ಎಲ್ಲಾ ರಾಜ್ಯಗಳ ಸಂಯೋಜಿತ ಪ್ರಯತ್ನಗಳು ವಿಕಸಿತ್ ಭಾರತ ಕನಸು ನನಸು ಮಾಡಲಿದೆ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ

ಎಲ್ಲಾ ರಾಜ್ಯಗಳ ಸಂಯೋಜಿತ ಪ್ರಯತ್ನಗಳು ವಿಕಸಿತ್ ಭಾರತ ಕನಸು ನನಸು ಮಾಡಲಿದೆ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ನಡೆಯಿತು. ರಾಷ್ಟ್ರಪತಿ ಭವನದ ಸಾಂಸ್ಕೃತಿನ ಭವನದಲ್ಲಿ ನಡೆದ ಸಭೆಯಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಲೆಫ್ಟಿನೆಂಟ್ ಗರ್ವನರ್ಗಳು ಭಾಗಿಯಾಗಿದ್ದರು. ತಮಿಳುನಾಡು, ಕರ್ನಾಟಕ, ಕೇರಳ, ದೆಹಲಿ, ಪಂಜಾಬ್ ಸಿಎಂಗಳು ಸಭೆಯನ್ನು ಬಹಿಷ್ಕರಿಸಿದ್ದಾರೆ. ಸಭೆಯಲ್ಲಿ ಪ್ರಾಸ್ತವಿಕ ಮಾತನಾಡಿದ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಂಯೋಜಿತ ಪ್ರಯತ್ನಗಳ ಮೂಲಕ ನಾವು ‘ವಿಕ್ಷಿತ್ ಭಾರತ್ 2047’ ನ ಕನಸನ್ನು ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ, ನಾವು ಸಾಂಕ್ರಾಮಿಕ ರೋಗವನ್ನು ಸೋಲಿಸಿದ್ದೇವೆ. ನಮ್ಮ ಜನರು ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ತುಂಬಿದ್ದಾರೆ. ನಾವು ಎಲ್ಲರ ಸಂಯೋಜಿತ ಪ್ರಯತ್ನದಿಂದ ವಿಕ್ಷಿತ್ ಭಾರತ್ 2047 ರ ನಮ್ಮ ಕನಸುಗಳನ್ನು ನನಸಾಗಿಸಬಹುದು. ವಿಕ್ಷಿತ್ ರಾಜ್ಯಗಳು ವಿಕ್ಷಿತ್ ಭಾರತ್ ಮಾಡುತ್ತವೆ ಎಂದು ಹೇಳಿದರು. ವಿಕ್ಷಿತ್ ಭಾರತ್ 2047 ಪ್ರತಿಯೊಬ್ಬ ಭಾರತೀಯನ ಮಹತ್ವಾಕಾಂಕ್ಷೆಯಾಗಿದೆ. ರಾಜ್ಯಗಳು ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದಿರುವುದರಿಂದ ಈ ಗುರಿಯನ್ನು ಸಾಧಿಸುವಲ್ಲಿ ಸಕ್ರಿಯ ಪಾತ್ರ ವಹಿಸಬಹುದು. ಇದು ಬದಲಾವಣೆಗಳ, ತಾಂತ್ರಿಕ ಮತ್ತು ಭೌಗೋಳಿಕ-ರಾಜಕೀಯ ಮತ್ತು ಅವಕಾಶಗಳ ದಶಕವಾಗಿದೆ. ಭಾರತವು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು ಮತ್ತು ನಮ್ಮ ನೀತಿಗಳನ್ನು ಅಂತರಾಷ್ಟ್ರೀಯ ಹೂಡಿಕೆಗಳಿಗೆ ಅನುಕೂಲವಾಗುವಂತೆ ಮಾಡಬೇಕು ಇದರಿಂದ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಇದು ಪ್ರಗತಿಗೆ ಮೆಟ್ಟಿಲು ಎಂದು ಅವರು ಹೇಳಿದರು.

Previous Post
ಮೋದಿ ಆಗಸ್ಟ್ 23ಕ್ಕೆ ಉಕ್ರೇನ್ ಭೇಟಿ ಸಾಧ್ಯತೆ
Next Post
ರಾಮನಗರ ಹೆಸರು ಮರುಸ್ಥಾಪನೆ ನನ್ನ ಜೀವನದ ಗುರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಹೆಚ್‌ಡಿಕೆ ಗರಂ

Recent News