‘NEET-UG 2024 ಪ್ರಶ್ನೆ ಪತ್ರಿಕೆ ಸೋರಿಕೆ ಒಪ್ಪಿಕೊಂಡ ಸತ್ಯ’ ಪರೀಕ್ಷಾ ಅಕ್ರಮದ ಮಾಹಿತಿ ಕೋರಿದ ಸುಪ್ರೀಂಕೋರ್ಟ್
ನವದೆಹಲಿ : NEET-UG 2024 ಪ್ರಶ್ನೆ ಪತ್ರಿಕೆ ಸೋರಿಕೆ ಒಪ್ಪಿಕೊಂಡ ಸತ್ಯ, ಮರು ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ, 23 ಲಕ್ಷ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುತ್ತಿರುವ ಕಾರಣ ಸೋರಿಕೆಯ ವ್ಯಾಪ್ತಿಯ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ, ಮರು ಪರೀಕ್ಷೆ ಕೋರಿ ಸಲ್ಲಿಕೆಯಾಗಿದ್ದ ಮೂವತ್ತಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿದ ಸಿಜೆಐ ಚಂದ್ರ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ, ಸಿಬಿಐ ಮತ್ತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಮುಂದಿಟ್ಟಿದೆ.
ವಕೀಲರ ವಾದ ಆಲಿಸಿದ ಬಳಿಕ ಮಧ್ಯಂತರ ಆದೇಶ ನೀಡಿದ ಪೀಠ, ವಕೀಲರು ಮಂಡಿಸಿದ ವಾದದಲ್ಲಿ 2020 ರಲ್ಲಿ ಒಬ್ಬ ವಿದ್ಯಾರ್ಥಿ, 2021 ರಲ್ಲಿ 3 ಮತ್ತು 2022 ರಲ್ಲಿ 1, 2023 ರಲ್ಲಿ 2 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ್ದಾರೆ, 2024 ರಲ್ಲಿ 720 ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ, ಫಲಿತಾಂಶದಲ್ಲಿ ಆಮೂಲಾಗ್ರ ಹೆಚ್ಚಳ ಕಂಡು ಬಂದಿದೆ. ಪ್ರಸ್ತುತ ಹಂತದಲ್ಲಿ ಪಾಟ್ನಾ, ದೆಹಲಿ, ಗುಜರಾತ್, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಎಫ್ಐಆರ್ ದಾಖಲಾಗಿರುವುದನ್ನು ನ್ಯಾಯಾಲಯವು ಅನುಮೋದಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಎಫ್ಐಆರ್ಗಳು ಕೇವಲ ಪಾಟ್ನಾಕ್ಕೆ ಸೀಮಿತವಾಗಿದೆಯೇ ವಿವರಕ್ಕೆ ಕಾಯಬೇಕಾಗಿದೆ ಪರೀಕ್ಷೆಯನ್ನು ಸುಮಾರು 23 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡ ವ್ಯಾಪಕ ಶ್ರೇಣಿಯಲ್ಲಿ ನಡೆಸಲಾಗಿದೆ. ಪೇಪರ್ ಲೀಕ್ ವ್ಯವಸ್ಥಿತ ಮಟ್ಟದಲ್ಲಿ ನಡೆದಿದೆಯೇ?, ಅಕ್ರಮ ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆಯೇ?, ವಂಚನೆಯ ಫಲಾನುಭವಿಗಳನ್ನು ಕಳಂಕರಹಿತ ವಿದ್ಯಾರ್ಥಿಗಳಿಂದ ಪ್ರತ್ಯೇಕಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ವಂಚನೆಯ ಫಲಾನುಭವಿಗಳನ್ನು ಇತರರಿಂದ ಪ್ರತ್ಯೇಕಿಸಲು ಸಾಧ್ಯವಾಗದಿದ್ದಲ್ಲಿ ಮರು-ಪರೀಕ್ಷೆಯನ್ನು ಮಾಡುವುದು ಅಗತ್ಯವಾಗಬಹುದು
ಪ್ರಶ್ನೆ ಪತ್ರಿಕೆ ಸೋರಿಕೆಯ ಸ್ವರೂಪ, ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸ್ಥಳಗಳು, ಸೋರಿಕೆ ಮತ್ತು ಪರೀಕ್ಷೆಯ ನಡವಳಿಕೆಯ ನಡುವಿನ ಸಮಯದ ವಿಳಂಬ ಈ ಅಂಶದ ಮೇಲೆ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ತನಿಖಾಧಿಕಾರಿ ತನಿಖೆಯ ಪ್ರಸುತ್ತ ಸ್ಥಿತಿ ಮತ್ತು ತನಿಖೆಯಿಂದ ಬೆಳಕಿಗೆ ವಿಷಯ ವಸ್ತುವಿನ ವರದಿಯನ್ನು ಸಲ್ಲಿಸಬೇಕು ಎಂದು ಸಿಬಿಐಗೆ ಸೂಚಿಸಿತು.
ಪ್ರಶ್ನೆ ಪತ್ರಿಕೆ ಸೋರಿಕೆಯ ಫಲಾನುಭವಿಗಳನ್ನು ಗುರುತಿಸಲು ತೆಗೆದುಕೊಂಡ ಕ್ರಮಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕು, ಸೋರಿಕೆಯಾದ ಕೇಂದ್ರಗಳು/ನಗರಗಳನ್ನು ಗುರುತಿಸಲು NTA ತೆಗೆದುಕೊಂಡ ಕ್ರಮಗಳು, ಸೋರಿಕೆಯ ಫಲಾನುಭವಿಗಳನ್ನು ಗುರುತಿಸಲು ಅನುಸರಿಸಿದ ವಿಧಾನಗಳು, ಸೋರಿಕೆಯನ್ನು ಹೇಗೆ ಪ್ರಸಾರ ಮಾಡಲಾಯಿತು ಎಲ್ಲ ಮಾಹಿತಿಯನ್ನು ಒದಗಿಸುವಂತೆ ಕೋರ್ಟ್ ಎನ್ಟಿಎ, ಕೇಂದ್ರ ಸರಕಾರ ಮತ್ತು ಸಿಬಿಐ ಸೂಚಿಸಿದೆ. ಬುಧವಾರ ಸಂಜೆ 5 ಗಂಟೆ ಒಳಗೆ ಅಫಿಡವಿಟ್ ಸಲ್ಲಿಸಬೇಕು, ಜುಲೈ 11 ರಂದು ಪ್ರಕರಣವನ್ನು ವಿಚಾರಣೆ ನಡೆಸಲಿದ್ದೇವೆ ಎಂದು ಹೇಳಿದೆ.