Bail a rule, jail an exception in PMLA cases too - Supreme

PMLA ಪ್ರಕರಣಗಳಲ್ಲೂ ಜಾಮೀನು ಒಂದು ನಿಯಮ, ಜೈಲು ಒಂದು ವಿನಾಯಿತಿ – ಸುಪ್ರೀಂ

Bail a rule, jail an exception in PMLA cases too - Supreme
Bail a rule, jail an exception in PMLA cases too – Supreme

ನವದೆಹಲಿ : ಮನಿ ಲಾಂಡರಿಂಗ್ ಅಥಾವ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿಯೂ ಸಹ ಜಾಮೀನು ಒಂದು ನಿಯಮ ಮತ್ತು ಜೈಲು ಒಂದು ವಿನಾಯಿತಿ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇಡಿ ದಾಖಲಿಸಿರುವ ಅಕ್ರಮ ಗಣಿಗಾರಿಕೆ ಸಂಬಂಧಿತ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸಹಾಯಕನಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿರುವ ಪ್ರಕರಣಗಳಲ್ಲಿಯೂ ಸಹ “ಜಾಮೀನು ಒಂದು ನಿಯಮವಾಗಿದೆ ಮತ್ತು ಜೈಲು ಒಂದು ಅಪವಾದವಾಗಿದೆ” ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಹೇಳಿದೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಒಳಗೊಂಡಿರುವ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ಆಗಸ್ಟ್ 9 ರ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ವ್ಯಕ್ತಿಯ ಸ್ವಾತಂತ್ರ್ಯ ಯಾವಾಗಲೂ ನಿಯಮವಾಗಿದೆ ಮತ್ತು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದಿಂದ ಅದನ್ನು ಕಳೆದುಕೊಳ್ಳುವುದು ಅಪವಾದವಾಗಿದೆ, ಯಾವುದೇ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಎಂದು ಪೀಠ ಹೇಳಿತು.
ಬಳಿಕ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಇಡಿ ಸೊರೇನ್ನ ಆಪ್ತ ಸಹಾಯಕನೆಂದು ಆರೋಪಿಸಲಾಗಿರುವ ಪ್ರೇಮ್ ಪ್ರಕಾಶ್ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತು. ಜಾರ್ಖಂಡ್ ಹೈಕೋರ್ಟ್ ಮಾರ್ಚ್ 22 ರಂದು ಜಾಮೀನು ನಿರಾಕರಿಸಿದ ಹಿನ್ನಲೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಯಿತು.

 

Previous Post
ಜನ್ ಧನ್ ಯೋಜನೆಗೆ ಹತ್ತು ವರ್ಷ – 53.1 ಕೋಟಿ ಬ್ಯಾಂಕ್ ಖಾತೆಗಳಲ್ಲಿ 2.3 ಲಕ್ಷ ಕೋಟಿ ಜಮೆ
Next Post
ಗುಜರಾತ್: 3 ವರ್ಷದ ಮಗು ಮೇಲೆ ಅತ್ಯಾಚಾರ

Recent News