Railway Minister Ashwini Vaishnav unveils prototype of Vande Bharat Sleeper Coach trains in Bangalore

ಬೆಂಗಳೂರಿನಲ್ಲಿ : ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅನಾವರಣ

ಬೆಂಗಳೂರು: ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಮಾದರಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.’ರೈಲುಗಳನ್ನು ಸಂಚಾರಕ್ಕಾಗಿ ಹಳಿಗೆ ಇಳಿಸುವ ಮೊದಲು 10 ದಿನಗಳು ಪರೀಕ್ಷಾರ್ಥ ಸಂಚಾರ ನಡೆಸಲಿವೆ. ಮುಂದಿನ ಮೂರು ತಿಂಗಳಲ್ಲಿ ರೈಲು ಪ್ರಯಾಣಿಕರ ಓಡಾಟಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.’ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚಿನ ಒತ್ತು ನೀಡಿ ಎಚ್ಚರಿಕೆಯಿಂದ ಈ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಲೊಕೊ ಪೈಲಟ್ಗಳು, ನಿರ್ವಹಣಾ ಸಿಬ್ಬಂದಿ ಅಥವಾ ಹಾಸಿಗೆ ಮತ್ತು ಆಹಾರವನ್ನು ಪೂರೈಸುವ ಸಿಬ್ಬಂದಿಯ ಅಗತ್ಯತೆಗಳನ್ನು ಪರಿಗಣಿಸಲಾಗಿದೆ. ಪ್ರತಿ ಶೌಚಾಲಯವನ್ನು ವಿಶೇಷ ಸಾಮರ್ಥ್ಯವಿರುವ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪರೀಕ್ಷೆಯು ಮುಂದಿನ ಒಂದರಿಂದ ಎರಡು ತಿಂಗಳವರೆಗೆ ಮುಂದುವರಿಯುತ್ತದೆ’ ಎಂದು ಹೇಳಿದ್ದಾರೆ.’ವಂದೇ ಭಾರತ್ ರೈಲಿನ ಟಿಕೆಟ್ಗಳು ಕೈಗೆಟಕುವ ದರದಲ್ಲಿದ್ದು, ಮಧ್ಯಮ ವರ್ಗದ ಜನರೂ ಕೂಡ ಪ್ರಯಾಣ ಮಾಡಬಹುದಾಗಿದೆ ಈ ರೈಲಿನಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳಿವೆ. ಈ ರೈಲನ್ನು ವಿಶ್ವದ ಅತ್ಯುತ್ತಮ ರೈಲುಗಳೊಂದಿಗೆ ಹೋಲಿಸಬಹುದು’ ಎಂದು ವಿವರಿಸಿದರು.ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಆವರಣದಲ್ಲಿ ನೂತನ ವಂದೇ ಭಾರತ್ ಉತ್ಪಾದನಾ ಘಟಕಕ್ಕೆ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

Previous Post
ಪ್ರಾಸಿಕ್ಯೂಷನ್ ಅನುಮತಿ ಮನವಿ ಬಾಕಿ ಇಲ್ಲ ಎಂದು ರಾಜ್ಯಪಾಲರು ಸ್ಪಷ್ಟನೆ
Next Post
ಜೆಡಿಯು ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆ.ಸಿ.ತ್ಯಾಗಿ

Recent News