬಳಿಯೂ ಪರಮಾಣು ಅಸ್ತ್ರ ಬಳಸುವ ಅವಕಾಶ ಇದೆ. ಹೀಗಿದ್ದಾಗ ಭಾರತದ ಪ್ರಧಾನಿ ಮೋದಿ ಅವರು ಇತ್ತೀಚೆಗೆ ತಾನೆ ಉಕ್ರೇನ್‌ಗೆ ಭೇಟಿ ನೀಡಿದ್ದರು, ಅದಕ್ಕೂ ಮೊದಲು ರಷ್ಯಾಗೆ ಕೂಡ ಭೇಟಿ ನೀಡಿ ಯುದ್ಧವನ್ನ ನಿಲ್ಲಿಸುವಂತೆ ಸಲಹೆ ನೀಡಿದ್ದರು. ಹೀಗಿದ್ದಾಗ, ಭಾರತದ ಪ್ರಧಾನಿ ಮೋದಿ ಅವರಿಂದಲೇ, ಉಕ್ರೇನ್ ದೇಶಕ್ಕೆ ಈಗ ನೆರವು ಕೂಡ ಸಿಗುವಂತಾಗಿದೆ.

Previous Post
ಗುಜುರಾತ್ ನಲ್ಲಿ ಭಾರಿ ಮಳೆ 15 ಮಂದಿ ಸಾವು
Next Post
ಹೈಕಮಾಂಡ್‌ ಜೊತೆ ಚರ್ಚಿಸಿ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ

Recent News