IAS ಆಕಾಂಕ್ಷಿಗಳ ಸಾವು; ರಾಹುಲ್ ಗಾಂಧಿ ಸಂತಾಪ

IAS ಆಕಾಂಕ್ಷಿಗಳ ಸಾವು; ರಾಹುಲ್ ಗಾಂಧಿ ಸಂತಾಪ

ನವದೆಹಲಿ : ಓಲ್ಡ್ ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಸುರಕ್ಷಿತ ನಿರ್ಮಾಣ, ಕಳಪೆ ಟೌನ್ ಪ್ಲಾನಿಂಗ್ ಮತ್ತು ಸಂಸ್ಥೆಗಳ ಬೇಜವಾಬ್ದಾರಿಗೆ ಜನರು ಬೆಲೆ ತೆರುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೊಸ್ಟ್ ಮಾಡಿರುವ ಅವರು, ದೆಹಲಿಯ ಕಟ್ಟಡವೊಂದರ ನೆಲಮಾಳಿಗೆಯಲ್ಲಿ ನೀರು ನಿಂತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ದುರದೃಷ್ಟಕರ ಎಂದಿರುವ ಅವರು ಮೃತ ವಿದ್ಯಾರ್ಥಿಗಳಿಗೆ ಸಂತಾಪ ಸೂಚಿಸಿದ್ದಾರೆ. ಕೆಲ ದಿನಗಳ ಹಿಂದೆ ಮಳೆಯ ವೇಳೆ ವಿದ್ಯುತ್ ಸ್ಪರ್ಶವಾಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ಮೃತ ವಿದ್ಯಾರ್ಥಿಯ ಕುಟುಂಬಕ್ಕೂ ಸಾಂತ್ವನ ಹೇಳಿದರು.

ಮೂಲಸೌಕರ್ಯಗಳ ಈ ಕುಸಿತವು ವ್ಯವಸ್ಥೆಯ ವೈಫಲ್ಯವಾಗಿದೆ. ಅಸುರಕ್ಷಿತ ನಿರ್ಮಾಣ, ಕಳಪೆ ನಗರ ಯೋಜನೆ ಮತ್ತು ಎಲ್ಲಾ ಹಂತದ ಸಂಸ್ಥೆಗಳ ಬೇಜವಾಬ್ದಾರಿತನದ ಬೆಲೆಯನ್ನು ಜನರು ತಮ್ಮ ಜೀವನದೊಂದಿಗೆ ಪಾವತಿಸುತ್ತಿದ್ದಾರೆ. ಸುರಕ್ಷಿತ ಮತ್ತು ನೆಮ್ಮದಿಯ ಜೀವನ ಪ್ರತಿಯೊಬ್ಬ ನಾಗರಿಕನ ಹಕ್ಕು ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೋಚಿಂಗ್ ಸೆಂಟರ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ಸರ್ಕಾರ ಮತ್ತು ಎಂಸಿಡಿ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಪ್ರಕೃತಿ ವಿಕೋಪವಲ್ಲ ಬದಲಿಗೆ ಇದು ಮಾನವ ನಿರ್ಮಿತ ದುರಂತವಾಗಿದೆ. ನೆಲಮಾಳಿಗೆಯಲ್ಲಿ ಕೋಚಿಂಗ್ ಸೆಂಟರ್ ಹೇಗೆ ನಡೆಯುತ್ತಿತ್ತು? ಅವರ ಬಳಿ ಪರವಾನಗಿ ಇದೆಯೇ? ಒಬ್ಬರಿಗೊಬ್ಬರು ಆಪಾದನೆ ಮಾಡುವುದು ತುಂಬಾ ಸುಲಭ ಆದರೆ ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ‌

Previous Post
ಇಂಡಿಯಾ ಸಿಮೆಂಟ್ಸ್ 32.72% ಪಾಲು ಪಡೆಯಲು ಅಲ್ಟ್ರಾಟೆಕ್ ನಿರ್ಧಾರ
Next Post
ಕರ್ನಾಟಕದ ಹಕ್ಕುಗಳನ್ನು ನಾವು ಎಂದಿಗೂ ಕಿತ್ತುಕೊಂಡಿಲ್ಲ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Recent News