HMT ಪುನಶ್ಚೇತನಕ್ಕೆ ಚಿಂತನೆ – ಹೆಚ್‌ಡಿ ಕುಮಾರಸ್ವಾಮಿ

HMT ಪುನಶ್ಚೇತನಕ್ಕೆ ಚಿಂತನೆ – ಹೆಚ್‌ಡಿ ಕುಮಾರಸ್ವಾಮಿ

ಹೈದ್ರಬಾದ್ : ಹೈದಾರಾಬಾದ್ ನಲ್ಲಿರುವ HMT – ಮಶೀನ್ & ಟೂಲ್ಸ್ (HMT MTL) ಘಟಕಕ್ಕೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಭೇಟಿ ಪರಿಶೀಲನೆ ನಡೆಸಿದರು. ಇಸ್ರೋ, ಸೇನೆ ಸೇರಿದಂತೆ ವಿವಿಧ ವಲಯಗಳ ಬೇಡಿಕೆಗಳಿಗೆ ತಕ್ಕಂತೆ ವಿಸ್ತೃತವಾಗಿ ಉತ್ಪಾದನೆ ಮಾಡುತ್ತಿದ್ದ ಘಟಕದ ಪೂರ್ಣ ಮಾಹಿತಿಯನ್ನು ಕಂಪನಿಯ ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಜೇಶ್ ಕೋಹ್ಲಿ ಅವರಿಂದ ಪಡೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಕಾರ್ಮಿಕರ ಜತೆ ಸಂವಾದ ನಡೆಸಲಾಯಿತು. ಬೆಂಗಳೂರಿನಲ್ಲಿ ಜನ್ಮತಾಳಿ ದೇಶಾದ್ಯಂತ ಮಹಾವೃಕ್ಷವಾಗಿ ಬೆಳೆದಿದ್ದ HMT ಈಗ ಭಾರೀ ಸಂಕಷ್ಟದಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೆಮ್ಮೆಯ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.

ಹೈದರಾಬಾದ್ ಘಟಕದ ಹಾಲಿ ಮತ್ತು ನಿವೃತ್ತ ಕಾರ್ಮಿಕರು ತಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿ ತಮ್ಮ ದುಃಖ, ಸಂಕಷ್ಟಗಳನ್ನು ಹೇಳಿಕೊಂಡರು. ಆ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ಹೇಳಿದರು. ಈ ವೇಳೆ ಸಚಿವಾಲಯದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ ಅವರು ನನ್ನ ಜತೆಯಲ್ಲಿ ಇದ್ದರು

Previous Post
ಅದಿರು ಕೊರತೆ ಆಗದಿರಲಿ; NMDC ಅಧಿಕಾರಿಗಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ
Next Post
ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು

Recent News