ಸಚಿವ ಎನ್ ಚಲುವರಾಯಸ್ವಾಮಿ ಅವರಿಂದ “ಕೃಷಿ ಸಂತೆ” ಉದ್ಘಾಟನೆ

ಸಚಿವ ಎನ್ ಚಲುವರಾಯಸ್ವಾಮಿ ಅವರಿಂದ “ಕೃಷಿ ಸಂತೆ ಉದ್ಘಾಟನೆ

ಬೆಂಗಳೂರು, ಜುಲೈ 27; ಕೃಷಿ ವಿಶ್ವವಿದ್ಯಾನಿಲಯ ವತಿಯಿಂದ ಬೆಂಗಳೂರಿನ ಜಿ.ಕೆ.ವಿ.ಕೆ ಆವರಣದಲ್ಲಿ ಆಯೋಜಿಸಿದ್ದ “ಕೃಷಿ ಸಂತೆ“ ಕಾರ್ಯಕ್ರಮವನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಉದ್ಘಾಟಸಿದರು. ನಂತರ ಮಾತನಾಡಿದ ಸಚಿವರು ಕಳೆದ ಜೂನ್ ತಿಂಗಳಿನಲ್ಲಿ ಆಯೋಜಿಸಿದ್ದ ವಿನೂತನ ಮತ್ತು ಪ್ರಥಮ ಕೃಷಿ ಸಂತೆಯಲ್ಲಿ ಅರ್ಧ ದಿನಕ್ಕೆ 15 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಇದು ಒಂದು ಯಶಸ್ವಿ ಮತ್ತು ವಿಶೇಷವಾದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ. ಈ ಕಾರ್ಯಕ್ರಮದ ಯಶಸ್ಸನ್ನು ಕಣ್ಣಾರೆಕಂಡ ನಾನು ಕುಲಪತಿಗಳಿಗೆ ಈ ಕಾರ್ಯಕ್ರಮವನ್ನು ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಆಯೋಜಿಸುವಂತೆ ಸಲಹೆ ನೀಡಿದ್ದೆ. ಅದರಂತೆ ಈ ದಿನ ಇನ್ನೊಂದು ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ವಿಷಯ. ಇದಕ್ಕಾಗಿ ಕುಲಪತಿಗಳು ಮತ್ತು ಅವರ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಮತ್ತು ರೈತರು ಸಮರ್ಪಕರೀತಿಯಲ್ಲಿ ಬಳಸಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಸಂತೆಯಲ್ಲಿ ಕಡಿಮೆ ದರದಲ್ಲಿ ತಾಜಾ ಕೃಷಿ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪಲು ಸಹಕಾರಿಯಾಗಿದೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಈ ಕಾರ್ಯಕ್ರಮದ ಆಚರಣೆಯಿಂದ ಸಂತೆಯ ವಾತಾವರಣ ಏರ್ಪಟ್ಟಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಕೃಷಿ ಸಂತೆಯಲ್ಲಿ ಬಿತ್ತನೆ ಬೀಜಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ವಿವಿಧ ಸಸ್ಯಾಭಿವೃದ್ಧಿ ಸಾಮಗ್ರಿಗಳು ಡ್ರಾಗನ್ ಫ್ರೊಟ್, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣಾಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು, ಅಡಿಕೆ ಉತ್ಪನ್ನಗಳು, ರೇಷೆ ್ಮಕೃಷಿಯ ಉಪ ಉತ್ಪನ್ನಗಳು, ಅಣಬೆ ಮತ್ತು ಜೇನುಕೃಷಿ, ಪಶುಸಂಗೋಪನೆ, ಕೇಕ್ ಪ್ರದರ್ಶನ, ರಾಜಮುಡಿ ಅಕ್ಕಿ, ರಾಸಾಯನಿಕ ಮುಕ್ತ ಬೆಲ್ಲ, ಬಗೆಬಗೆಯಉಪ್ಪಿನಕಾಯಿ, ಕೃಷಿ ಪ್ರಕಟಣೆಗಳು ಹಾಗೂ ಇನ್ನೂ ಮುಂತಾದÀವುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮzಲ್ಲಿÀ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ. ಸುರೇಶ ಸೇರಿದಂತೆ ಹಿರಿಯ ಗಣ್ಯರು ಹಾಗೂ   ಕೃ.ವಿ.ವಿ, ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. “34ನೇ ವರ್ಷದ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಮತ್ತು ಸ್ಪರ್ಧೆ” ಉದ್ಘಾಟನೆ. ನಂತರ ಮಾತನಾಡಿದ ಸಚಿವರು 34 ವರ್ಷಗಳ ಹಿಂದೆ ಹೆಚ್.ಎಲ್.ನಾಗೇಗೌಡರು ಪ್ರಾರಂಭಿಸಿದ ನಮ್ಮ ಪರಂಪರೆಯ ಸಾಂಸ್ಕೃತಿಕ ಸ್ಪರ್ಧೆಯ ಪ್ರತೀಕವಾದ ಈ ಗಾಳಿಪಟ ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವಾಗಿಸಿದ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ತುರವರು ಮುಂದುವರೆಸಿಕೊAಡು ಹೋಗುತ್ತಿರುವುದು ಸಂತಸದ ವಿಷಯ. ಈ ವರ್ಷ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಆಚರಿಸುತ್ತಿರುವುದು ಮತ್ತೊಂದು ವಿಶೇಷ, ಈ ಗಾಳಿ ಪಟ ಉತ್ಸವವನ್ನು ಮುಂದುವರೆಸಿಕೊAಡು ಹೋಗುತ್ತಿರುವುದರಿಂದ ಯುವಜನತೆಗೆ ನಮ್ಮ ಸಾಂಸ್ಕೃತಿಕ ಪರಂಪರೆ ಅರಿವಾಗುತ್ತದೆ. ಇಂತಹ ಪ್ರಾಚೀನ ಕ್ರೀಡೆಗಳನ್ನು ಮುಂದುವರೆಸಿಕೊAಡು ಹೋಗುವುದು ನಮ್ಮೆಲ್ಲ ಆದ್ಯಕರ್ತವ್ಯವಾಗಿದೆ. ಈ ವರ್ಷದ ಉತ್ಸವದಲ್ಲಿ ಕೃಷಿ ಕುರಿತ ಸಂದೇಶಕ್ಕೆ ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಗಾಳಿಪಟ ಉತ್ಸವದಲ್ಲಿ 36 ತಂಡಗಳು ಮತ್ತು 12 ರಾಜ್ಯ ಮಟ್ಟದ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ. ಸುರೇಶ, ಕರ್ನಾಟಕ ಜಾನಪದ ಪರಿಷತ್ನ ಅಧ್ಯಕ್ಷÀರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ, ಮತ್ತು ಮ್ಯಾನೇಜಿಂಗ್ ಟ್ರಸ್ಟಿಗಳಾದ  ಆದಿತ್ಯ ನಂಜರಾಜ್ರವರು ಭಾಗವಹಿಸಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Previous Post
ರಾಮನಗರ ಹೆಸರು ಮರುಸ್ಥಾಪನೆ ನನ್ನ ಜೀವನದ ಗುರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಹೆಚ್‌ಡಿಕೆ ಗರಂ
Next Post
ಮನೆ ಮುರುಕರು ಯಾರು ಎಂದು ರಾಜ್ಯದ ಜನತೆಗೆ ಗೊತ್ತಾಗಿದೆ: ಬಸವರಾಜ ಬೊಮ್ಮಾಯಿ

Recent News