J&K ಉಗ್ರರ ಅಟ್ಟಹಾಸ ; ಬಸ್ ಕಣಿವೆಗೆ ಉರುಳಿ 10 ಯಾತ್ರಿಗಳು ಮೃತ್ಯು

J&K ಉಗ್ರರ ಅಟ್ಟಹಾಸ ; ಬಸ್ ಕಣಿವೆಗೆ ಉರುಳಿ 10 ಯಾತ್ರಿಗಳು ಮೃತ್ಯು

ರಿಯಾಸಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ದೇಗುಲದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಬಸ್ ಕಮರಿಗೆ ಉರುಳಿದ ಪರಿಣಾಮ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ರಿಯಾಸಿಯ ಶಿವ ಖೋರಿ ದೇವಸ್ಥಾನದಿಂದ ಕತ್ರಾಗೆ ಹಿಂದಿರುಗುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಗುಂಡಿನ ದಾಳಿ ನಡೆದುದರ ಪರಿಣಾಮ ಚಾಲಕ ನಿಯಂತ್ರಣ ಕಳೆದುಕೊಂಡು ಬಸ್‌ ಕಮರಿಗೆ ಬಿದ್ದಿದೆ ಎಂದು ರಿಯಾಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮ ಹೇಳಿದ್ದಾರೆ. ಪ್ರಯಾಣಿಕರು ಸ್ಥಳೀಯರಲ್ಲ ಮತ್ತು ಅವರ ಗುರುತನ್ನು ಇನ್ನೂ ದೃಢೀಕರಿಸಲಾಗಿಲ್ಲ.ರಕ್ಷಣ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, ಭಯೋತ್ಪಾದಕರು ರಾಜೌರಿ, ಪೂಂಚ್ ಮತ್ತು ರಿಯಾಸಿಯಲ್ಲಿ ಅಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ದಾಳಿಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡಗಳು, ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿವೆ.

Previous Post
ಕೇಂದ್ರ ಸಂಪುಟಕ್ಕೆ ಹೆಚ್ ಡಿಕೆ, ಜೋಶಿ, ಸೋಮಣ್ಣ, ನಿರ್ಮಲಾ, ಕರಂದ್ಲಾಜೆ ಬ್ರಾಹ್ಮಣ, ಒಕ್ಕಲಿಗರಿಗೆ ಆದ್ಯತೆ, ಲಿಂಗಾಯತರಿಗೆ ಒಂದೇ ಸ್ಥಾನ, ಓಬಿಸಿ, ದಲಿತರಿಗಿಲ್ಲ ಅದೂ ಇಲ್ಲ
Next Post
ಮೋದಿ ಕ್ಯಾಬಿನೆಟ್‌ನಲ್ಲಿರುವ ಶ್ರೀಮಂತ ಸಚಿವ ಯಾರು ಗೊತ್ತಾ?

Recent News