ರೈಲ್ವೆ ಕಾಮಗಾರಿಗಳಿಗೆ ಕರ್ನಾಟಕಕ್ಕೆ ₹7,559 ಕೋಟಿ ಅನುದಾನ – ಅಶ್ವಿನಿ ವೈಷ್ಣವ್

ರೈಲ್ವೆ ಕಾಮಗಾರಿಗಳಿಗೆ ಕರ್ನಾಟಕಕ್ಕೆ ₹7,559 ಕೋಟಿ ಅನುದಾನ – ಅಶ್ವಿನಿ ವೈಷ್ಣವ್

ನವದೆಹಲಿ : ಪ್ರಸಕ್ತ ಸಾಲಿನ ಬಜೆಟ್ನವದೆಹಲಿ  ನಲ್ಲಿ ಕರ್ನಾಟಕದಲ್ಲಿನ ರೈಲ್ವೆ ಕಾಮಗಾರಿಗಳಿಗೆ ₹7,559 ಕೋಟಿ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ರೈಲ್ವೆ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುಪಿಎ ಸರ್ಕಾರಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚು ಅನುದಾನ ನೀಡಿದ್ದೇವೆ ಎಂದರು.

ಯುಪಿಎ ಅವಧಿಯಲ್ಲಿ ವಾರ್ಷಿಕ 1800 ಕೋಟಿ ಹಂಚಿಕೆ ಮಾಡಲಾಗಿತ್ತು, ಯುಪಿಎಗಿಂತ 9 ಪಟ್ಟು ಹೆಚ್ಚು ಹಣವನ್ನು ಮೋದಿ ಸರಕಾರ ಕೊಟ್ಟಿದೆ. ಕರ್ನಾಟಕದಲ್ಲಿ 31 ಯೋಜನೆಗಳು ನಡೆಯುತ್ತಿದೆ, 47 ಸಾವಿರ ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿವೆ ಎಂದರು. 2014 ರಿಂದ ಈವರೆಗೂ 638 ಪ್ಲೈವೊವರ್‌ಗಳನ್ನು ನಿರ್ಮಿಸಿದೆ.

638 ಪ್ಲೈಓವರ್, ಅಂಡರ್ ಪಾಸ್ ಗಳ ನಿರ್ಮಾಣ ಮಾಡಲಾಗಿದೆ. ಆಲಮಟ್ಟಿ, ಅಳ್ನಾವರ, ಅರಸೀಕೆರೆ ಜಂಕ್ಷನ್, ಬಾದಾಮಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಕ್ಯಾಂಟ್., ಬಂಗಾರಪೇಟೆ, ಬಂಟವಾಳ, ಬೆಳಗಾವಿ, ಬೀದರ್, ಬಿಜಾಪುರ, ಚಾಮರಾಜ ನಗರ, ಚನ್ನಪಟ್ಟಣ, ಚಿಕ್ಕಮಗಳೂರು ರಸ್ತೆ, ಚಿಕ್ಕಮಗಳೂರು ರಸ್ತೆ , ಚಿತ್ರದುರ್ಗ, ದಾವಣಗೆರೆ, ಧಾರವಾಡ, ದೊಡ್ಡಬಳ್ಳಾಪುರ, ಗದಗ, ಗಂಗಾಪುರ ರಸ್ತೆ, ಗಂಗಾವತಿ, ಘಟಪ್ರಭಾ, ಗೋಕಾಕ ರಸ್ತೆ, ಹರಿಹರ, ಹಾಸನ, ಹೊಸಪೇಟೆ, ಕಲಬುರಗಿ ಜಂ (ಗುಲ್ಬರ್ಗ),

ಕೆಂಗೇರಿ, ಕೊಪ್ಪಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು, ಮಲ್ಲೇಶ್ವರ), ಮಂಡ್ಯ, ಮಂಗಳೂರು ಸೆಂಟ್ರಲ್, ಮಂಗಳೂರು ಜಂ, ಮುನಿರಾಬಾದ್, ಮೈಸೂರು ಜಂ (ಮೈಸೂರು), ರಾಯಬಾಗ, ರಾಯಚೂರು ಜಂ, ರಾಮನಗರ, ರಾಣಿಬೆನ್ನೂರು, ಸಾಗರ ಜಂಬಗಾರು, ಸಕಲೇಶಪುರ, ಶಹಾಬಾದ್, ಶಿವಮೊಗ್ಗ ಟೌನ್, ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂ, ಸುಬ್ರಹ್ಮಣ್ಯ, ತಲಗೂರು ರಸ್ತೆ, ತಾಳಗೂರು , ಉಡುಪಿ, ವಾಡಿ, ವೈಟ್‌ಫೀಲ್ಡ್, ಯಾದಗಿರಿ, ಯಶವಂತಪುರ ನಿಲ್ದಾಣಗಳನ್ನು ಅಮೃತ್ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

Previous Post
ರಾಯಚೂರಿಗೆ ಘೋಷಣೆಯಾಗದ ಏಮ್ಸ್ – ಹೋರಾಟಗಾರರಿಂದ ಅಸಮಧಾನ
Next Post
ಬಜೆಟ್‌ನಲ್ಲಿ ತಾರತಮ್ಯ ಆರೋಪ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ಪ್ರತಿಭಟನೆ

Recent News