ಸೆಬಿ ಅಧ್ಯಕ್ಷೆ ವಿರುದ್ಧ ಕಾಂಗ್ರೇಸ್ ಗಂಭೀರ ಆರೋಪ
ನವದೆಹಲಿ : ಮಾರುಕಟ್ಟೆ ನಿಯಂತ್ರಣ ಸಂಸ್ಥೆ (ಸೆಬಿ) ಪೂರ್ಣಾವಧಿ ಸದಸ್ಯೆ ಮತ್ತು ಅಧ್ಯಕ್ಷೆಯೂ ಆಗಿರುವ ಮಾಧಬಿ ಪುರಿ ಬುಚ್ ಸೆಬಿ ಜೊತೆ ಜೊತೆಗೆ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಬ್ಯಾಂಕ್‌ನಿಂದ ನಿಯಮಿತ ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಕಾಂಗ್ರೇಸ್ ಆರೋಪಿಸಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೇಸ್ ನಾಯಕ ಪವನ್ ಖೇರಾ, ಸೆಬಿ ಅಧ್ಯಕ್ಷೆಯಾಗಿ ಮಾಧಬಿ 2017 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಸೆಬಿಯಿಂದ ಸಂಬಳ ಪಡೆಯುತ್ತಿದ್ದಾರೆ ಮಾತ್ರವಲ್ಲದೆ ಐಸಿಐಸಿಐ ಬ್ಯಾಂಕ್‌ನಿಂದಲೂ ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಕಂಪನಿಯಲ್ಲಿ ಕೆಲಸ ಮಾಡುವಾಗ ಅಲ್ಲಿಂದ ಮಾತ್ರ ಸಂಬಳವನ್ನು ತೆಗೆದುಕೊಳ್ಳಬೇಕು ಆದರೆ ಸೆಬಿ ಅಧ್ಯಕ್ಷರು ಸೆಬಿಯ ಜೊತೆಗೆ ಐಸಿಐಸಿಐ ಬ್ಯಾಂಕ್, ಪ್ರುಡೆನ್ಶಿಯಲ್ ಮತ್ತು ಇಎಸ್ಒಪಿಯಿಂದ 2017-2024 ರಿಂದ ನಿಯಮಿತ ಆದಾಯವನ್ನು ಪಡೆಯುತ್ತಿದ್ದರಾರೆ. ಸೆಬಿಯಂತಹ ಉನ್ನತ ಹುದ್ದೆಯಲ್ಲಿರುವವರು ಬೇರೆಡೆಯಿಂದ ಅದಾಯ ಪಡೆಯುತ್ತಿದ್ದಾರೆ ಇದು ಸೆಬಿಯ ಸೆಕ್ಷನ್ 54 ರ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಖೇರಾ ಹೇಳಿದರು.
2017 ರಲ್ಲಿ ಸೆಬಿಗೆ ಸೇರಿದ ಸಮಯದಿಂದ ಇಂದಿನವರೆಗೆ ಐಸಿಐಸಿಐನಿಂದ ಪಡೆದ ಒಟ್ಟು ಮೊತ್ತವು ಒಟ್ಟು 16.8 ಕೋಟಿ ರೂಪಾಯಿಗಳಿಗೆ ತಲುಪಿದೆ ಇದು ಆಘಾತಕಾರಿಯಾಗಿದೆ. ಇದೇ ಅವಧಿಯಲ್ಲಿ ಅವರು ಸೆಬಿಯಿಂದ 3.3 ಕೋಟಿ ರೂ ಪಡೆದಿದ್ದು, ಸೆಬಿ ಆದಾಯಕ್ಕಿಂತ 5.09 ಪಟ್ಟು ಹೆಚ್ಚು ಆದಾಯ ಐಸಿಐಸಿಐಯಿಂದ ಪಡೆದಿದ್ದಾರೆ ಎಂದು ಹೇಳಿದ್ದಾರೆ