ಬೆಳಗಾವಿ: ಸಚಿವ ಸತೀಶ್ ಜಾರಕಿಹೋಳಿ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯವರು ಯಾರೆ ಆಗಲಿ ಅದಕ್ಕೆ ಬೆಂಬಲ ಇದೆ. ಸಚಿವ ಸತೀಶ ಜಾರಕಿಹೋಳಿ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಜಿಲ್ಲೆಯ ಮತ್ತೊಬ್ಬ ನಾಯಕನಿಗೆ ಬೆಂಬಲ ಸೂಚಿಸಿದರು. ಮುಂದುವರೆದು, ಎಲ್ಲರಿಗೂ ಅಧಿಕಾರ ಬೇಕಾಗಿದೆ.ಸನ್ಯಾಸಿ ಇದ್ದವರು ಯಾರು ರಾಜಕಾರಣಕ್ಕೆ ಬರುತ್ತಿರಲಿಲ್ಲ, ಆದರೆ ಸದ್ಯ ಸನ್ಯಾಸಿಗಳು ರಾಜಕಾರಣಿಗೆ ಬರುತ್ತಿದ್ದಾರೆ ಎಂದರು. ನನಗೆ ಯಾವುದೇ ಅನುದಾನದ ಕೊರತೆ ಇಲ್ಲ, ಒಂದೂವರೆ ವರ್ಷದಲ್ಲಿ 2 ಸಾವಿರ ಕೋಟಿ ಅಷ್ಟು ಅನುದಾನ ನೀಡಿದ್ದಾರೆ. ಕ್ಷೇತ್ರದಲ್ಲಿ ಅಗತ್ಯ ಕಾಮಗಾರಿಯನ್ನು ಕೈಗೊಂಡಿದ್ದೇನೆ. ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಲಕ್ಷ್ಮಣ್ ಸವದಿ ಹೇಳಿದರು.ಮುಡಾ ಪ್ರಕರಣ 20 ವರ್ಷಗಳ ಹಿಂದೆ ಆಗಿರುವಂತದ್ದು, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ಬೇಡಿಕೆ ಇಟ್ಟಿಲ್ಲ, ಯಾವುದೇ ಆದೇಶ ಮಾಡಿಲ್ಲ, ತಮ್ಮ ಪತ್ನಿಗೆ ನಿವೇಶನ ಬೇಕಂತ ಎಲ್ಲಿಯೂ ಅರ್ಜಿ ಸಲಿಸಿಲ್ಲ, ಸಿಎಂ ಸಿದರಾಮಯ್ಯ ಅವರ ಪತ್ನಿಗೆ ಸಹೋದರ ಅಕ್ಕನಿಗಾಗಿ ಅರಶಿನ ಕುಂಕುಮ ಎಂಬ ವ್ಯವಸ್ಥೆಯಲ್ಲಿ ದಾನದ ರೂಪದಲ್ಲಿ ನೀಡಿದ್ದಾರೆ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು.
ಸತೀಶ್ ಜಾರಕಿಹೋಳಿ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ: ಲಕ್ಷ್ಮಣ್ ಸವದಿ
Recent News
- ಸತೀಶ್ ಜಾರಕಿಹೋಳಿ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ: ಲಕ್ಷ್ಮಣ್ ಸವದಿ
- ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಆಶ್ಚರ್ಯ ಇಲ್ಲ: ಬಸವರಾಜ ಬೊಮ್ಮಾಯಿ
- ಓದುವ ಬೆಳಕು ಕಾರ್ಯಕ್ರಮದಡಿ ಸೆಪ್ಟೆಂಬರ್ ತಿಂಗಳಲ್ಲಿ : ಅರಿವು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ: ಪ್ರಿಯಾಂಕ್ ಖರ್ಗೆ
- ನಗರದಲ್ಲಿ ರಸ್ತೆಗುಂಡಿ ಮುಚ್ಚಲು ಉಪಮುಖ್ಯಮಂತ್ರಿ 15 ದಿನ ಗಡುವು
- ಕ್ಷಮೆಯಾಚಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
- ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ: ಬಸವರಾಜ ಬೊಮ್ಮಾಯಿ
- ಕಾಂಗ್ರೆಸ್ ಸೇರಿದ ವಿನೇಶಾ ಫೋಗಟ್, ಬಜರಂಗ್ ಪುನಿಯಾ
- ಇಡಿ ನಡೆಗೆ ಸುಪ್ರೀಂ ಕೋರ್ಟ್ ಕಿಡಿ
- ಏತ ನೀರಾವರಿ ಯೋಜನೆಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಿ: ಸಚಿವ ಎನ್ ಎಸ್ ಭೋಸರಾಜು
- ಪ್ರತಿಯೊಬ್ಬ ನಟಿಯರದ್ದೂ ಒಂದೊಂದು ಕಥೆಯಿದೆ, ಅದು ಎಲ್ಲಾ ನಟರಿಗೂ ಗೊತ್ತಿದೆ: ರಾಧಿಕಾ