JMM ತೊರೆದು ಬಿಜೆಪಿ ಸೇರಿದ ಹೇಮಂತ್ ಸೊರೇನ್‌ ಸೊಸೆ ಸೀತಾ ಸೊರೇನ್‌

JMM ತೊರೆದು ಬಿಜೆಪಿ ಸೇರಿದ ಹೇಮಂತ್ ಸೊರೇನ್‌ ಸೊಸೆ ಸೀತಾ ಸೊರೇನ್‌

ರಾಂಚಿ: JMM ಶಾಸಕಿ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರ ಸೊಸೆ ಸೀತಾ ಸೊರೇನ್‌ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೀತಾ ಸೊರೇನ್‌ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಜಾರ್ಖಂಡ್ ಚುನಾವಣಾ ಉಸ್ತುವಾರಿ ಲಕ್ಷ್ಮೀಕಾಂತ್ ಬಾಜಪೇಯ್ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಸೇರುವ ಕೆಲವೇ ಗಂಟೆಗಳ ಮೊದಲು ಸೀತಾ ಸೊರೇನ್‌, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಗೆ ರಾಜೀನಾಮೆ ನೀಡಿದರು.

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅವರು, ತಮ್ಮ ಪತಿ ದುರ್ಗಾ ಸೊರೇನ್‌ ಅವರ ಸಾವಿನ ನಂತರ, ಜೆಎಂಎಂ ತನಗೆ ಮತ್ತು ಅವರ ಕುಟುಂಬಕ್ಕೆ ಸೂಕ್ತ ಬೆಂಬಲವನ್ನು ನೀಡಲು ವಿಫಲವಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ಆಡಳಿತ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಮತ್ತು ಪ್ರತ್ಯೇಕಿಸಲಾಗಿದೆ ಎಂದು ಈ ವೇಳೆ ಆರೋಪಿಸಿದರು.

ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಪಿತೂರಿ ನಡೆಸುತ್ತಿರುವ ಬಗ್ಗೆ ನನಗೆ ಅರಿವಾಗಿದೆ. ನನ್ನ ರಾಜೀನಾಮೆಯನ್ನು ನೀಡುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ಎಂದು ಆರೋಪಿಸಿದ್ದಾರೆ

Previous Post
ಯೋಗ ಗುರು ಬಾಬಾ ರಾಮದೇವ್ ಮತ್ತು ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಸುಪ್ರೀಂ ಸಮನ್ಸ್
Next Post
21 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ಇಂದು ರಾಜ್ಯ ಕಾಂಗ್ರೇಸ್‌ನ ಎರಡನೇ ಪಟ್ಟಿ ಬಿಡುಗಡೆ?

Recent News