ಕಾಂಗ್ರೆಸ್ ಬಿಡಲ್ಲ: ಮತ್ತೊಮ್ಮೆ ಸ್ಪಷ್ಟಪಡಿಸಿದ ಕಮಲ್ ನಾಥ್
ಛಿಂದ್ವಾರಾ, ಫೆ. 29: ತಾನು ಬಿಜೆಪಿಗೆ ಸೇರಲಿದ್ದೇನೆ ಎಂಬ ವದಂತಿಯನ್ನು ತಳ್ಳಿಹಾಕಿದ ಒಂದು ದಿನದ ನಂತರ ಕಾಂಗ್ರೆಸ್ ಹಿರಿಯ ನಾಯಕ ಕಮಲನಾಥ್ ಪಕ್ಷದ ಕಾರ್ಯಕರ್ತರನ್ನುದ್ದೇಶಿ ಮಾತನಾಡುತ್ತಾ ‘ನಾನು ನಿಮ್ಮ ಮೇಲೆ ಹೇರಿಕೆ ಮಾಡುವುದಿಲ್ಲ, ನೀವು ಬಯಸಿದರೆ ನಾನು ಪಕ್ಷ ತೊರೆಯುತ್ತೇನೆ’ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ತಮ್ಮ ತವರು ಛಿಂದ್ವಾರಾದ ಹರಾಯ್‌ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ 77 ವರ್ಷದ ಕಮಲನಾಥ್, ನಾನು ಹಲವು ವರ್ಷಗಳಿಂದ ನಿಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದೇನೆ. ನೀವು ಕಮಲ್ ನಾಥ್ ಅವರಿಗೆ ಬೀಳ್ಕೊಡಲು ಬಯಸಿದರೆ, ಅದು ನಿಮ್ಮ ಆಯ್ಕೆಯಾಗಿದೆ. ನಾನು ಹೇರಿಕೆ ಮಾಡುವುದಿಲ್ಲ. ಇದು ನಿಮ್ಮ ಆಯ್ಕೆಯ ವಿಷಯ” ಎಂದು ಕಮಲ್ ನಾಥ್ ಹೇಳಿದ್ದಾರೆ.
ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಸದಸ್ಯರಾಗಿದ್ದಾರೆ. ಈ ಸ್ಥಾನದಿಂದ ನಕುಲ್ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ಹಿರಿಯ ನಾಯಕ ಕಮಲ್ ನಾಥ್ ಈಗಾಗಲೇ ಘೋಷಿಸಿದ್ದರು. ಛಿಂದ್ವಾರಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಹಿರಿಯ ರಾಜಕಾರಣಿ, ಬಿಜೆಪಿ ಇಲ್ಲಿ ಆಕ್ರಮಣಕಾರಿಯಾಗಿ ಯೋಚಿಸುತ್ತಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಭಯಪಡಬಾರದು ಎಂದು ಹೇಳಿದರು. ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಮತ ಚಲಾಯಿಸಬೇಕು. ನಿಮ್ಮೆಲ್ಲರ ಮೇಲೆ ನನಗೆ ನಂಬಿಕೆ ಇದೆ ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ಎಲ್ಲರಿಗೂ ಸೇರಿದ್ದು ಎಂದು ಹೇಳಿದ ಕಮಲ್ ನಾಥ್, ಅದರ ನಿರ್ಮಾಣದ ಶ್ರೇಯವನ್ನು ಬಿಜೆಪಿ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ರಾಮ ಮಂದಿರ ಬಿಜೆಪಿಯದ್ದೇ? ಅದು ನನ್ನನ್ನೂ ಒಳಗೊಂಡಂತೆ ಎಲ್ಲರಿಗೂ ಸೇರಿದ್ದು. ಸಾರ್ವಜನಿಕರ ಹಣದಿಂದ ಮಂದಿರ ನಿರ್ಮಾಣವಾಗಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿತು. ಅವರು (ಬಿಜೆಪಿ) ಅಧಿಕಾರದಲ್ಲಿರುವುದರಿಂದ ಅವರೇ ಮಂದಿರವನ್ನು ನಿರ್ಮಿಸಿದರು ಎಂದು ಹೇಳಿದ್ದಾರೆ. ನಾನು ಭಗವಾನ್ ರಾಮನನ್ನು ಪೂಜಿಸುತ್ತೇನೆ. ಛಿಂದ್ವಾರಾದಲ್ಲಿ ನಮ್ಮ ಒಡೆತನದ ಜಮೀನಿನಲ್ಲಿ ಹನುಮಂತನಿಗೆ ಸಮರ್ಪಿತವಾದ ದೊಡ್ಡ ದೇವಾಲಯವನ್ನು ನಿರ್ಮಿಸಿದ್ದೇನೆ. ನಾವು ಧಾರ್ಮಿಕ ವ್ಯಕ್ತಿಗಳಾಗಿದ್ದು, ನಮ್ಮ ಸಂಸ್ಕೃತಿಯನ್ನು ಹಾಗೇ ಉಳಿಸಿಕೊಂಡಿದ್ದೇವೆ ಎಂದರು. ಕಮಲ್ ನಾಥ್ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ ಹಿರಿಯ ರಾಜಕಾರಣಿ ಇದೆಲ್ಲ “ಮಾಧ್ಯಮ ಸೃಷ್ಟಿ” ಎಂದಿದ್ದಾರೆ. ನೀವು (ಮಾಧ್ಯಮ) ಇಂತಹ ಊಹಾಪೋಹಗಳನ್ನು ಮಾಡುತ್ತಿದ್ದೀರಿ. ಬೇರೆ ಯಾರೂ ಹಾಗೆ ಹೇಳುತ್ತಿಲ್ಲ. ನೀವು ಎಂದಾದರೂ ನನ್ನಿಂದ ಕೇಳಿದ್ದೀರಾ? ನೀವು ಸುದ್ದಿ ಪ್ರಸಾರ ಮಾಡಿ ಬಂದು ನನ್ನಲ್ಲಿ ಕೇಳುತ್ತಿದ್ದೀವಿ ಅಮ ಮತ್ತು ನನ್ನನ್ನು ಕೇಳಿ. ಆ ಸುದ್ದಿಯಲ್ಲೇನೂ ನಿಜವಿಲ್ಲ ಎಂದು ಕಮಲ್ ನಾಥ್ ಹೇಳಿದ್ದಾರೆ.