ನಾ ಹೀಗೆಲ್ಲ ಬದುಕಿಲ್ಲ, ಸರಿಯಾದ ಟಾಯ್ಲೆಟ್, ಮಲಗಲು ರೂಂ ಕೊಡಿ’ : SIT ಅಧಿಕಾರಿಗಳ ಜೊತೆ ಪ್ರಜ್ವಲ್ ಕಿರಿಕ್

ನಾ ಹೀಗೆಲ್ಲ ಬದುಕಿಲ್ಲ, ಸರಿಯಾದ ಟಾಯ್ಲೆಟ್, ಮಲಗಲು ರೂಂ ಕೊಡಿ’ : SIT ಅಧಿಕಾರಿಗಳ ಜೊತೆ ಪ್ರಜ್ವಲ್ ಕಿರಿಕ್

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 6 ದಿನಗಳ ಕಾಲ ಎಸ್ ಐ ಟಿ ಕಸ್ಟಡಿಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಎಸ್‌ಐಟಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ನಾನು ಹಿಂಗೆಲ್ಲ ಬದುಕಿಲ್ಲ ನನಗೆ ಸರಿಯಾದ ಟಾಯ್ಲೆಟ್ ಹಾಗೂ ಮಲಗಲು ರೂಮ್ ಕೊಡಿ ಎಂದು ಕಿರಿಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಹೌದು ಸಂಸದ ಪ್ರಜ್ವಲ್ ರೇವಣ್ಣರನ್ನ ನ್ಯಾಯಾಲಯ ಆರು ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಆದರೆ ಎಸ್‌ಐಟಿ ಕಚೇರಿಯಲ್ಲಿ ಶೌಚಾಲಯ, ಕೊಠಡಿ ಶುಚಿಯಾಗಿಲ್ಲ, ಕೆಟ್ಟ ವಾಸನೆ ಬರುತ್ತಿದೆ. ಎಸ್‌ಐಟಿ ಕಚೇರಿಯಲ್ಲಿ ಉಸಿರಾಡಲು ಕಷ್ಟವಾಗಿದೆ ಎಂದು ನ್ಯಾಯದೀಶರ ಮುಂದೆ ಗೋಳು ತೋಡಿಕೊಂಡಿದ್ದ ಪ್ರಜ್ವಲ್. ಇದೀಗ ಮತ್ತೆ ಎಸ್‌ಐಟಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.ನ್ಯಾಯಾಲಯದಲ್ಲಿ ವಾದ ನಡೆದ ವೇಳೆ ವಕೀಲ, ಆರೋಪಿಗೆ ಯಾವುದೇ ಐಷಾರಾಮಿ ವ್ಯವಸ್ಥೆ ಬೇಡ, ಸಾಮಾನ್ಯ ಕೈದಿ ಇರುವಂತೆ ಸಾಮಾನ್ಯ ಕೊಠಡಿಯಲ್ಲಿರಲಿ ಎಂದಿದ್ದರು. ಅದರಂತೆ ಎಸ್‌ಐಟಿ ಅಧಿಕಾರಿಗಳು ಸಾಮಾನ್ಯ ಆರೋಪಿಗಳಂತೆ ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಸರಿಯಾದ ಟಾಯ್ಲೆಟ್ ಹಾಗೂ ಮಲಗಲು ರೂಮ್ ಕೊಡಿ ಎಂದು ಅಧಿಕಾರಿಗಳೊಂದಿಗೆ ಪ್ರಜ್ವಲ್ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ.ಆದರೆ ಸಂಸದ ಪ್ರಜ್ವಲ್ ರೇವಣ್ಣ ಮನವಿಗೆ ತಲೆಕೆಡಿಸಿಕೊಳ್ಳದ ಎಸ್‌ಐಟಿ ಅಧಿಕಾರಿಗಳು. ಯಾವುದೇ ಆರೋಪಿಗಳಿಗಾದರೂ ಅದೇ ರೂಂ, ಅದೇ ಟಾಯ್ಲೆಟ್. ನಿಮ್ಮ ತಂದೆಗೆ ಸಹ ಇದೇ ರೂಂ, ಇದೇ ಟಾಯ್ಲೆಟ್ ಕೊಟ್ಟಿರುವುದಾಗಿ SIT ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಪ್ರಜ್ವಲ್ ರೇವಣ್ಣ ಅವರು ವಾಸನೆ ಬರಲಿ ಏನೇ ಇದ್ದರೂ ಕೂಡ ಅಲ್ಲೇ ಆರು ದಿನಗಳವರೆಗೆ ಕಾಲ ಕಳೆಯಬೇಕಾಗಿದೆ.

Previous Post
ಸಿಬಿಐ ತನಿಖೆಯಿಂದ ಸಿಎಂ ಹೇಗೆ ಭಾಗಿಯಾಗಿದ್ದಾರೆಂದು ತಿಳಿಯಲಿದೆ: ಜೋಶಿ
Next Post
ಎಕ್ಸಿಟ್ ಪೋಲ್ ಮಾಹಿತಿ ಸರಿಯಿಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ‘ಡಬಲ್ ಡಿಜಿಟ್’ ಸ್ಥಾನಗಳನ್ನು ಗೆಲ್ಲುತ್ತೆ : ಡಿಸಿಎಂ ಡಿಕೆಶಿ

Recent News