‘ಅಟಲ್ ಸೇತು’ ಬ್ರೀಡ್ಜ್ ಉದ್ಘಾಟನೆ

‘ಅಟಲ್ ಸೇತು’ ಬ್ರೀಡ್ಜ್ ಉದ್ಘಾಟನೆ

ಮುಂಬೈ, ಜನವರಿ 12: ಮುಂಬೈ ಮತ್ತು ನವಿ ಮುಂಬೈಗಳನ್ನು ಸಂಪರ್ಕಿಸಲು ಸ್ಥಾಪಿಸಲಾಗಿರುವ ಭಾರತದ ಅತೀ ಉದ್ದದ ಸಮುದ್ರ ಸೇತುವೆಯಾದ ‘ಅಟಲ್ ಸೇತು’ಅನ್ನು (Atal Setu) ಇಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಿರುವ ಈ ‘ಅಟಲ್ ಸೇತು’ ಪೂರ್ಣ ಹೆಸರು ‘ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವಶೇವಾ ಅಟಲ್ ಸೇತು’ ಎಂಬದಾಗಿದೆ. ಇದು ಒಟ್ಟು ಒಟ್ಟು 21.8 ಕಿ.ಮೀ. ಉದ್ದದ ಸೇತುವೆಯಾಗಿದೆ. ಸರ್ಕಾರ ಇದನ್ನು ಒಟ್ಟು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ.

ಶುಕ್ರವಾರ ಮಹಾರಾಷ್ಟ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಪ್ರಧಾನಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಅಟಲ್ ಸೇತು 6 ಪಥದ ಹೆದ್ದಾರಿ ಆಗಿದೆ. ಇದು ಮುಂಬೈ ಟ್ರಾನ್ಸ್- ಹಾರ್ಬರ್ ಲಿಂಕ್ ಸೇತುವೆಯಾಗಿದ್ದು, ಇದಕ್ಕೆ ‘ಅಟಲ್‌ ಬಿಹಾರಿ ವಾಜಪೇಯಿ ಸೇವಿ – ನವ ಶೇವಾ ಅಟಲ್ ಸೇತು’ ಎಂದು ಹೆಸರಿಡಲಾಗಿದೆ.

ಸೇತುವೆಯ ವಿಶೇಷತೆ ಈ ಸೇತುವೆ ಮುಂಬೈ ಮತ್ತು ಉಪನಗರವಾದ ನವಿ ಮುಂಬೈಗೆ ಸಮುದ್ರದ ಮೇಲ್ಬಾಗದಲ್ಲಿ ಸಂಪರ್ಕ ನಿರ್ಮಿಸಲಾಗಿದೆ. ಒಟ್ಟು ಆರು ಲೈನ್ ಇದ್ದು, ಎರಡು ಗಂಟೆಗಳ ಪ್ರಯಾಣವನ್ನು ಕೇವಲ 20 ನಿಮಿಷಕ್ಕೆ ಇಳಿಸಿದ ಕೀತಿ ಈ ಸೇತುವೆ ಇದೆ.

ಇದರಿಂದ ದಕ್ಷಿಣ ಭಾರತಕ್ಕೂ ಸಂಪರ್ಕ ಸುಲಭವಾಗಲಿದೆ. 21.8 ಕಿ.ಮೀ. ಉದ್ದದ ಸೇತುವೆಯಲ್ಲಿ 16.5 ಕಿ.ಮೀ. ಸಮುದ್ರದ ಮೇಲೆ ನಿರ್ಮಾಣಗೊಂಡಿದ್ದರೆ, 5.5ಕಿ.ಮೀ.ಭೂಮಿಯ ಮೇಲೆ ನಿರ್ಮಾಣಗೊಂಡಿದೆ. ಈ ಸೇತುವೆಯ ಮೇಲೆ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶ ನೀಡಲಾಗಿದೆ. ಈ ಸೇತುವೆ ಮೇಲೆ ಬೈಕ್ ಮತ್ತು ಆಟೋಗಳ ಸಂಚಾರಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಮುದ್ರ ಸೇತುವೆ ಮೇಲೆ ಸಂಚರಿಸಲು ಟೋಲ್ ಕಟ್ಟಬೇಕು. ಒಮ್ಮುಖ ಪ್ರಯಾಣಕ್ಕೆ ವಾಹನಗಳಿಗೆ 250 ರೂಪಾಯಿ ಮತ್ತು ದ್ವಿಮುಖ ಪ್ರಯಾಣಕ್ಕೆ 375 ರೂಪಾಯಿ ಶುಲ್ಕ ಪಾವತಿಸಬೇಕಿದೆ. ಅಟಲ್ ಸೇತು ಮೇಲೆ ಪ್ರಧಾನಿ ಮೊದಲ ಸಂಚಾರ ಇಂದು ಮುಂಬೈ- ನವೀ ಮುಂಬೈ ಹೊಸ ಸೇತುವೆ ಉದ್ಘಾಟನೆ ಮಾಡಿದ ಬಳಿಕ ಪ್ರಧಾನಿ ನವೀ ಮುಂಬೈವರೆಗೆ ಅದೇ ರಸ್ತೆಯಲ್ಲಿ ಸಂಚರಿಸಲಿದ್ದಾರೆ. ಈ ಮೂಲಕ ಉದ್ಘಾಟನೆಯಾದ ಬಳಿಕ ಒಂದು ತುದಿಯಿಂದ ಕೊನೆಯವರೆಗೆ ಪ್ರಧಾನಿ ಮೋದಿಯವರೇ ಸಂಚಾರ ನಡೆಸಲಿದ್ದಾರೆ. ನಂತರ ಸಾರ್ವಜನಿಕರಿಗೆ ಸಂಚಾರಕ್ಕೆ ಸೇತುವೆಯನ್ನು ಮುಕ್ತಗೊಳ್ಳಲಿದೆ.

Previous Post
ಯುವನಿಧಿ ಗ್ಯಾರಂಟಿ ಯೋಜನೆ ಜಾರಿ ನಮ್ಮ ಸರ್ಕಾರದ ಹೆಮ್ಮೆಯ ಸಂಗತಿ: ಸಚಿವ ಎಸ್ ಮಧು ಬಂಗಾರಪ್ಪ
Next Post
Swachh Survekshan-2023: ಸ್ವಚ್ಛತೆಯಲ್ಲಿ ಬೆಂಗಳೂರಿಗೆ ಮತ್ತೊಂದು ಗೌರವ, ಎಷ್ಟನೇ ಸ್ಥಾನ?

Recent News