ನೆಟ್‌ಫ್ಲಿಕ್ಸ್ ಮುಖ್ಯಸ್ಥ ಮೋನಿಶಾ ಶೇರ್ಗಿಲ್‌ಗೆ ಸಮನ್ಸ್

ನೆಟ್‌ಫ್ಲಿಕ್ಸ್ ಮುಖ್ಯಸ್ಥ ಮೋನಿಶಾ ಶೇರ್ಗಿಲ್‌ಗೆ ಸಮನ್ಸ್

ನವದೆಹಲಿ: ಕಂದಹಾರ್ ವಿಮಾನ ಅಪಹರಣ IC 814 ಸೀರಿಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ನೆಟ್‌ಫ್ಲಿಕ್ಸ್ ಕಂಟೆಂಟ್ ಚೀಫ್ ಮೋನಿಶಾ ಶೇರ್ಗಿಲ್ ಅವರಿಗೆ ಸಮನ್ಸ್ ಮಾಡಿದೆ.

ಕಂಟೆಂಟ್ ಚೀಫ್ ಶೆರ್ಗಿಲ್ ಅವರನ್ನು ಸೆಪ್ಟೆಂಬರ್ 3, ಮಂಗಳವಾರದಂದು ವೆಬ್ ಸರಣಿಯ ವಿವಾದಾತ್ಮಕ ಅಂಶಗಳ ಕುರಿತು ವಿವರಣೆಯನ್ನು ನೀಡಲು ಹಾಜರಾಗುವಂತೆ ಸೂಚಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

1999ರಲ್ಲಿ ತಾಲಿಬಾನ್ ಉಗ್ರರು ನಡೆಸಿದ್ದ ಏರ್ ಇಂಡಿಯಾ ವಿಮಾನದ ಅಪಹರಣದ ಕಥೆಯನ್ನು ಆಧರಿಸಿ ನಿರ್ಮಾಣವಾಗಿದ್ದ ಸಿನಿಮಾ ಆ.29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿತ್ತು. ದಿ ಕಂದಹಾರ್ ಹೈಜಾಕ್’ ಐಸಿ 814 ಸಿನಿಮಾದಲ್ಲಿ ಇಬ್ಬರು ಅಪಹರಣಕಾರರ ಹೆಸರನ್ನು ಹಿಂದೂ ಹೆಸರುಗಳಿಗೆ ಬದಲಾಯಿಸಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಏನಿದು ವಿವಾದ?
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್‌ನಿಂದ 1999ರಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಅಪಹರಣದಲ್ಲಿ ಮುಸ್ಲಿಂ ಉಗ್ರರ ಹೆಸರನ್ನು ಬದಲಿಸಿ ಹಿಂದೂ ಹೆಸರನ್ನು ಬಳಸಿರುವ ಕುರಿತು ಆರೋಪ ವ್ಯಕ್ತವಾಗಿದೆ.

ವಿಮಾನ ಅಪಹರಿಣದಲ್ಲಿ ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್‌ಸೈದ್, ಸನ್ನಿ ಸಹ್ಮದ್ ಖಾಜಿ, ಜಹೂರ್ ಮಿಸ್ತ್ರೀ ಮತ್ತು ಶಾಖೀರ್ ಭಾಗಿಯಾಗಿದ್ದ ಉಗ್ರರ ಹೆಸರನ್ನು ಬದಲಿಸಿ, ಸಿನಿಮಾದಲ್ಲಿ ಅಪಹರಣಕಾರರನ್ನು ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂದು ಕೋಡ್‌ನೇಮ್‌ಗಳನ್ನು ಬಳಸುತ್ತಿದ್ದರು. ಈ ಕಾರಣಕ್ಕೆ ಆ ಹೆಸರನ್ನು ಇರಿಸಿ ಸರಣಿಯನ್ನು ತೆಗೆಯಲಾಗಿದೆ ಎಂದು ನಿರ್ದೇಶಕ ಅನುಭವ್ ಸಿನ್ಹಾ ಸ್ಪಷ್ಟನೆ ನೀಡಿದ್ದರು.

ಸದ್ಯ ಸಿನಿಮಾ ಮೂಲಕ ನೈಜ ಘಟನೆಯನ್ನು ತಪ್ಪಾಗಿ ಚಿತ್ರಿಸುತ್ತಾರೆ ಹಾಗೂ ಧಾರ್ಮಿಕತೆಯನ್ನು ಪ್ರಚೋದಿಸುತ್ತಾರೆ. ನಿರ್ಮಾಪಕರು ಉದ್ದೇಶಪೂರ್ವಕವಾಗಿ ಹಿಂದೂ ಹೆಸರುಗಳನ್ನು ಆರಿಸಿಕೊಂಡಿದ್ದಾರೆ ಎಂದು ಹೆಸರುಗಳ ಕುರಿತಾಗಿ ಆರೋಪಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Previous Post
ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಗೆ ಸುಪ್ರೀಂ ಜಾಮೀನು
Next Post
ಜಾತಿ ಗಣತಿ ಸೂಕ್ಷ್ಮ ವಿಚಾರ, ಚುನಾವಣಾ ಉದ್ದೇಶಕ್ಕೆ ಬಳಸಬಾರದು: ಆರ್‌ಎಸ್‌ಎಸ್

Recent News