ಅನುದಾನ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ತಾರತಮ್ಯ ಸಾಧ್ಯವಿಲ್ಲ, ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಸ್ಪಷ್ಟನೆ

ಅನುದಾನ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ತಾರತಮ್ಯ ಸಾಧ್ಯವಿಲ್ಲ, ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಸ್ಪಷ್ಟನೆ

ನವದೆಹಲಿ : ಹಣಕಾಸು ಆಯೋಗದ ಶಿಫಾರಸ್ಸು ಆಧರಿಸಿ ರಾಜ್ಯಗಳಿಗೆ ಅನುದಾನ ನೀಡಲಾಗುತ್ತಿದೆ, ಜಿಎಸ್‌ಸ್ಟಿ ಅದರಲ್ಲೂ ರಾಜ್ಯಗಳ ಪಾಲಿನ ಜಿಎಸ್ಟಿಯನ್ನು ನೂರಕ್ಕೆ ನೂರರಷ್ಟು ರಾಜ್ಯಗಳಿಗೆ ನೀಡಲಾಗುತ್ತಿದೆ. ಆಯೋಗದ ಶಿಫಾರಸ್ಸು ಉಲ್ಲಂಘಿಸಿ ರಾಜ್ಯಗಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಲೋಕಸಭೆಯಲ್ಲಿ ಹೇಳಿದ್ದಾರೆ.

ತೆರಿಗೆ ಅನ್ಯಾಯ ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಭಟನೆಯನ್ನು ಉಲ್ಲೇಖಿಸಿದ ವಿರೋಧ ಪಕ್ಷದ ನಾಯಕ ಅಧಿರಂಜನ್ ಚೌಧರಿ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವು ರಾಜ್ಯಗಳು ಮಾಡುತ್ತಿರುವ ತೆರಿಗೆ ತಾರತಮ್ಯ ರಾಜಕೀಯವಾಗಿ ದೂಷಣೆಯಾಗಿದ್ದು ಇದು ಸತ್ಯವಲ್ಲ ಕೇಂದ್ರ ಹಣಕಾಸು ಆಯೋಗದ ಶಿಫಾರಸ್ಸು ಅನ್ವಯ ಅನುದಾನ ನೀಡುತ್ತಿದೆ.

ಹಣಕಾಸು ಆಯೋಗವು ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡುತ್ತದೆ ಇದು ರಾಜ್ಯ ಸರ್ಕಾರಗಳಿಗೂ ಗೊತ್ತು, ಈ ಸತ್ಯಾಂಶ ಬಿಟ್ಟು ರಾಜಕೀಯ ಆರೋಪ ಮಾಡಲಾಗುತ್ತಿದೆ ಎಂದರು. ಮುಂದುವರಿದು ಬೇಕಾಬಿಟ್ಟಿ ಹಣ ಖರ್ಚು ಮಾಡಿ ನಿಮ್ಮ ರಾಜ್ಯದ ಬಜೆಟ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಕೇಂದ್ರ ಸರ್ಕಾರವನ್ನು ದೂಷಿಸಬೇಡಿ ಎಂದು ಕಿಡಿಕಾರಿದರು.

ಯಾವುದೇ ಕೇಂದ್ರ ಹಣಕಾಸು ಸಚಿವರು ಹಣಕಾಸು ಆಯೋಗದ ಶಿಫಾರಸುಗಳೊಂದಿಗೆ ಆಟವಾಡಲು ಸಾಧ್ಯವಿಲ್ಲ “ನನಗೆ ಈ ರಾಜ್ಯ ಇಷ್ಟವಿಲ್ಲ, ತೆರಿಗೆ ಮರುವ ಪಾವತಿಯನ್ನು ನಿಲ್ಲಿಸಿ” ಎಂದು ಹೇಳಲು ಯಾವುದೇ ಹಣಕಾಸು ಸಚಿವರಿಗೆ ಅಧಿಕಾರ ಇಲ್ಲ, ಸಚಿವರು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ, ಈ ವ್ಯವಸ್ಥಡ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅಧಿರಂಜನ್ ಚೌಧರಿ, ಕರ್ನಾಟಕದ ಬಗ್ಗೆ ಕೇಂದ್ರದ ವಿವೇಚನಾರಹಿತ ಮತ್ತು ನಿರಂಕುಶ ವರ್ತನೆಯ ಹಿಂದಿನ ಕಾರಣವನ್ನು ಸೀತಾರಾಮನ್ ಅವರಿಗೆ ಕೇಳಿದರು.
“ಕೆಲವು ತಿಂಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲವಾದ್ದರಿಂದ ಕರ್ನಾಟಕ ರಾಜ್ಯ ಸರ್ಕಾರವು ನ್ಯಾಯಸಮ್ಮತವಾದ ಬಾಕಿಯನ್ನು ಪಡೆಯುವುದರಿಂದ ವಂಚಿತವಾಗಿದೆಯೇ ಎಂದು ನಾನು ತಿಳಿಯಲು ಬಯಸುತ್ತೇನೆ ಎಂದಿದ್ದರು.

Previous Post
ವಿಶ್ವಾಸಮತ ಗೆದ್ದ ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೆನ್
Next Post
ರಾಜ್ಯಸಭೆಗೆ ದೆಹಲಿಯಲ್ಲಿ ಮಾಜಿ ಸಚಿವ ವಿ ಸೋಮಣ್ಣ ಲಾಬಿ

Recent News