ಭದ್ರತಾ ಪಡೆಗಳಿಂದ ಎನ್‌ಕೌಂಟರ್ ; 9 ನಕ್ಸಲೀಯರ ಹತ್ಯೆ

ಭದ್ರತಾ ಪಡೆಗಳಿಂದ ಎನ್‌ಕೌಂಟರ್ ; 9 ನಕ್ಸಲೀಯರ ಹತ್ಯೆ

ರಾಯ್‌ಪುರ : ಛತ್ತೀಸ್‌ಗಢದ ದಾಂತೇವಾಡ ಮತ್ತು ಬಿಜಾಪುರ ಗಡಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿದ್ದು, ಸದ್ಯ ಭದ್ರತಾ ಪಡೆಗಳು ಒಂಬತ್ತು ನಕ್ಸಲೀಯರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಿಂದ ಮಾವೋವಾದಿಗಳ ಮೃತದೇಹಗಳ ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪಶ್ಚಿಮ ಬಸ್ತಾರ್ ವಿಭಾಗದಲ್ಲಿ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಾರ್ಯಾಚರಣೆ ವೇಳೆ ಯೋಧರು ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿ ಏರ್ಪಟ್ಟು ಒಂಭತ್ತು ಮಾವೋವಾದಿಗಳು ಹತರಾದರು.

ಈ ಮೊದಲು ಆಗಸ್ಟ್ 29 ರಂದು ನಾರಾಯಣಪುರ- ಕಂಕೇರ್ ಗಡಿಯಲ್ಲಿ ನಕ್ಸಲೀಯರು ಮತ್ತು ಪೊಲೀಸರ ನಡುವೆ ಎನ್‌ಕೌಂಟರ್ ನಡೆದಿತ್ತು, ಇದರಲ್ಲಿ ಭದ್ರತಾ ಪಡೆಗಳು ಮೂವರು ನಕ್ಸಲೀಯರನ್ನು ಹತ್ಯೆ ಮಾಡಲಾಗಿತ್ತು. ಆಗಸ್ಟ್ ತಿಂಗಳ ಆರಂಭದಲ್ಲಿಯೂ ದಾಂತೇವಾಡ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದರು. ಎನ್‌ಕೌಂಟರ್‌ನಲ್ಲಿ ಒಬ್ಬ ಹಾರ್ಡ್‌ಕೋರ್ ನಕ್ಸಲೈಟ್ ಹತನಾದ. ಅಲ್ಲದೆ, ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ನಕ್ಸಲರು ಇಂದ್ರಾವತಿ ನದಿಯನ್ನು ದಾಟಿ ಅಡಗುತಾಣ ತಲುಪಿದರು.

ಏಪ್ರಿಲ್ 16 ರಂದು ಕಂಕೇರ್‌ನಲ್ಲಿ ಪೊಲೀಸ್-ನಕ್ಸಲೀಯರ ಎನ್‌ಕೌಂಟರ್‌ನಲ್ಲಿ 29 ನಕ್ಸಲೀಯರು ಕೊಲ್ಲಲ್ಪಟ್ಟರು. ಇದು ದೇಶದ ಅತಿದೊಡ್ಡ ನಕ್ಸಲೀಯ ಎನ್‌ಕೌಂಟರ್ ಆಗಿದೆ. ಏಪ್ರಿಲ್ 30 ರಂದು 9 ಗಂಟೆಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ ಸೈನಿಕರು 10 ನಕ್ಸಲೀಯರನ್ನು ಕೊಂದರು. ಡಿಆರ್‌ಜಿ ಮತ್ತು ಎಸ್‌ಟಿಎಫ್ ಯೋಧರು ಬುಜಮದ್‌ನ ಟಕಮೆಟಾ ಅರಣ್ಯದಲ್ಲಿ ನಕ್ಸಲೀಯರನ್ನು ಎನ್‌ಕೌಂಟರ್ ಮಾಡಿದ್ದರು. ಹತ್ಯೆಯಾದ ನಕ್ಸಲೀಯರಲ್ಲಿ 3 ಮಹಿಳಾ ಮತ್ತು 7 ಪುರುಷ ಮಾವೋವಾದಿಗಳು ಸೇರಿದ್ದರು. ಈ ವರ್ಷ ಬಸ್ತಾರ್ ವ್ಯಾಪ್ತಿಯಲ್ಲಿ 141 ಮಾವೋವಾದಿಗಳು ಹತರಾಗಿದ್ದಾರೆ.

Previous Post
ಬಂಗಾಳ ವಿಧಾನಸಭೆಯಲ್ಲಿ ಅತ್ಯಚಾರ ವಿರೋಧಿ ಮಸೂದೆಯನ್ನು ಮಂಡಣೆ
Next Post
ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ನಾಪತ್ತೆ

Recent News