Allowing the LGBTQ community to open a joint bank account

LGBTQ ಸಮುದಾಯಕ್ಕೆ ಜಂಟಿ ಬ್ಯಾಂಕ್ ಖಾತೆ ತೆರೆಯಲು ಅನುಮತಿ

ನವದೆಹಲಿ : LGBTQ ಸಮುದಾಯಕ್ಕೆ ಸೇರಿದ ಜನರಿಗೆ, ಜಂಟಿ ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಕ್ವೀರ್ ಸಂಬಂಧದಲ್ಲಿರುವ ವ್ಯಕ್ತಿಯನ್ನು ಫಲಾನುಭವಿಯಾಗಿ ನಾಮನಿರ್ದೇಶನ ಮಾಡಲು ಇನ್ನು ಮುಂದೆ ಯಾವುದೇ ನಿರ್ಬಂಧಗಳಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ, ಸುಪ್ರೀಂಕೋರ್ಟ್ ಆದೇಶದ ಬಳಿಕ ಸರ್ಕಾರ ಈ ಆದೇಶ ಹೊರಡಿಸಿದೆ.

ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳಿಗೆ ಆಗಸ್ಟ್ 21 ರಂದು ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ತೃತೀಯಲಿಂಗಿಗಳೆಂದು ಗುರುತಿಸಿಕೊಳ್ಳುವ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಲಭ್ಯವಿರುವ ಸೇವೆಗಳನ್ನು ಬಳಸಿಕೊಳ್ಳಲು ಸಹಾಯ ಮಾಡಲು ಎಲ್ಲಾ ಫಾರ್ಮ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ‘ತೃತಿಯ ಲಿಂಗ’ ಎಂಬ ಪ್ರತ್ಯೇಕ ಕಾಲಮ್ ಅನ್ನು ಸೇರಿಸಲು ಆರ್‌ಬಿಐ 2015 ರಲ್ಲಿ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು.

2022 ರಲ್ಲಿ ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್, ಟ್ರಾನ್ಸ್ಜೆಂಡರ್ ಸಮುದಾಯಕ್ಕಾಗಿ ಪ್ರತ್ಯೇಕವಾಗಿ ‘ರೇನ್ಬೋ ಉಳಿತಾಯ ಖಾತೆ’ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯು ಹೆಚ್ಚಿನ ಉಳಿತಾಯ ದರಗಳು ಮತ್ತು ಡೆಬಿಟ್ ಕಾರ್ಡ್ ಕೊಡುಗೆಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ನೀಡಿತು.

Previous Post
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ರಾಜ್ಯಗಳು ಪ್ರಾಮಾಣಿಕ ಪ್ರಯತ್ನ ಮಾಡ್ತಿಲ್ಲ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪ
Next Post
ನವೆಂಬರ್ 11 ರ ಬಳಿಕ ವಿಸ್ತಾರ ಫ್ಲೈಟ್ ಬುಕ್ಕಿಂಗ್ ಇಲ್ಲ

Recent News