V. Somanna congratulated Prime Minister Narendra Modi on the grant for the third phase of Bangalore Metro work

ಮೂರನೇ ಹಂತದ ಬೆಂಗಳೂರು ಮೇಟ್ರೋ ಕಾಮಗಾರಿಗೆ ಅನುದಾನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ವಿ.ಸೋಮಣ್ಣ

V. Somanna congratulated Prime Minister Narendra Modi on the grant for the third phase of Bangalore Metro work
V. Somanna congratulated Prime Minister Narendra Modi on the grant for the third phase of Bangalore Metro work

ನವದೆಹಲಿ : ಮೂರನೇ ಹಂತದ ಬೆಂಗಳೂರು ಮೇಟ್ರೋ ಕಾಮಗಾರಿಗೆ ರೂ.15,611 ಕೋಟಿ ಅನುದಾನ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಸಚಿವ ಸೋಮಣ್ಣ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ವಾರ ಕೇಂದ್ರ ಸಚಿವ ಸಂಪುಟ 31 ನಿಲ್ದಾಣಗಳೊಂದಿಗೆ 44.65 ಕಿ.ಮಿ. ಉದ್ದದ ಬೆಂಗಳೂರು ಮೆಟ್ರೋ ರೈಲು ಯೋಜನೆಯ 3ನೇ ಹಂತದ ಎರಡು ಕಾರಿಡಾರ್ಗಳಿಗೆ ಅನುಮೊದನೆ ನೀಡಿದೆ. ಇದರ ಒಟ್ಟು ಯೋಜನಾ ವೆಚ್ಚ ರೂ.15,611 ಕೋಟಿಗಳಾಗಿದ್ದು, 2029ರ ವೇಳಗೆ ಕಾರ್ಯರಂಭ ಮಾಡಲಿದೆ. ಜೆ.ಪಿ.ನಗರ 4ನೇ ಹಂತದಿಂದ ಪಶ್ಚಿಮಕ್ಕೆ ಹೊರ ವರ್ತುಲ ರಸ್ತೆಯ ಕೆಂಪಾಪುರದವರೆಗೆ 32.15 ಕಿ.ಮಿ. ಉದ್ದದ ಕಾರಿಡಾರ್-1ರಲ್ಲಿ 22 ನಿಲ್ದಾಣಗಳಿರುತ್ತದೆ. ಹೊಸ ಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ (ಮಾಗಡಿ ರಸ್ತೆಯುದ್ದಕ್ಕೂ) 12.50 ಕಿ.ಮಿ. ಉದ್ದದ ಕಾರಿಡಾರ್-2 ಒಟ್ಟು 9 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ವರ್ಧಿತ ಮೇಟ್ರೋ ಸಂಪರ್ಕ, ಮೂರನೇ ಹಂತವು ಬೆಂಗಳೂರು ನಗರದ ಪಶ್ವಿಮ ಭಾಗವನ್ನು ಜೋಡಿಸುತ್ತದೆ.

ಮೂರನೇ ಹಂತದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರುಘಟ್ಗ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಐಟಿ ಕೈಗಾರಿಕೆಗಳು, ತುಮಕೂರು ರಸ್ತೆ ಮತ್ತು ಓಆರ್ಆರ್ನಲ್ಲಿರುವ ಜವಳಿ ಮತ್ತು ಇಂಜಿನಿಯರಿಂಗ್ ವಸ್ತುಗಳ ಉತ್ಪಾದನಾ ಘಟಕಗಳು, ಭಾರತ ಎಲೆಕ್ಟಾçನಿಕ್ ಲಿಮಿಟೆಡ್ (ಬಿ.ಇ.ಎಲ್.), ಪಿಇಎಸ್ ವಿಶ್ವವಿದ್ಯಾಲಯ, ಅಂಬೇಡ್ಕರ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಕೆಎಲ್ಇ ಕಾಲೇಜು, ದಯಾನಂದ ಸಾಗರ ವಿಶ್ವವಿದ್ಯಾಲಯ, ಐಟಿಐ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳ ಸಂಪರ್ಕವನ್ನು ಪಡೆಯಲಿವೆ.  ಒಟ್ಟಾರೆ ಇದು ನಗರದ ವಾಣಿಜ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳ ಸಂಪರ್ಕವು ನಿವಾಸಿಗಳಿಗೆ ಉತ್ತಮ ಸಂಪರ್ಕ ಹಾಗೂ ಸವಲತ್ತು ನೀಡುತ್ತದೆಯೆಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಸೋಮಣ್ಣ ಅವರು ತಿಳಿಸಿದ್ದಾರೆ. 3ನೇ ಹಂತ ಕಾರ್ಯರೂಪಕ್ಕೆ ಬಂದ ನಂತರ ಬೆಂಗಳೂರು ನಗರವು 220.20 ಕಿ.ಮಿ. ಉದ್ದದ ಸಕ್ರೀಯ ಮೆಟ್ರೋ ರೈಲು ಜಾಲವನ್ನು ಹೊಂದಲಿದೆ.  3ನೇ ಹಂತವು ಬೆಂಗಳೂರು ನಗರದ ಮೂಲ ಸೌಕರ್ಯದ ಅಭಿವೃದ್ದಿಯಲ್ಲಿ ಗಮನಾರ್ಹ ಪ್ರಗತಿಗೆ ಕಾರಣೀಭೂತವಾಗಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ. ಸನ್ಮಾನ್ಯ ಶ್ರೀ ಜೆ.ಹೆಚ್. ಪಟೇಲ್ರವರ ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಮೇಟ್ರೋ ಕಾಮಗಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದ ಸಂದರ್ಭವನ್ನು ಕೇಂದ್ರ ಸಚಿವ ಸೋಮಣ್ಣ ಇಂದು ನೆನಪಿಸಿಕೊಳ್ಳುತ್ತಾರೆ.  ಬೈಯಪ್ಪನಹಳ್ಳಿ – ನಾಯಂಡಂಹಳ್ಳಿ ಮೊದಲ ಹಂತದ ಮಾರ್ಗಕ್ಕೆ ಪ್ರಥಮ ಪ್ರಸ್ತಾವನೆ ಸಿದ್ದಗೊಂಡ ಸಮಯದಲ್ಲಿ ಕೆಲವರಲ್ಲಿ ಈ ಬಗ್ಗೆ ಅಸಡ್ಡೆ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ನಾನು ಅಂದಿನ ಮುಖ್ಯಮಂತ್ರಿ ಜೆ. ಹೆಚ್. ಪಟೇಲ್ ಅವರಿಗೆ ಮೇಟ್ರೋ ಯೋಜನೆ ಬೆಂಗಳೂರಿಗೆ ಬಂದರೆ ಭವಿಷ್ಯದಲ್ಲಿ ಬೆಂಗಳೂರು ನಿವಾಸಿಗರಿಗೆ ಆಗುವ ಲಾಭವನ್ನು ವಿವರಿಸಿದ್ದೆ. ವಿವೇಚನಾಶೀಲರಾಗಿದ್ದ ಶ್ರೀ ಜೆ.ಹೆಚ್.ಪಟೇಲ್ ಅವರು ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು.

