ಹಾವೇರಿ: ರಾಜ್ಯದಲ್ಲಿ ರಾಜಕೀಯ ಒಂದು ಪರಿವರ್ತನೆ ಕಾಲ ನಡೆಯಲಿದೆ. ಎಲ್ಲ ಹಂತದಲ್ಲೂ ಬದಲಾವಣೆ ಆಗುತ್ತದೆ. ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಆಶ್ಚರ್ಯ ಏನು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಹಾವೇರಿ ನಗರ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಉಪಾಧ್ಯಕ್ಷರ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾವೇರಿ ನಗರಸಭೆ ಬಿಜೆಪಿ ತೆಕ್ಕೆಗೆ ಬಂದಿದೆ ನಗರವನ್ನು ಸಮಗ್ರ ಅಭಿವೃದ್ಧಿ ಮಾಡುತ್ತೇವೆ. ಹಾವೇರಿ ನಗರಸಭೆಯಲ್ಲಿ ಆದ ಬದಲಾವಣೆ ರಾಜ್ಯ ಸರ್ಕಾರದಲ್ಲೂ ಆಗುತ್ತಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಒಂದು ಪರಿವರ್ತನೆ ಕಾಲ ಕರ್ನಾಟಕದಲ್ಲಿ ನಡೆಯಲಿದೆ. ಎಲ್ಲ ಹಂತದಲ್ಲೂ ಬದಲಾವಣೆ ಆಗುತ್ತದೆ. ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಏನೂ ಆಶ್ಚರ್ಯ ಇಲ್ಲ ಎಂದು ಹೇಳಿದರು. ಬರುವ ದಿನಗಳಲ್ಲಿ ರಾಜ್ಯದ ಚುಕ್ಕಾಣಿ ಬದಲಾವಣೆ ಆಗಲಿದೆ. ನಮ್ಮವರೇ ನಮಗೆ ಶತ್ರುಗಳು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿ.ಎಂ ಸಿದ್ದರಾಮಯ್ಯನವರಿಗೆ ತಡವಾಗಿ ಗೊತ್ತಾಗುತ್ತಿದೆ. ನಾವು ಹಿಂದೆಯೇ ಹೇಳಿದ್ದೇವು. ಅವರಿಗೆ ತಡವಾಗಿ ಅನುಭವಕ್ಕೆ ಬಂದಿದೆ. ಎಲ್ಲವೂ ಸರಿ ಇದೆ ಅಂತಾ ದೋಣಿಯಲ್ಲಿ ಕುಳಿತ್ತಿದ್ದರು. ಈಗ ಕುಂತ ದೋಣಿಯಲ್ಲಿ ತೂತು ಕೊರೆಯುವ ಕೆಲಸ ನಡೆಯುತ್ತಿದೆ. ರಾಜಕೀಯ ಅನುಭವ ಬಳಸಿಕೊಂಡು ಯಾವ ರೀತಿ ಹೋರಾಟ ಮಾಡುತ್ತಾರೆ ಎಂದು ನೋಡೋಣ ಎಂದರು.
ಕಾನೂನು ಹೋರಾಟ ಬಹಳ ಪ್ರಾಮುಖ್ಯತೆ ಹೊಂದಿದ್ದು ಅದರ ಜೊತೆಗೆ ರಾಜಕೀಯ ಹೋರಾಟ ಇದೆ. ಸಿಎಂ ಸಿದ್ದರಾಮಯ್ಯ ಮುಂದೆ ಏನು ಮಾಡುತ್ತಾರೆ ಕಾದು ನೋಡೊಣ ಎಂದರು. ಆಪರೇಷನ್ ಕಮಲದ ಕುರಿತು ಕೇಳಿದ ಪ್ರಶ್ನೆಗೆ ಆಪರೇಷನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಬಳಿ ಅಷ್ಟು ಸಂಖ್ಯಾ ಬಲ ಇಲ್ಲ. ಆದರೆ, ದೊಡ್ಡ ಪ್ರಮಾಣದ ರಾಜಕೀಯ ಬದಲಾವಣೆ ಆಗಲಿದೆ ಎಂದು ಹೇಳಿದರು