ಕೇಂದ್ರದಲ್ಲಿ ಅಟಲ್ಜೀಯವರು ಪ್ರಧಾನಿಯಾಗಿದ್ದರು. ಶ್ರೀ ಅನಂತ ಕುಮಾರ್ ನಗರಾಭಿವೃದ್ದಿ ಸಚಿವರಾಗಿದ್ದರು, ರಾಜ್ಯದ ಮೆಟ್ರೋ ರೈಲಿನ ಪ್ರಸ್ತಾವನೆಗೆ ಅನುಮೊದನೆ ಪಡೆಯಲು ಸಹಕಾರಿಯಾಗಿದ್ದರು ಎಂದು ಕೇಂದ್ರ ಸಚಿವ ಸೋಮಣ್ಣನವರು ನೆನಪಿಸಿಕೊಳ್ಳುತ್ತಾರೆ.ಬೆಂಗಳೂರಿನ ಮೆಟ್ರೋ ನನ್ನ ಕನಸಾಗಿತ್ತು. ಇಂದು ಬೆಂಗಳೂರು ಮೇಟ್ರೋ ಈ ಮಟ್ಟಕ್ಕೆ ಬಂದಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.  ದಿವಂಗತ ಪ್ರಧಾನಿ ಶ್ರೀ ಅಟಲ್ಜೀಯವರ, ದಿವಂಗತ ಶ್ರೀ ಅನಂಕುಮಾರ್ ಮತ್ತು ದಿವಂಗತ ಶ್ರೀ ಜೆ.ಎಚ್. ಪಟೇಲ್ ಅವರ ಕೊಡುಗೆಯನ್ನು ಕೇಂದ್ರ ಸಚಿವ ಸೋಮಣ್ಣ ಅವರು ನೆನಪಿಸಿಕೊಳ್ಳುತ್ತಾರೆ.  ಅದಲ್ಲದೆ ಇಂತಹ ಬಹುದೊಡ್ಟ ಯೋಜನೆಯನ್ನು ಬೆಂಗಳೂರಿನಲ್ಲಿ ಸಾಕಾರಗೊಳಿಸುವಲ್ಲಿ ಅತ್ಯಂತ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರದಿಂದ ಒದಗಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯರಿಗೆ ಮತ್ತು ಕೇಂದ್ರದ ನಗರಾಭಿವೃದ್ಧಿ ಸಚಿವ ಮನೋಹರಲಾಲ್ ಅವರಿಗೆ ಕೇಂದ್ರ ಸಚಿವ ಸೋಮಣ್ಣ ಬೆಂಗಳೂರಿನ ಜನತೆಯ ಪರವಾಗಿ ಅಭಿನಂದನೆ ತಿಳಿಸಿದ್ದಾರೆ.

Previous Post
ಭಾರತಾದ್ಯಂತ ರೈಲುಗಳ ಮೇಲೆ ದಾಳಿ ನಡೆಸಲು ಸ್ಲೀಪರ್ ಸೆಲ್‌ಗಳಿಗೆ ಕರೆ
Next Post
ಪಕ್ಷದ ವಹಿಸಿದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ: ಗೃಹ ಸಚಿವ ಪರಮೇಶ್ವರ

Recent News